alex Certify ರಾಜಸ್ಥಾನದಲ್ಲೂ ಶ್ರದ್ಧಾ ಮಾದರಿ ಹತ್ಯೆ: ಆಂಟಿ ಹತ್ಯೆಗೈದು ದೇಹ ಕತ್ತರಿಸಿ ಹೈವೇಯಲ್ಲಿ ಎಸೆದ ಕಿಡಿಗೇಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜಸ್ಥಾನದಲ್ಲೂ ಶ್ರದ್ಧಾ ಮಾದರಿ ಹತ್ಯೆ: ಆಂಟಿ ಹತ್ಯೆಗೈದು ದೇಹ ಕತ್ತರಿಸಿ ಹೈವೇಯಲ್ಲಿ ಎಸೆದ ಕಿಡಿಗೇಡಿ

ದೆಹಲಿಯಲ್ಲಿ ತನ್ನ ಸಂಗಾತಿಯಿಂದಲೇ ಹತ್ಯೆಗೀಡಾದ ಶ್ರದ್ಧಾ ವಾಕರ್ ಭೀಕರ ಹತ್ಯೆ ದೇಶಾದ್ಯಂತ ಸಂಚಲನ ಮೂಡಿಸಿದ್ದ ರೀತಿಯಲ್ಲೇ ರಾಜಸ್ಥಾನದ ಜೈಪುರದಿಂದ ಅಂತಹುದೇ ಪ್ರಕರಣ ಬೆಳಕಿಗೆ ಬಂದಿದೆ.

ಸೋದರಳಿಯನೊಬ್ಬ ತನ್ನ ವಿಧವೆ ಚಿಕ್ಕಮ್ಮನನ್ನು ಕೊಂದು ಅವಳ ದೇಹವನ್ನು ಮಾರ್ಬಲ್ ಕಟರ್ ಯಂತ್ರದಿಂದ 10 ತುಂಡುಗಳಾಗಿ ಕತ್ತರಿಸಿ ಕಾಡಿನಲ್ಲಿ ವಿವಿಧ ಸ್ಥಳಗಳಲ್ಲಿ ಎಸೆದಿದ್ದಾನೆ.

ಡಿಸೆಂಬರ್ 11 ರಂದು, ಜೈಪುರದ ಅನುಜ್ ತನ್ನ ಚಿಕ್ಕಮ್ಮ ಕಾಣೆಯಾಗಿದ್ದಾರೆ ಎಂದು ದೂರು ನೀಡಿದ್ದು, ಆತನ ಹೇಳಿಕೆಗಳಲ್ಲಿ ವಿರೋಧಾಭಾಸಗಳನ್ನು ಕಂಡುಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ತನಿಖೆಯ ಸಮಯದಲ್ಲಿ, ಅವನು ತನ್ನ ಚಿಕ್ಕಮ್ಮನನ್ನು ಸುತ್ತಿಗೆಯಿಂದ ಕೊಂದು ಚಾಕು ಮತ್ತು ಮಾರ್ಬಲ್ ಕಟ್ಟರ್ ಬಳಸಿ ಆಕೆಯ ದೇಹವನ್ನು ತುಂಡುಗಳಾಗಿ ಕತ್ತರಿಸಿದ್ದಾನೆ ಎಂದು ಗೊತ್ತಾಗಿದೆ.

ಪೊಲೀಸರು ಆರೋಪಿ ಅನುಜ್ ಶರ್ಮಾ ಅಲಿಯಾಸ್ ಅಚಿಂತ್ಯ ಗೋವಿಂದ್‌ ದಾಸ್‌ನನ್ನು ಬಂಧಿಸಿದ್ದಾರೆ. ಹೆದ್ದಾರಿ ಬದಿಯಲ್ಲಿ, ಕಾಡಿನಲ್ಲಿ ಕೆಲವು ದೇಹದ ಭಾಗಗಳನ್ನು ಸಹ ವಶಪಡಿಸಿಕೊಂಡಿದ್ದಾರೆ. ಮಹಿಳೆಯ ದೇಹದ ಇತರ ಭಾಗಗಳಿಗಾಗಿ ಪೊಲೀಸರು ಇನ್ನೂ ಹುಡುಕಾಟ ನಡೆಸುತ್ತಿದ್ದಾರೆ.

ಜೈಪುರದ ವಿದ್ಯಾಧರನಗರ ಪ್ರದೇಶದ ಲಾಲ್ಪುರಿಯಾ ಅಪಾರ್ಟ್‌ಮೆಂಟ್ ಸೆಕ್ಟರ್-2ರಲ್ಲಿ ಈ ಘಟನೆ ನಡೆದಿದ್ದು, ಡಿಸೆಂಬರ್ 11 ರಂದು ಅನುಜ್ ತನ್ನ ಚಿಕ್ಕಮ್ಮ ಸರೋಜ್ ಶರ್ಮಾ(64) ಅವರನ್ನು ಸುತ್ತಿಗೆಯಿಂದ ತಲೆಗೆ ಹೊಡೆದು ಕೊಂದಿದ್ದಾನೆ. ನಂತರ ಕಾಡಿನಲ್ಲಿ ವಿಲೇವಾರಿ ಮಾಡುವ ಮೊದಲು ತನ್ನ ಸ್ನಾನಗೃಹದಲ್ಲಿ ಮಾರ್ಬಲ್ ಕಟ್ಟರ್ ಯಂತ್ರವನ್ನು ಬಳಸಿ ದೇಹವನ್ನು 10 ತುಂಡುಗಳಾಗಿ ಕತ್ತರಿಸಿದ್ದಾನೆ.

ಅನುಮಾನದಿಂದ ಪಾರಾಗಲು ಆತನೇ ಠಾಣೆಗೆ ಆಗಮಿಸಿ ಚಿಕ್ಕಮ್ಮನ ನಾಪತ್ತೆ ದೂರು ದಾಖಲಿಸಿದ್ದಾನೆ. ಅಡುಗೆ ಮನೆಯಲ್ಲಿದ್ದ ರಕ್ತದ ಕಲೆಗಳನ್ನು ತೊಳೆಯುತ್ತಿದ್ದಾಗ ಅನುಜ್ ಸಿಕ್ಕಿಬಿದ್ದಿದ್ದಾನೆ. ನಂತರ ಮೃತರ ಪುತ್ರಿ ಪೂಜಾ ಅನುಜ್ ವಿರುದ್ಧ ಪ್ರಕರಣ ದಾಖಲಿಸಿದ್ದು, ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ ಎಂದು ಉತ್ತರ ವಿಭಾಗದ ಡಿಸಿಪಿ ಪ್ಯಾರಿಸ್ ದೇಶಮುಖ್ ಮಾಹಿತಿ ನೀಡಿದ್ದಾರೆ.

ಮೃತದೇಹವನ್ನು ಕತ್ತರಿಸಿ ವಿಲೇವಾರಿ ಮಾಡಲು ಸಿಕಾರ್ ರಸ್ತೆಯಲ್ಲಿರುವ ಹಾರ್ಡ್‌ವೇರ್ ಅಂಗಡಿಯಿಂದ ಮಾರ್ಬಲ್ ಕಟ್ಟರ್ ಯಂತ್ರವನ್ನು ತಂದಿದ್ದ ಆತ ದೇಹವನ್ನು 10 ತುಂಡುಗಳಾಗಿ ಕತ್ತರಿಸಿ ಸೂಟ್‌ಕೇಸ್ ಮತ್ತು ಬಕೆಟ್‌ನಲ್ಲಿ ತುಂಬಿ ಕಾಡಿನಲ್ಲಿ ದೆಹಲಿ ರಸ್ತೆಯ ಕಡೆಗೆ ಎಸೆದಿದ್ದಾನೆ. ಕೊಲೆಗೆ ಬಳಸಿದ್ದ ಶಸ್ತ್ರಾಸ್ತ್ರಗಳು ಮತ್ತು ಇತರ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮಹಿಳೆಯ ದೇಹದ ಇತರ ಭಾಗಗಳ ಪತ್ತೆಗೆ ಕಾಡಿನಲ್ಲಿ ಶೋಧ ನಡೆಸಲಾಗುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...