alex Certify SHOKCKING NEWS: ವೆಡ್ದಿಂಗ್ ಎನಿವರ್ಸರಿ ದಿನವೇ ಪತ್ನಿಯ ಬರ್ಬರ ಹತ್ಯೆ; ಬಚ್ಚಲು ಮನೆಯಲ್ಲಿ ಶವ ಹೂತಿಟ್ಟ ಕ್ರೂರಿ ಪತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOKCKING NEWS: ವೆಡ್ದಿಂಗ್ ಎನಿವರ್ಸರಿ ದಿನವೇ ಪತ್ನಿಯ ಬರ್ಬರ ಹತ್ಯೆ; ಬಚ್ಚಲು ಮನೆಯಲ್ಲಿ ಶವ ಹೂತಿಟ್ಟ ಕ್ರೂರಿ ಪತಿ

ಚಿತ್ರದುರ್ಗ: ಇದೆಂಥ ಘನಘೋರ ಕೃತ್ಯ. ವೆಡ್ಡಿಂಗ್ ಎನಿವರ್ಸರಿ ದಿನ ಪತ್ನಿ ನೂರಾರು ಕನಸಿನೊಂದಿಗೆ ಪತಿ ತರುವ ಗಿಫ್ಟ್ ಗಾಗಿ ಕಾಯುತ್ತಿದ್ದರೆ ಇಲ್ಲೊಬ್ಬ ಪತಿ ಮಹಾಶಯ ಮದುವೆ ವಾರ್ಷಿಕೋತ್ಸವದ ದಿನವೇ ಪತ್ನಿಯನ್ನು ಕೊಂದು ಬಚ್ಚಲು ಮನೆಯಲ್ಲಿ ಹೂತಿಟ್ಟ ಘಟನೆ ಬೆಳಕಿಗೆ ಬಂದಿದೆ.

ಚಿತ್ರದುರ್ಗದ ಕೊಣನೂರು ಗ್ರಾಮದಲ್ಲಿ ಇಂತದ್ದೊಂದು ಬರ್ಬರ ಕೊಲೆ ನಡೆದಿದ್ದು, ವಿವಾಹ ವಾರ್ಷಿಕೋತ್ಸವ ದಿನವೇ ಪತಿ, ಪತ್ನಿಯನ್ನು ಹತ್ಯೆಗೈದು ಶವವನ್ನು ಬಚ್ಚಲು ಮನೆಯಲ್ಲಿ ಹೂತಿಟ್ಟಿದ್ದಲ್ಲದೇ ಪತ್ನಿ ನಾಪತ್ತೆಯಾಗಿದ್ದಾಳೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮನೆ ಪರಿಶೀಲನೆ ನಡೆಸಿದಾಗ ಶವ ಹೂತಿಟ್ಟಿರುವುದು ಗೊತ್ತಾಗಿದೆ. ಅನುಮಾನಗೊಂಡ ಪೊಲೀಸರು ಪತಿ ನಾರಪ್ಪನನ್ನು ವಿಚಾರಿಸಿದ್ದಾರೆ. ಬಂಧನ ಭೀತಿಯಲ್ಲಿ ಆರೋಪಿ ನಾರಪ್ಪ ಇದೀಗ ಗ್ರಾಮ ಬಿಟ್ಟು ಪರಾರಿಯಾಗಿದ್ದು, ಆತನಿಗಾಗಿ ಶೋಧ ನಡೆಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...