alex Certify ಮಗುವಿನ ಫೋಟೋ ಶೇರ್​ ಮಾಡಿ ಹೆಸರು ರಿವೀಲ್​ ಮಾಡಿದ ಶ್ರೇಯಾ ಘೋಷಾಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಗುವಿನ ಫೋಟೋ ಶೇರ್​ ಮಾಡಿ ಹೆಸರು ರಿವೀಲ್​ ಮಾಡಿದ ಶ್ರೇಯಾ ಘೋಷಾಲ್

ಖ್ಯಾತ ಗಾಯಕಿ ಶ್ರೇಯಾ ಘೋಷಾಲ್​​ ಇಂದು ತಮ್ಮ ಮಗುವಿನ ಫೋಟೋವನ್ನ ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿದ್ದು, ಮಗುವಿನ ಹೆಸರನ್ನೂ ಅಭಿಮಾನಗಳ ಎದುರು ರಿವೀಲ್​ ಮಾಡಿದ್ದಾರೆ.

ಶ್ರೇಯಾ ಘೋಷಾಲ್​ ಹಾಗೂ ಅವರ ಪತಿ ಶೀಲಾದಿತ್ಯ ಮಗುವನ್ನ ಹಿಡಿದುಕೊಂಡಿರುವ ಫೋಟೋವನ್ನ ಹಂಚಿಕೊಂಡಿರುವ ಶ್ರೇಯಾ ಮಗುವಿಗೆ ದೇವಯಾನ್​ ಮುಖ್ಯೋಪಾಧ್ಯಾಯ ಎಂದು ಹೆಸರಿಟ್ಟಿರೋದಾಗಿ ಹೇಳಿದ್ದಾರೆ.

ಶ್ರೇಯಾ ಘೋಷಾಲ್​ ಹಂಚಿಕೊಂಡಿರುವ ಈ ಫೋಟೋದಲ್ಲಿ ಮಗುವಿನ ಮುಖ ಗೋಚರವಾಗುತ್ತಿಲ್ಲ. ಶ್ರೇಯಾ ಮಗುವಿನ ಹೆಸರು ರಿವೀಲ್​ ಮಾಡುತ್ತಿದ್ದಂತೆಯೇ ಅನೇಕರು ಹೆಸರಿನ ಅರ್ಥಕ್ಕಾಗಿ ಹುಡುಕಾಟ ನಡೆಸಿದ್ದಾರೆ. ದೇವಯಾನ್​ ಎಂದರೆ ದೇವರುಗಳ ರಥ ಅಥವಾ ದೇವರುಗಳಿಗೆ ಸೇವೆ ಮಾಡುವುದು ಎಂಬರ್ಥವಿದೆ.

ಫೋಟೋ ಶೇರ್​ ಮಾಡಿರುವ ಶ್ರೇಯಾ ಘೋಷಾಲ್, ನಿಮಗೆಲ್ಲಾ ದೇವಯಾನ್​ ಮುಖ್ಯೋಪಾಧ್ಯಾಯನನ್ನ ಪರಿಚಯಿಸುತ್ತಿದ್ದೇನೆ. ಮೇ 22ರಂದು ನಮ್ಮ ಜೀವನಕ್ಕೆ ಎಂಟ್ರಿ ಕೊಟ್ಟ ಈತ ನಮ್ಮ ಜೀವನವನ್ನೇ ಬದಲಾಯಿಸಿಬಿಟ್ಟಿದ್ದಾನೆ. ಈತ ಹುಟ್ಟಿದ ದಿನದಿಂದಲೇ ಪ್ರೀತಿ ಹಾಗೂ ಮಮತೆಯನ್ನ ನಮ್ಮ ಹೃದಯದಲ್ಲಿ ತುಂಬಿಬಿಟ್ಟಿದ್ದಾನೆ. ಅದನ್ನ ಒಬ್ಬ ತಂದೆ – ತಾಯಿ ಸ್ಥಾನದಲ್ಲಿದ್ದವರು ಮಾತ್ರ ಅನುಭವಿಸೋಕೆ ಸಾಧ್ಯ ಎಂದು ಶೀರ್ಷಿಕೆ ನೀಡಿದ್ದಾರೆ .

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...