alex Certify ಗಂಗೆಯಲ್ಲಿ ಸ್ನಾನ ಮಾಡುತ್ತಿರುವ ರೀಲ್ಸ್ ಮಾಡಲು ಹೋಗಿ ಮುಳುಗಿ ಮಾಯವಾದ ಯುವಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಂಗೆಯಲ್ಲಿ ಸ್ನಾನ ಮಾಡುತ್ತಿರುವ ರೀಲ್ಸ್ ಮಾಡಲು ಹೋಗಿ ಮುಳುಗಿ ಮಾಯವಾದ ಯುವಕ

ಗಂಗೆಯಲ್ಲಿ ಮಿಂದೇಳುತ್ತಿರುವ ರೀಲ್ಸ್ ವಿಡಿಯೋ ಮಾಡಿಕೊಳ್ಳಲು ಯತ್ನಿಸುವ ಸಂದರ್ಭದಲ್ಲಿ ಯುವಕನೊಬ್ಬ ಮುಳುಗಿ ಕಳೆದು ಹೋಗಿದ್ದಾನೆ. ಮಂಗಳವಾರ ಜರುಗಿದ ಈ ಘಟನೆಯ ವಿಡಿಯೋ ಆನ್ಲೈನ್‌ನಲ್ಲಿ ಶೇರ್‌ ಆಗಿದ್ದು, ಇದನ್ನು ಕಂಡ ನೆಟ್ಟಿಗರು ಶಾಕ್ ಆಗಿದ್ದಾರೆ.

ಉತ್ತರ ಪ್ರದೇಶದ ನರೋರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದ್ದು, ನುರಿತ ಈಜುಗಾರರ ನೆರವಿನಿಂದ ಯುವಕನನ್ನು ಪತ್ತೆ ಮಾಡಲು ಪೊಲೀಸರು ಶ್ರಮಿಸುತ್ತಿದ್ದಾರೆ.

ಈ ಘಟನೆಗೂ ಎರಡು ದಿನಗಳ ಮುನ್ನ ರಿಶಿಕೇಶದಲ್ಲಿ ಸಹ ಇಂಥದ್ದೇ ಘಟನೆ ನಡೆದಿದೆ. ಗಂಗಾ ನದಿಯಲ್ಲಿ ಸ್ನಾನ ಮಾಡಲು ಸ್ನೇಹಿತರೊಂದಿಗೆ ಬಂದಿದ್ದ 28 ವರ್ಷ ವಯಸ್ಸಿನ ಲಕ್ಷ್ಮಣ್ ಎಂಬ ಹರಿಯಾಣಾದ ಯುವಕ ನದಿಯಲ್ಲಿ ಮುಳುಗಿಬಿಟ್ಟಿದ್ದಾನೆ. ಸ್ಥಳೀಯರ ಸಹಾಯದಿಂದ ಆತನ ಸ್ನೇಹಿತನನ್ನು ಪಾರು ಮಾಡಲಾಗಿದೆ.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...