alex Certify ಪ್ರಜ್ಞೆ ತಪ್ಪಿ ಬಿದ್ದಿದ್ದ ಯುವಕನ ಜೀವ ಉಳಿಸಿದ ʼಆಪಲ್ ವಾಚ್ʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಜ್ಞೆ ತಪ್ಪಿ ಬಿದ್ದಿದ್ದ ಯುವಕನ ಜೀವ ಉಳಿಸಿದ ʼಆಪಲ್ ವಾಚ್ʼ

ಅಫಘಾತವೊಂದರಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದ ಸಿಂಗಪುರದ ಯುವಕನೊಬ್ಬನ ಪ್ರಾಣವನ್ನು ಆತನ ಕೈಯಲ್ಲಿದ್ದ ಆಪಲ್ ವಾಚ್‌ ರಕ್ಷಿಸಿದೆ.

ಮೊಹಮ್ಮದ್ ಫಿತ್ರಿ ಹೆಸರಿನ 24 ವರ್ಷದ ಈ ಯುವಕ ವ್ಯಾನ್ ಒಂದು ಗುದ್ದಿದ ಕಾರಣ ಪ್ರಜ್ಞೆ ತಪ್ಪಿ ಬಿದ್ದಿದ್ದ. ಆ ರಸ್ತೆಯಲ್ಲಿ ಜನಸಂಚಾರ ತೀರಾ ವಿರಳವಾಗಿತ್ತು. ಆದರೆ ಫಿತ್ರಿ ಕೈಯಲ್ಲಿದ್ದ ಆಪಲ್ ಸೀರೀಸ್ 4 ಕೈಗಾಡಿಯಾರದಲ್ಲಿರುವ ಕುಸಿತ ಪತ್ತೆ ಫೀಚರ್‌‌ನಿಂದಾಗಿ ಇಸಿಜಿ ಟ್ರಾಕರ್‌ ಜೊತೆಗೆ ಕೆಲಸ ಮಾಡಿ ತುರ್ತು ಕರೆ ಮೂಲಕ ಜೀವರಕ್ಷಕರನ್ನು ಅಲರ್ಟ್ ಮಾಡಿದೆ.

BIG NEWS: ನಟಿ ಸೌಜನ್ಯ ಆತ್ಮಹತ್ಯೆ ಪ್ರಕರಣ; ಪಿಎ ಮಹೇಶ್ ವಿರುದ್ಧ FIR ದಾಖಲು

ತುರ್ತು ಸೇವೆಗಳು ಹಾಗೂ ಫಿತ್ರಿಯ ಸಂಪರ್ಕಗಳಿಗೆ ಅಲರ್ಟ್‌ಅನ್ನು ಆತನ ಆಪಲ್ ವಾಚ್‌ ರವಾನೆ ಮಾಡಿದೆ. ಕುಸಿತದ ಅಲರ್ಟ್ ಹೊರಡಿಸಿದ ಕೆಲವು ಸೆಕೆಂಡ್‌ಗಳ ಒಳಗೆ ಬಳಕೆದಾರನಿಂದ ಯಾವುದೇ ಪ್ರತಿಕ್ರಿಯೆ ಬಾರದೇ ಇದ್ದಲ್ಲಿ ಈ ವಾಚ್‌ ತನ್ನಿಂತಾನೇ ಎಸ್‌ಓಎಸ್ ಕಳುಹಿಸುತ್ತದೆ.

ಆಪಲ್‌ನ ಸೀರೀಸ್‌ 4ರ ನಂತರ ಬರುವ ಎಲ್ಲಾ ವಾಚ್‌ಗಳಲ್ಲೂ ಈ ಫೀಚರ್‌ ಇದೆ. ಬಳಕೆದಾರರ ಇಸಿಜಿ ದಾಖಲಿಸಿಕೊಳ್ಳುವ ಈ ಗಡಿಯಾರ ತುರ್ತು ಪರಿಸ್ಥಿತಿಯಲ್ಲಿ ಅಲರ್ಟ್ ಸಂದೇಶಗಳನ್ನು ತುರ್ತು ಸೇವಾದಾರರಿಗೆ ರವಾನೆ ಮಾಡುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...