alex Certify SHOCKING: ಬೆಳಗಿನ ಜಾವ ಪತಿ ಮರ್ಮಾಂಗ ಕತ್ತರಿಸಿ ಎಣ್ಣೆಯಲ್ಲಿ ಹುರಿದ ಪತ್ನಿ, ಬರ್ಬರ ಹತ್ಯೆ ಕಂಡು ಬೆಚ್ಚಿಬಿದ್ದ ಪೊಲೀಸರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING: ಬೆಳಗಿನ ಜಾವ ಪತಿ ಮರ್ಮಾಂಗ ಕತ್ತರಿಸಿ ಎಣ್ಣೆಯಲ್ಲಿ ಹುರಿದ ಪತ್ನಿ, ಬರ್ಬರ ಹತ್ಯೆ ಕಂಡು ಬೆಚ್ಚಿಬಿದ್ದ ಪೊಲೀಸರು

ರಿಯೋ ಡಿ ಜನೈರೋ: ಬ್ರೆಜಿಲ್ ನಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ 33 ವರ್ಷದ ಮಹಿಳೆಯೊಬ್ಬಳು ಗಂಡನ ಖಾಸಗಿ ಅಂಗವನ್ನು ಕತ್ತರಿಸಿ ಎಣ್ಣೆಯಲ್ಲಿ ಹಾಕಿ ಹುರಿದಿದ್ದಾಳೆ.

ಡಯಾನ ಕ್ರಿಸ್ಟಿನಾ ರೊಡ್ರಿಗಸ್ ಮಚಾದೊ ಎಂದು ಗುರುತಿಸಲಾದ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಪತಿ ಆಂಡ್ರೆ ಅವರೊಂದಿಗೆ ಗೊಂಕಲೋದಲ್ಲಿ ಕ್ರಿಸ್ಟಿನಾ ವಾಸವಾಗಿದ್ದು, ದಂಪತಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು.

ಆಂಡ್ರೆ ಕೊಲೆಯಾಗಿರುವ ಬಗ್ಗೆ ಮಾಹಿತಿ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ತೆರಳಿದ್ದಾರೆ. ಸ್ಥಳದಲ್ಲಿ ಅಂಡ್ರೆ ಮೃತದೇಹ ಬೆತ್ತಲಾಗಿ ಬಿದ್ದಿರುವುದು ಕಂಡುಬಂದಿದೆ. ಆತನ ದೇಹವನ್ನು ಚುಚ್ಚಿ ಗಾಯಗೊಳಿಸಿರುವುದು ಗೊತ್ತಾಗಿದೆ. ಮರ್ಮಾಂಗ ಕತ್ತರಿಸಿರುವುದು ಕಂಡು ಬಂದಿದ್ದು, ಕ್ರಿಸ್ಟಿನಾಳನ್ನು ವಶಕ್ಕೆ ಪಡೆಯಲಾಗಿದೆ.

10 ವರ್ಷಗಳಿಂದ ಅಂಡ್ರೆ ಮತ್ತು ಕ್ರಿಸ್ಟಿನಾ ಒಟ್ಟಿಗೆ ವಾಸವಾಗಿದ್ದರು. ದಂಪತಿಗೆ 8 ವರ್ಷದ ಮಗ ಮತ್ತು 5 ವರ್ಷದ ಮಗಳು ಇದ್ದಾಳೆ. ಎರಡು ವರ್ಷಗಳ ಹಿಂದೆ ಅವರು ಬೇರೆಯಾಗಿ ಮತ್ತೆ ಒಟ್ಟಿಗೆ ವಾಸವಾಗಿದ್ದರು. ದಂಪತಿ ಪಿಜ್ಜಾ ಶಾಪ್ ನಡೆಸುತ್ತಿದ್ದರು.

ದಂಪತಿ ನಡುವಿನ ಜಗಳ ವಿಕೋಪಕ್ಕೆ ತಿರುಗಿದ ವೇಳೆ ಕ್ರಿಸ್ಟಿನಾ ಇಂತಹ ಕೃತ್ಯವೆಸಗಿದ್ದಾಳೆ. ವಿಚಾರಣೆಯ ವೇಳೆ ಕ್ರಿಸ್ಟಿನಾ ನೀಡಿರುವ ಮಾಹಿತಿಯಂತೆ ಬೆಳಗಿನ ಜಾವ 4 ಗಂಟೆ ವರೆಗೂ ಜಗಳವಾಗಿದ್ದು, ಆಕ್ರೋಶದಿಂದ ಅಡುಗೆ ಮನೆಯಲ್ಲಿದ್ದ ಚಾಕು ತಂದ ಕ್ರಿಸ್ಟಿನಾ ಗಂಡನ ಶಿಶ್ನ ಕತ್ತರಿಸಿ ಸೋಯಾಬೀನ್ ಎಣ್ಣೆಯಲ್ಲಿ ಹುರಿಯಲು ಪ್ಯಾನ್‌ನಲ್ಲಿ ಹಾಕಿ ಬೇಯಿಸಿರುವುದು ಬಹಿರಂಗವಾಗಿದೆ. ಅಲ್ಲದೇ ಗಂಡನ ಮೃತದೇಹವನ್ನು ಚೂರು ಚೂರು ಮಾಡಲು ಬಯಸಿದ್ದಳು ಎನ್ನುವುದು ವಿಚಾರಣೆ ವೇಳೆ ಗೊತ್ತಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...