alex Certify ಹೃತಿಕ್​ ರೋಷನ್​ ಜೊಮಾಟೊ ಜಾಹೀರಾತಿಗೆ ವಿರೋಧ ವ್ಯಕ್ತವಾದ ಬಳಿಕ ಕ್ಷಮೆಯಾಚನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೃತಿಕ್​ ರೋಷನ್​ ಜೊಮಾಟೊ ಜಾಹೀರಾತಿಗೆ ವಿರೋಧ ವ್ಯಕ್ತವಾದ ಬಳಿಕ ಕ್ಷಮೆಯಾಚನೆ

ತನ್ನ ಜಾಹೀರಾತಿನಲ್ಲಿ ಪ್ರಸಿದ್ಧ ಮಹಾಕಾಲ್​ ದೇವಾಲಯವನ್ನು ಅಪಹಾಸ್ಯ ಮಾಡಲಾಗಿದೆ ಎಂಬ ಕಾರಣಕ್ಕೆ ತೀವ್ರ ಆಕ್ಷೇಪ ಬಂದ ಹಿನ್ನೆಲೆಯಲ್ಲಿ ಜೊಮಾಟೊ ಕ್ಷಮೆಯಾಚಿಸಿದೆ.

ಹೃತಿಕ್​ ರೋಷನ್​ ಅವರು ಪ್ರಮುಖವಾಗಿ ಕಾಣಿಸುವ ಇತ್ತೀಚಿನ ಜಾಹೀರಾತಿನಲ್ಲಿ ಹಿಂದೂ ಭಾವನೆಗಳನ್ನು ಘಾಸಿಗೊಳಿಸಿದೆ ಎಂದು ಚರ್ಚೆಯಾಗಿತ್ತು.

“ಥಾಲಿ ಖಾನೆ ಕಾ ಮನ್​ ಥಾ, ಮಹಾಕಾಲ್​ ಸೇ ಮಂಗಾ ಲಿಯಾ (ಊಟದ ತಟ್ಟೆಯನ್ನು ಹೊಂದಲು ಬಯಸಿದ್ದೆ, ಆದ್ದರಿಂದ ನಾನು ಅದನ್ನು ಮಹಾಕಾಲ್​ನಿಂದ ಆರ್ಡರ್​ ಮಾಡಿದ್ದೇನೆ)” ಎಂದು ರೋಷನ್​ ಹೇಳುವುದನ್ನು ಜಾಹೀರಾತಿನಲ್ಲಿ ಕೇಳಬಹುದು.

ಮಹಾಕಾಲ್​ ದೇವಸ್ಥಾನ ದೇಶದ 12 ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ. ಇದು ಪ್ರಪಂಚದಾದ್ಯಂತದ ಭಕ್ತರನ್ನು ಆಕರ್ಷಿಸುತ್ತದೆ.

ಸಾಮಾಜಿಕ ಮಾಧ್ಯಮದಲ್ಲಿ ಜೊಮಾಟೋ ಅಪ್ಲಿಕೇಶನ್​ ಎದುರಿಸಿದ ಭಾರೀ ಹಿನ್ನಡೆಯ ನಂತರ, ಕ್ಷಮೆಯಾಚಿಸಿ ಸ್ಪಷ್ಟಿಕರಣವನ್ನು ನೀಡಿದೆ. ಮಹಾಕಾಲ್​ ದೇವಸ್ಥಾನದ ಅರ್ಚಕರಿಂದಲೂ ದೂರುಗಳು ಸಹ ಬಂದಿದ್ದವು.

ಕ್ಷಮಾಪಣೆಯಲ್ಲಿ, ಸಂಸ್ಥೆಯು ಉಜ್ಜಯಿನಿಯ ಜನರ ಭಾವನೆಗಳನ್ನು ಗೌರವಿಸುತ್ತದೆ ಎಂದು ಉಲ್ಲೇಖಿಸಿದೆ. ಆ ಜಾಹೀರಾತು ಇನ್ನು ಮುಂದೆ ಬಳಸುವುದಿಲ್ಲ ಎಂದು ಸ್ಪಷ್ಟನೆ ನೀಡಿದೆ.

“ನಾವು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇವೆ, ನಂಬಿಕೆ, ಭಾವನೆಗಳನ್ನು ನೋಯಿಸುವ ಉದ್ದೇಶವಿಲ್ಲʼʼ ಎಂದು ಜೊಮಾಟೊ ಹೇಳಿಕೊಂಡಿದೆ.

ಈ ಎಲ್ಲಾ ಪ್ರಯತ್ನಗಳ ಹೊರತಾಗಿಯೂ, ಜನರ ಕೋಪವು ಕಡಿಮೆಯಾಗುತ್ತಿಲ್ಲ. ಜೊಮಾಟೋ ಅಪ್ಲಿಕೇಶನ್​ ಇನ್ನೂ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆ ಎದುರಿಸುತ್ತಿದೆ.

ಮಹಾಕಾಲೇಶ್ವರ ದೇವಸ್ಥಾನದ ಹಿಂದೂ ಸಂತರು ಬಾಲಿವುಡ್​ ಸೂಪರ್​ಸ್ಟಾರ್​ ಹೃತಿಕ್​ ರೋಷನ್​ ಅವರನ್ನು ಒಳಗೊಂಡಿರುವ ಜಾಹೀರಾತನ್ನು ಖಂಡಿಸಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...