alex Certify SHOCKING NEWS: ಕಣ್ಣೆದುರೇ ತುಂಗಭದ್ರ ನದಿಯಲ್ಲಿ ಕೊಚ್ಚಿ ಹೋದ ಅಕ್ಕ-ತಂಗಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING NEWS: ಕಣ್ಣೆದುರೇ ತುಂಗಭದ್ರ ನದಿಯಲ್ಲಿ ಕೊಚ್ಚಿ ಹೋದ ಅಕ್ಕ-ತಂಗಿ

ದಾವಣಗೆರೆ: ರಾಜ್ಯಾದ್ಯಂತ ಭಾರಿ ಮಳೆಯಿಂದಾಗಿ ನದಿ, ಹಳ್ಳಕೊಳ್ಳಗಳು ಅಪಾಯದ ಮಟ್ಟದಲ್ಲಿ ತುಂಬಿ ಹರಿಯುತ್ತಿದ್ದು, ದಾವಣಗೆರೆ ಜಿಲ್ಲೆಯಲ್ಲಿ ದುರಂತವೊಂದು ಸಂಭವಿಸಿದೆ. ತುಂಗಭದ್ರಾ ನದಿ ನೀರಿನ ರಭಸಕ್ಕೆ ಸಹೋದರಿಯರಿಬ್ಬರೂ ನೀರಿನಲ್ಲಿ ಕೊಚ್ಚಿ ಹೋಗಿರುವ ಘಟನೆ ನಡೆದಿದೆ.

ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಉಕ್ಕಡಗಾತ್ರಿ ಕ್ಷೇತ್ರಕ್ಕೆ ಬಂದಿದ್ದ ಕುಟುಂಬ ತುಂಗಭದ್ರಾನದಿಯಲ್ಲಿ ಸ್ನಾನಕ್ಕೆಂದು ಇಳಿದಿದೆ. ಈ ವೇಳೆ ಅಕ್ಕ-ತಂಗಿ ಇಬ್ಬರೂ ನದಿ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾರೆ. ಹುಚ್ಚವ್ವನಹಳ್ಳಿಯ ಚೈತ್ರ ಹಾಗೂ ಪುಷ್ಪ ನೀರು ಪಾಲಾದವರು.

ಸಹೋದರಿಯರಿಬ್ಬರೂ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದಂತೆ ತಕ್ಷಣ ಅವರನ್ನು ರಕ್ಷಿಸಲೆಂದು ಚೈತ್ರಾ ಪತಿ ನೀರಿಗೆ ಧುಮುಕಿದ್ದಾರೆ. ಆದರೂ ರಕ್ಷಿಸಲು ಸಾಧ್ಯವಾಗಿಲ್ಲ. ಕುಟುಂಬದವರ ಕಣ್ಣೆದುರೇ ಸಹೋದರಿಯರಿಬ್ಬರೂ ನದಿ ನೀರಿನಲ್ಲಿ ಕೊಚ್ಚಿ ಹೋಗುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...