alex Certify SHOCKING NEWS: ನಿಷೇಧಕ್ಕೊಳಗಾದರೂ ಹೊಸ ಅವತಾರದಲ್ಲಿ ಕಾರ್ಯ ಚಟುವಟಿಕೆ ಮುಂದುವರೆಸಿದ ಚೀನಾ ಆಪ್‍ಗಳು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING NEWS: ನಿಷೇಧಕ್ಕೊಳಗಾದರೂ ಹೊಸ ಅವತಾರದಲ್ಲಿ ಕಾರ್ಯ ಚಟುವಟಿಕೆ ಮುಂದುವರೆಸಿದ ಚೀನಾ ಆಪ್‍ಗಳು..!

ನವದೆಹಲಿ: ದೇಶದ ಭದ್ರತೆ ದೃಷ್ಟಿಯಿಂದ ಕೇಂದ್ರ ಸರಕಾರವು ಹಲವಾರು ಚೀನಾ ಅಪ್ಲಿಕೇಶನ್‌ಗಳನ್ನು ನಿಷೇಧಿಸಿದೆ. ಆದರೂ ಕೂಡ ಈ ನಿಷೇಧಿತ ಆಪ್ ಗಳು ಹೊಸ ಅವತಾರದಲ್ಲಿ ಭಾರತದಲ್ಲಿ ಕಾರ್ಯ ನಿರ್ವಹಿಸುವುದನ್ನು ಮುಂದುವರೆಸಿದೆ ಎಂಬ ವಿಚಾರ ಬೆಳಕಿಗೆ ಬಂದಿದೆ.

ಟಿಕ್‌ಟಾಕ್, ಶೇರಿಟ್, ವೀಚಾಟ್, ಹೆಲೋ, ಲೈಕೀ, ಯುಸಿಯಂತಹ ಜನಪ್ರಿಯವಾದ ಆಪ್ ಗಳನ್ನು ಒಳಗೊಂಡಂತೆ ಸರ್ಕಾರವು ಸುಮಾರು 224 ಅಪ್ಲಿಕೇಶನ್‌ಗಳನ್ನು ಈ ಹಿಂದೆ ಸ್ಥಗಿತಗೊಳಿಸಿತ್ತು. ಇದರಲ್ಲಿ 54 ಚೀನೀ ಅಪ್ಲಿಕೇಶನ್‌ಗಳು ಮತ್ತೆ ಹೊಸ ಗೆಟಪ್ ನಲ್ಲಿ ಕಾಲಿರಿಸಿದೆ ಎಂದು ಹೇಳಲಾಗಿದೆ. ಈ ವಾರ ಕೂಡ ಕೇಂದ್ರ ಸರ್ಕಾರ ಮತ್ತೆ ಕೆಲವು ಚೀನಾ ಆಪ್ ಗಳನ್ನು ನಿಷೇಧಿಸಿದೆ.

ಆದರೆ, ನಿಷೇಧಿಸಲ್ಪಟ್ಟ ಹಲವು ಅಪ್ಲಿಕೇಶನ್‌ಗಳು ಒಂದೇ ರೀತಿಯ ಹೆಸರುಗಳೊಂದಿಗೆ ಮರುಪ್ರಾರಂಭಿಸಿವೆ ಹಾಗೂ ಇದುವರೆಗೆ ಪರಿಶೀಲನೆಯಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ  ಎಂದು ಉಲ್ಲೇಖಿಸಲಾಗಿದೆ.

ಉದಾಹರಣೆಗೆ, ನಿಷೇಧಿಸಲಾದ ಆರಂಭಿಕ ಅಪ್ಲಿಕೇಶನ್‌ಗಳಲ್ಲಿ ಬಿಗೋ ಲೈವ್, ಗಣನೀಯ ಸಂಖ್ಯೆಯ ಬಳಕೆದಾರರೊಂದಿಗೆ ಭಾರತದಲ್ಲಿ ಕಾರ್ಯನಿರ್ವಹಿಸುವುದನ್ನು ಮುಂದುವರೆಸಿದೆ. ಜನಪ್ರಿಯ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಡೌನ್‌ಲೋಡ್ ಮಾಡಲು ಇದು ಲಭ್ಯವಿಲ್ಲದಿದ್ದರೂ, ಸ್ಮಾರ್ಟ್‌ಫೋನ್‌ಗಳಲ್ಲಿ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡುವ ಎಪಿಕೆ ಫೈಲ್‌ಗಳ ಮೂಲಕ ಬಳಕೆದಾರರು ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ.

ಲೈಕ್ ಮತ್ತು ಬಿಗೋದ ಹಲವಾರು ಉದ್ಯೋಗಿಗಳನ್ನು ಟಿಕಿ ಮೊಬೈಲ್ ಅಪ್ಲಿಕೇಶನ್‌ನಂತಹ ಹೊಸ ಘಟಕಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಉದ್ಯಮದಲ್ಲಿ ಅವರ ನಿಜವಾದ ಗುರುತನ್ನು ಕಂಡುಹಿಡಿಯಲು ಕಾರ್ಯವಿಧಾನಗಳಿದ್ದರೂ, ಈ ಅಪ್ಲಿಕೇಶನ್‌ಗಳು ಚೈನೀಸ್ ಎಂದು ಗುರುತಿಸಲು ಭಾರತೀಯ ಅಪ್ಲಿಕೇಶನ್ ಬಳಕೆದಾರರಿಗೆ ತುಸು ಕಷ್ಟ ಎಂದೇ ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...