ಬೆಂಗಳೂರು: ಕೊರೊನಾ ಎರಡನೇ ಅಲೆ ಭೀಕರತೆ ಜನರನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಈ ನಡುವೆ ಮಕ್ಕಳಲ್ಲಿ ಎ-ನೆಕ್ ಎಂಬ ವಿಚಿತ್ರ ರೋಗವೊಂದು ಕಾಣಿಸಿಕೊಳ್ಳುತ್ತಿದೆ. ದಾವಣಗೆರೆ ಜಿಲ್ಲೆಯ ಎಸ್.ಎಸ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಕನೊಬ್ಬನಲ್ಲಿ ಈ ಅಪರೂಪದ ಕಾಯಿಲೆ ಪತ್ತೆಯಾಗಿದೆ.
ಅತಿ ವಿರಳವಾದ ಅಕ್ಯುಟ್ ನೆಕ್ರೋಟೈಜಿಂಗ್ ಎನ್ಸೆಫಲೋಪತಿ(ANEC) ಎಂಬ ಕಾಯಿಲೆ ದೆಹಲಿಯ ಏಮ್ಸ್ ನಲ್ಲಿ ವಯಸ್ಕರರೊಬ್ಬರಲ್ಲಿ ಪತ್ತೆಯಾಗಿತ್ತು. ಆದರೆ ಇದೀಗ ರಾಜ್ಯದಲ್ಲಿ ಮಕ್ಕಳಲ್ಲಿ ಈ ಕಾಯಿಲೆ ಪತ್ತೆಯಾಗಿದ್ದು, 13 ವರ್ಷದ ಬಾಲಕನಲ್ಲಿ ಈ ಕಾಯಿಲೆ ಪತ್ತೆಯಾಗಿರುವುದು ಇದೇ ಮೊದಲು.
ಬೇಟೆಯನ್ನೇ ಮುದ್ದು ಮಾಡಿದ ಚಿರತೆ…! ಫೋಟೋ ವೈರಲ್
ದಾವಣಗೆರೆಯ ಎಸ್.ಎಸ್. ಆಸ್ಪತ್ರೆಯಲ್ಲಿ ಎ-ನೆಕ್ ಕಾಯಿಲೆಯ ಲಕ್ಷಣವಿರುವ ಒಟ್ಟು 6 ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದು, 13 ವರ್ಷದ ಬಾಲಕನ ಸ್ಥಿತಿ ಗಂಭೀರವಾಗಿದೆ. ಕೊರೊನಾದಿಂದ ಗುಣಮುಖರಾಗುತ್ತಿರುವ ಮಕ್ಕಳಲ್ಲಿ ಈ ಕಾಯಿಲೆ ಲಕ್ಷಣ ಕಂಡುಬರುತ್ತಿದೆ ಎಂದು ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ.
ತಲೆ ತಿರುಗಿಸುವಂತಿದೆ ಕೇಶ ವಿನ್ಯಾಸಕಿಯ ಬಿಲ್….!
ಎ-ನೆಕ್ ಕಾಯಿಲೆ ಮೆದುಳಿಗೆ ಸಂಬಂಧಪಟ್ಟದ್ದಾಗಿದ್ದು, ಮಲ್ಟಿಸಿಸ್ಟಂ ಇನ್ ಫಮೆಂಟರಿ ಸಿಂಡ್ರೋಮ್ ಕಾಯಿಲೆ ಮಾದರಿಯಲ್ಲಿಯೇ ಇರುತ್ತೆ. ಈಗಾಗಲೇ ಎಸ್ ಎಸ್ ಆಸ್ಪತ್ರೆಯಲ್ಲಿ MIS-C ಲಕ್ಷಣ ಇರುವ 6 ಮಕ್ಕಳಿದ್ದು ಇವರೆಲ್ಲ ಕೋವಿಡ್ ನಿಂದ ಗುಣಮುಖರಾದವರಾಗಿದ್ದಾರೆ. ದೇಶದಲ್ಲಿ ಯಾವುದೇ ಕಾಯಿಲೆ ಕಂಡುಬಂದರೂ ಅದು ಇಂಡಿಯನ್ ಮೆಡಿಕಲ್ ಜರ್ನಲ್ ನಲ್ಲಿ ದಾಖಲಾಗುತ್ತೆ. ಆದರೆ ಮಕ್ಕಳಿಗೆ ಎ-ನೆಕ್ ಕಾಯಿಲೆ ಬಂದಿರುವ ಬಗ್ಗೆ ಇನ್ನೂ ದಾಖಲಾಗಿಲ್ಲ. ಇದು ದೇಶದಲ್ಲಿಯೇ ಮೊದಲ ಪ್ರಕರಣ ಎಂದು ಡಾ. ನಿಜಲಿಂಗಪ್ಪ ಕಾಳಪ್ಪ ತಿಳಿಸಿದ್ದಾರೆ.