alex Certify ಶ್ರೇಯಾ ಘೋಷಾಲ್ ಹಾಡಿಗೆ ಹೆಜ್ಜೆ ಹಾಕಿದ ಸುಧಾ ಮೂರ್ತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶ್ರೇಯಾ ಘೋಷಾಲ್ ಹಾಡಿಗೆ ಹೆಜ್ಜೆ ಹಾಕಿದ ಸುಧಾ ಮೂರ್ತಿ

ಬೆಂಗಳೂರು: ಇನ್​ಫೋಸಿಸ್​ ಸುಧಾ ಮೂರ್ತಿ ಅವರು ತಮ್ಮ ಸ್ಫೂರ್ತಿದಾಯಕ ಮಾತುಗಳಿಂದ ಮತ್ತು ತಾವು ಮಾಡುವ ತೆರೆಮರೆಯ ಕಾಯಕದಿಂದಲೇ ಸುದ್ದಿಯಲ್ಲಿರುತ್ತಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಇವರ ನೃತ್ಯವೊಂದು ವೈರಲ್​ ಆಗಿದೆ.

ಖ್ಯಾತ ಗಾಯಕಿ ಶ್ರೇಯಾ ಘೋಷಾಲ್ ಅವರ ಹಾಡಿಗೆ ಸುಧಾ ಮೂರ್ತಿ ಅವರೂ ಡ್ಯಾನ್ಸ್ ಮಾಡಿರುವ ವಿಡಿಯೋ ಇದಾಗಿದೆ. ಇದರ ವಿಡಿಯೋ ವೈರಲ್​ ಆಗಿದ್ದು, ನೆಟ್ಟಿಗರು ಖುಷಿಪಡುತ್ತಿದ್ದಾರೆ.

ಫ್ಯಾನ್‌ಪೇಜ್‌ಗಳ ಗುಂಪಿನಲ್ಲಿ ಹಂಚಿಕೊಂಡಿರುವ ಹೊಸ ವಿಡಿಯೋದಲ್ಲಿ ಶ್ರೇಯಾ ಹಾಡುತ್ತಿರುವಾಗ ಸುಧಾ ಮೂರ್ತಿ ಅವರು ಮಹಿಳೆಯರ ಗುಂಪಿನೊಂದಿಗೆ ನೃತ್ಯ ಮಾಡುವುದನ್ನು ನೋಡಬಹುದು.

ಈ ಕಾರ್ಯಕ್ರಮ ನಡೆದಿದ್ದು ಬೆಂಗಳೂರಿನಲ್ಲಿ. ಇನ್ಫೋಸಿಸ್‌ನ 40 ನೇ ವಾರ್ಷಿಕೋತ್ಸವದ ಸಂಭ್ರಮಾಚರಣೆಯಲ್ಲಿ ಶ್ರೇಯಾ ಘೋಷಾಲ್ ಅವರು ಮಣಿರತ್ನಂ ಅವರ ಗುರು ಚಿತ್ರದ ಬರ್ಸೋ ರೇ ಹಾಡನ್ನು ಹಾಡಿದರು. ಇನ್ನುಳಿದವರೂ ಸೇರಿ ಹಾಡುತ್ತಿದ್ದಂತೆ ಸುಧಾ ಮೂರ್ತಿ ಹಾಡಿಕೊಂಡು ಹೆಜ್ಜೆ ಹಾಕಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...