alex Certify ಖ್ಯಾತ ಗಾಯಕನ ವಿರುದ್ಧ ಅತ್ಯಾಚಾರದ ಆರೋಪ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಖ್ಯಾತ ಗಾಯಕನ ವಿರುದ್ಧ ಅತ್ಯಾಚಾರದ ಆರೋಪ..!

ಕಲಾವಿದೆಯನ್ನು ನೌಕೆಗೆ ಬರುವಂತೆ ಆಹ್ವಾನ ನೀಡಿ, ಅಲ್ಲಿ ಮತ್ತು ಬರುವ ಔಷಧಿ ಕುಡಿಸಿ ಅತ್ಯಾಚಾರ ನಡೆಸಲಾಗಿದೆ ಎಂದು ಸಂತ್ರಸ್ತ ಮಹಿಳೆ, ಖ್ಯಾತ ಗಾಯಕ ಕ್ರಿಸ್ ಬ್ರೌನ್ ವಿರುದ್ಧ ಆರೋಪ ಮಾಡಿದ್ದಾರೆ.

ಕ್ರಿಸ್ ಬ್ರೌನ್ ಕ್ಯಾಲಿಪೋರ್ನಿಯಾದ ಖ್ಯಾತ ಗಾಯಕರಾಗಿದ್ದು, ಅವರ ವಿರುದ್ಧ ಈ ಹಿಂದೆ ಸಹ ಗಾಯಕಿ ರಿಹಾನ್ನಾ ಹಾಗೂ ತನ್ನ ಗೆಳತಿಯ ಮೇಲೆ ಹಲ್ಲೆ ಮಾಡಿದ್ದರು ಎಂಬ ಆರೋಪ ಕೂಡ ಕೇಳಿ ಬಂದಿದೆ.

ಆರೋಪ ಮಾಡಿರುವ ಕಲಾವಿದೆ ಕೂಡ ಖ್ಯಾತರಾಗಿದ್ದಾರೆ. ಈಗಾಗಲೇ ಅವರು ಕ್ರಿಸ್ ಬ್ರೌನ್ ವಿರುದ್ಧ ದೂರು ದಾಖಲಿಸಿದ್ದಾರೆ. ಅಲ್ಲದೇ, ಅವರಿಂದ 20 ಮಿಲಿಯನ್ ಡಾಲರ್ ಪರಿಹಾರ ನೀಡುವಂತೆ ಕೇಳಿದ್ದಾರೆ.

ಸಂತ್ರಸ್ತ ಕಲಾವಿದೆ ಜೇನ್ ಡೋ ಅವರು ಮಾಡೆಲ್, ನೃತ್ಯ ಸಂಯೋಜಕಿ ಹಾಗೂ ನರ್ತಕಿಯಾಗಿದ್ದಾರೆ. ಪ್ಲೋರಿಡಾದ ವಿಹಾರ ನೌಕೆಗೆ ಬರುವಂತೆ ಗಾಯಕ ಆಹ್ವಾನ ನೀಡಿ, ಅಲ್ಲಿ ಮತ್ತು ಬರುವ ಔಷಧಿ ನೀಡಿ ವಿರೋಧದ ಮಧ್ಯೆಯೂ ಅತ್ಯಾಚಾರ ನಡೆಸಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ಆದರೆ, ಅವರ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ಗಾಯಕ ಮಾತ್ರ ಅಸತ್ಯ ಸೂಚಿಸುವ ನೀಲಿ ಕ್ಯಾಪ್ ಎಮೋಜಿ ಪೋಸ್ಟ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...