alex Certify SHOCKING NEWS: ಗ್ರಾಹಕರು ಹಾಗೂ ಬಳಕೆದಾರರ ಮಾಹಿತಿ ಕದಿಯುತ್ತಿದೆ ಅಮೆಜಾನ್..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING NEWS: ಗ್ರಾಹಕರು ಹಾಗೂ ಬಳಕೆದಾರರ ಮಾಹಿತಿ ಕದಿಯುತ್ತಿದೆ ಅಮೆಜಾನ್..!

 

ಬುಕ್ ಮಾರಾಟದಿಂದ ಶುರುವಾದ ಜರ್ನಿ ಈಗ ಅಮೆಜಾನ್ ಎಂಬ ವಿಶ್ವದ ಅತಿ ದೊಡ್ಡ ಇ-ಕಾಮರ್ಸ್ ಸೈಟ್ ಆಗಿ ಬೆಳೆದು ನಿಂತಿದೆ. ಈ ದೈತ್ಯ ಬೆಳವಣಿಗೆ ಅಮೆಜಾನ್ ಮಾಲೀಕ ಜೆಫ್ ಬೆಜಾಸ್ ನನ್ನು ಅತ್ಯಂತ ಶ್ರೀಮಂತನಾಗಿಸಿದೆ. ಅಮೆಜಾನ್ನ ಬೈ ಪ್ರಾಡಕ್ಟ್ ಗಳಾದ ಪ್ರೈಮ್, ಕಿಂಡಲ್, ಫೈಯರ್ ಟಿವಿ, ಅಲೆಕ್ಸಾ, ಅಮೆಜಾನ್ ಫೋಟೊಸ್, ಅಮೆಜಾನ್ ಪೇ ಸೇರಿದಂತೆ ಹಲವು ಸಾಕಷ್ಟು ಜನಪ್ರಿಯವಾಗಿವೆ. ಹೀಗಿರುವಾಗ ದೈತ್ಯ ಅಮೆಜಾನ್ ಕಂಪನಿಯು ತನ್ನ ಬೆಳವಣಿಗೆಗೆ ತನ್ನ ಬಳಕೆದಾರರು ಹಾಗೂ ಗ್ರಾಹಕರ ಮಾಹಿತಿಯನ್ನು ಬಳಸಿಕೊಳ್ಳುತ್ತಿದೆ ಎಂದು ಗಾರ್ಡಿಯನ್ ವರದಿ ಮಾಡಿದೆ.

ಅದರಲ್ಲೂ ಅಮೆಜಾನ್ ಪ್ರೈಮ್ ಬಳಕೆದಾರರು ಅಮೆಜಾನ್ ಕಂಪನಿಯ ಅತ್ಯಮೂಲ್ಯ ಗ್ರಾಹಕರು ಮಾತ್ರವಲ್ಲ, ಬಳಕೆದಾರರ ಡೇಟಾದ ಶ್ರೀಮಂತ ಮೂಲವೂ ಆಗಿದ್ದಾರೆ. ಅಮೆಜಾನ್ ನ ಶಾಪಿಂಗ್ ಅಪ್ಲಿಕೇಶನ್, ಕಿಂಡಲ್ ಇ-ರೀಡರ್, ರಿಂಗ್ ಡೋರ್‌ಬೆಲ್, ಎಕೋ ಸ್ಮಾರ್ಟ್ ಸ್ಪೀಕರ್ ಅಥವಾ ಪ್ರೈಮ್ ಸ್ಟ್ರೀಮಿಂಗ್ ಸೇವೆಗಳ ಬಳಕೆದಾರರ ಡೇಟಾವನ್ನು ಅಮೆಜಾನ್ ಸಂಗ್ರಹಿಸುತ್ತಿದೆ. ಈ ಮಾಹಿತಿಯನ್ನು, ಅಮೆಜಾನ್ ಫೋರ್ಕಾಸ್ಟ್ (Amazon Forecast) ಎಂಬ ಸೇವೆಯಾಗಿ, ಮೂರನೇ ವ್ಯಕ್ತಿಗಳಿಗೆ ಬಾಡಿಗೆ ನೀಡುತ್ತಿದೆ ಎಂದು ವರದಿಯಾಗಿದೆ.

ಅಮೆಜಾನ್ ಪ್ರೈವೆಸಿ ಪಾಲಿಸಿ ಪ್ರಕಾರ ಕಂಪನಿಯು, ಗ್ರಾಹಕರು ನೀಡುವ ಮಾಹಿತಿ, ಅವರು ಖರೀದಿಸಿದ ವಸ್ತುಗಳಿಂದ ಹಿಡಿದು ವಿಳಾಸ, ಹೆಸರು, ಸರ್ಚಸ್, ಅಷ್ಟೇ ಅಲ್ಲಾ ಅಲೆಕ್ಸಾದಲ್ಲಿ ರೆಕಾರ್ಡ್ ಆಗುವ ವಾಯ್ಸ್ ಮೆಸೇಜ್ ಗಳನ್ನು ಕಲೆಕ್ಟ್ ಮಾಡುತ್ತದೆ. ಇನ್ನು ಪ್ರೈಮ್ ಬಳಕೆದಾರರ ಆರ್ಡರ್ಸ್, ಅವರ ಇಂಟ್ರಸ್ಟ್, ಅವರು ನೋಡಲಿಚ್ಛಿಸುವ ಕಂಟೆಂಟ್, ಕೆಲವೊಮ್ಮೆ ಕಾಂಟ್ಯಾಕ್ಟ್ಸ್ ಜೊತೆಗೆ ಮೇಲ್ ಗಳನ್ನು ಕೂಡ ಅಮೆಜಾನ್ ಸಂಗ್ರಹಿಸುತ್ತದೆ.

ಅಮೆಜಾನ್ ತನ್ನ ಬಳಕೆದಾರರ ಮೇಲೆ ಎಷ್ಟರ ಮಟ್ಟಿಗೆ ಸರ್ವಯಲೆನ್ಸ್ ಮಾಡುತ್ತದೆ ಎಂದರೆ, ಅದು ಸಂಗ್ರಹಿಸುವ ಮಾಹಿತಿಯಿಂದ ನೀವು ಎಲ್ಲಿ ವಾಸಿಸುತ್ತೀರಾ. ಎಲ್ಲಿ ಕೆಲಸ ಮಾಡುತ್ತೀರಾ. ನಿಮ್ಮ ಕುಟುಂಬ ಯಾವುದು, ನಿಮ್ಮ ಸ್ನೇಹಿತರ ಗುಂಪು, ನಿಮ್ಮಿಷ್ಟದ ವಸ್ತುಗಳು. ನಿಮ್ಮಿಷ್ಟದ ಕಂಟೆಂಟ್ ಪ್ರತಿಯೊಂದರ ಮಾಹಿತಿ ಅದರ ಬಳಿ ಇದೆ ಎಂದು ಐಜಿ ಗೀಕ್ ನ ನಿರ್ದೇಶಕಿ ರೊವೆನ್ನಾ ಫೀಲ್ಡಿಂಗ್ ಮಾಹಿತಿ ನೀಡಿದ್ದಾರೆ.

ಕಿಂಡಲ್ ಮತ್ತು ಫೈಯರ್ ಟಿವಿ ಬಳಕೆದಾರರಿಂದ ಸಂಗ್ರಹ ಮಾಡುವ ಮಾಹಿತಿಯಿಂದ ಅವರ ಧರ್ಮ, ಅವರ ವಿಳಾಸ, ಅವರಿಷ್ಟದ ರಾಜಕೀಯ ಪಕ್ಷ, ಅವರ ವಿಚಾರಧಾರೆ, ಅವರ ಅನಿಸಿಕೆಗಳು ಸೇರಿದಂತೆ ಪ್ರತಿಯೊಂದು ಅಂಶವನ್ನು ಅಮೆಜಾನ್ ಊಹಿಸಬಲ್ಲದು ಎಂದು ಫೀಲ್ಡಿಂಗ್ ತಿಳಿಸಿದ್ದಾರೆ.

ಇನ್ನು ಅಮೆಜಾನ್ ಈ ಮಾಹಿತಿಯನ್ನು ಹೇಗೆ ಬಳಸುತ್ತದೆ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಅಮೆಜಾನ್ ಗೂಗಲ್ ಹಾಗೂ ಫೇಸ್ಬುಕ್ ನಂತೆ, ನೆಟ್ವರ್ಕ್ ಅಡ್ವರ್ಟೈಸಿಂಗ್ ಕಂಪನಿಗಳಿಗೆ ತನ್ನ ಗ್ರಾಹಕರ ಹಾಗೂ ಬಳಕೆದಾರರ ಮಾಹಿತಿ ನೀಡುತ್ತದೆ. ಅದಕ್ಕಿಂತ ಹೆಚ್ಚಾಗಿ ತನ್ನ ವಸ್ತುಗಳನ್ನು ಪ್ರಮೋಟ್ ಮಾಡಲು ಬಳಸುತ್ತದೆ. ಆದರೆ ಇದು ಇಷ್ಟಕ್ಕೆ ಸೀಮಿತವಾಗಿಲ್ಲ ಎನ್ನುವುದು ಹಲವರ ವಾದ.

ಇದರಿಂದ ಪಾರಾಗುವುದು ಹೇಗೆ ಎಂಬುದನ್ನ ನೋಡುವುದಾದರೆ, ಅಮೆಜಾನ್ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸುವುದು. ಅದು ಕೆಲವು ಸಂದರ್ಭಗಳಲ್ಲಿ ಸಾಧ್ಯವಿಲ್ಲ ಅಂತಹ ಸಮಯದಲ್ಲಿ, ಪ್ರೈವೆಸಿ ಕಾಪಾಡಲು ಎಂದೇ ಹಲವಾರು ಪ್ರತ್ಯೇಕ ಸಾಫ್ಟ್‌ವೇರ್ ಗಳು ಲಭ್ಯವಿವೆ ಅವುಗಳನ್ನ ಬಳಸುವುದು. ಅಥವಾ ನಿಮ್ಮ ವಾಯ್ಸ ಮೆಸೇಜ್, ಸರ್ಚಸ್ ಎಲ್ಲವನ್ನು ಅಂದೇ ಡಿಲೀಟ್ ಮಾಡುವುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...