alex Certify ನಂಬಿಕೆ ದ್ರೋಹಿಗಳ ಋಣ ತೀರಿಸಲು CM ಸಿದ್ದರಾಮಯ್ಯ ನಿರ್ಧರಿಸಿದ್ದಾರೆ : ಸಿ.ಟಿ.ರವಿ ವಾಗ್ದಾಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಂಬಿಕೆ ದ್ರೋಹಿಗಳ ಋಣ ತೀರಿಸಲು CM ಸಿದ್ದರಾಮಯ್ಯ ನಿರ್ಧರಿಸಿದ್ದಾರೆ : ಸಿ.ಟಿ.ರವಿ ವಾಗ್ದಾಳಿ

ಬೆಂಗಳೂರು : ನಂಬಿಕೆ ದ್ರೋಹಿಗಳ ಋಣ ತೀರಿಸಲು ಸಿಎಂ ಸಿದ್ದರಾಮಯ್ಯ ನಿರ್ಧರಿಸಿದ್ದಾರೆ ಎಂದು ಸಿ.ಟಿ.ರವಿ ವಾಗ್ದಾಳಿ ನಡೆಸಿದರು.

ಸುದ್ದಿಗಾರರ ಜೊತೆ ಮಾತನಾಡಿದ ಮಾಜಿ ಶಾಸಕ ಸಿಟಿ ರವಿ ಸಿಎಂ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದರು.

ಸಿಎಂ ಸಿದ್ದರಾಮಯ್ಯನವರೇ ನಿಮಗೆ ಮಾನ, ಮರ್ಯಾದೆ ಇದೆಯಾ? ರಾಜರ ಅರಮನೆ ಹಾಳು ಮಾಡಿದವರ ಋಣ ತೀರಿಸಬೇಕು ಅಂತೀರಲ್ಲಾ? ಯಾವತ್ತೋ ಎಗರಿಹೋದ ಟಿಪ್ಪುವಿನ ಖಡ್ಗ ಇಟ್ಟುಕೊಂಡು ಓಡಾಡುವ ನಿಮಗೆ ಇಷ್ಟು ಇರಬೇಕಾದ್ರೆ? ಟಿಪ್ಪು ಹತ್ಯೆ ಮಾಡಿದ ಉರಿಗೌಡ, ನಂಜೇಗೌಡನ ವಂಶಸ್ಥರು ನಾವು. ನಮಗೆ ಇನ್ನೆಷ್ಟು ಇರಬೇಡಾ? ಎಂದು ಮಾಜಿ ಶಾಸಕ ಸಿ.ಟಿ.ರವಿ ಸಿಎಂ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದರು.
ಶಿವ, ಪಾರ್ವತಿ ಕೈಯಲ್ಲಿ ಯಾವ ವಿಗ್ರಹ ಉಂಟು..? ಎಂದು ನಿಮಗೆ ಗೊತ್ತಾ..? ಗಣೇಶ ವಿಸರ್ಜನೆಗೆ ನೂರೆಂಟು ಕಂಡೀಷನ್ ಹಾಕುತ್ತೀರಿ..? ಈದ್ ಮಿಲಾದ್ ಮೆರವಣಿಗೆಗೆ ಹೇಗೆ ಪರ್ಮಿಷನ್ ಕೊಟ್ರಿ..? ನೀವು ಒಳ್ಳೆಯವರಾದರೆ ನಮ್ಮ ಎದೆಯಲ್ಲಿ ಜಾಗ ಕೊಡುತ್ತೇವೆ ಎಂದು ಸಿಟಿ ರವಿ ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...