alex Certify ಬೆಲೆ ಏರಿಕೆ ಮಾಡಿ ಜನ ಲಸಿಕೆ ಪಡೆಯದಂತೆ ಮಾಡಿದ ಮೋದಿ; ಅಡಗಿ ಕುಳಿತ ಬಿಜೆಪಿ ಸಂಸದರು- ಟೀಕಾ ಉತ್ಸವ್ ನಂತಹ ಬಡಾಯಿ ಬಿಟ್ಹಾಕಿ ಉಚಿತವಾಗಿ ಲಸಿಕೆ ನೀಡಿ: ಸಿದ್ಧರಾಮಯ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಲೆ ಏರಿಕೆ ಮಾಡಿ ಜನ ಲಸಿಕೆ ಪಡೆಯದಂತೆ ಮಾಡಿದ ಮೋದಿ; ಅಡಗಿ ಕುಳಿತ ಬಿಜೆಪಿ ಸಂಸದರು- ಟೀಕಾ ಉತ್ಸವ್ ನಂತಹ ಬಡಾಯಿ ಬಿಟ್ಹಾಕಿ ಉಚಿತವಾಗಿ ಲಸಿಕೆ ನೀಡಿ: ಸಿದ್ಧರಾಮಯ್ಯ

ಲಸಿಕೆ ಪಡೆಯುವುದನ್ನು ಪ್ರೋತ್ಸಾಹಿಸ ಬೇಕಾದ ಕೇಂದ್ರ ಬಿಜೆಪಿ ಸರ್ಕಾರ ಅದರ ಬೆಲೆ ಏರಿಕೆ ಮಾಡಿ ಜನತೆ ಲಸಿಕೆ ಪಡೆಯದಂತೆ ಮಾಡಲು ಹೊರಟಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಪ್ರಧಾನಿ ಮೋದಿ ಅವರೇ ‘ಟೀಕಾ ಉತ್ಸವ್’ ನಂತಹ ಬಾಯಿ ಬಡಾಯಿಯನ್ನು ಬಿಟ್ಟಾಕಿ. ಮೊದಲು ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡಿ ಎಂದು ಒತ್ತಾಯಿಸಿದ್ದಾರೆ.

ಔಷಧ, ಆಮ್ಲಜನಕ, ವೆಂಟಿಲೇಟರ್ ಕೊಡಿ ಎಂದು ಪ್ರಧಾನಿಯವರನ್ನು ಬೇಡುತ್ತಿರುವ ಮುಖ್ಯಮಂತ್ರಿಯವರನ್ನು ಕಂಡಾಗ ಕನಿಕರ ಮೂಡುತ್ತಿದೆ. ರಾಜ್ಯದ 25 ಬಿಜೆಪಿ ಸಂಸದರು ಎಲ್ಲಿ ಅಡಗಿ ಕುಳಿತಿದ್ದಾರೆ. ಅವರನ್ನು ದೆಹಲಿಗೆ ಅಟ್ಟಿ ರಾಜ್ಯದ ನ್ಯಾಯಬದ್ಧ ಪಾಲಿಗಾಗಿ ಪ್ರಧಾನಿ ಮನೆ ಮುಂದೆ ಧರಣಿ ಕೂರಿಸಿ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...