alex Certify Shocking News: ಓಮಿಕ್ರಾನ್​ ರೂಪಾಂತರಿಯಿಂದ ಹೆಚ್ಚಾಯ್ತು ಆಸ್ಪತ್ರೆ ಸೇರುತ್ತಿರುವ ಮಕ್ಕಳ ಸಂಖ್ಯೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Shocking News: ಓಮಿಕ್ರಾನ್​ ರೂಪಾಂತರಿಯಿಂದ ಹೆಚ್ಚಾಯ್ತು ಆಸ್ಪತ್ರೆ ಸೇರುತ್ತಿರುವ ಮಕ್ಕಳ ಸಂಖ್ಯೆ….!

ಕೊರೊನಾ ವೈರಸ್​ ಸೋಂಕನ್ನು ನಿಯಂತ್ರಿಸಲು ವಿಶ್ವದ ಎಲ್ಲಾ ರಾಷ್ಟ್ರಗಳು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದರೂ ಸಹ ಕೋವಿಡ್​ ಸೋಂಕು ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಲೇ ಇದೆ. ಓಮಿಕ್ರಾನ್​ ರೂಪಾಂತರಿಯಿಂದಾಗಿ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡುಬಂದಿದೆ.

ವಿಶ್ವಾದ್ಯಂತ ಇಲ್ಲಿಯವರೆಗೆ ಒಟ್ಟು 300 ಮಿಲಿಯನ್​ ಕೋವಿಡ್​ ಪ್ರಕರಣಗಳು ವರದಿಯಾಗಿವೆ. ಓಮಿಕ್ರಾನ್​ ರೂಪಾಂತರಿಯು ಅತ್ಯಂತ ವೇಗವಾಗಿ ಹರಡುತ್ತಿರೋದ್ರಿಂದ ಬಹುತೇಕ ಎಲ್ಲಾ ದೇಶಗಳು ಹಿಂದೆಂದೂ ವರದಿಯ ಮಾಡಿದ್ದಕ್ಕಿಂತ ಹೆಚ್ಚೆಚ್ಚು ಪ್ರಮಾಣದಲ್ಲಿ ಸೋಂಕಿನ ಸಂಖ್ಯೆಯನ್ನು ವರದಿ ಮಾಡುತ್ತಿವೆ.

ಕೊರೊನಾ ವೈರಸ್​ ಆರಂಭವಾದಾಗಿನಿಂದ ಇಲ್ಲಿಯವರೆಗೆ ನೋಡಿದರೆ ಈ ಬಾರಿ ಅಮೆರಿಕದಲ್ಲಿ ಐದು ವರ್ಷಕ್ಕಿಂತ ಪುಟ್ಟ ಮಕ್ಕಳು ಆಸ್ಪತ್ರೆಗೆ ದಾಖಲಾಗುತ್ತಿರುವುದು ಹೆಚ್ಚಾಗಿದೆ ಎನ್ನಲಾಗಿದೆ. ಈ ಮಕ್ಕಳು ಲಸಿಕೆ ಅರ್ಹವಲ್ಲದ ವಯಸ್ಸಿನವರು ಆಸ್ಪತ್ರೆಗೆ ಸೇರುತ್ತಿರುವ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದೆ ಎಂದು ಅಮೆರಿಕ ಸರ್ಕಾರ ಬಿಡುಗಡೆ ಮಾಡಿರುವ ಮಾಹಿತಿಯಲ್ಲಿ ಲಭ್ಯವಾಗಿದೆ.

ಲಸಿಕೆ ಸ್ವೀಕರಿಸದ ಮಕ್ಕಳು ಈ ರೀತಿ ಆಸ್ಪತ್ರೆಗೆ ದಾಖಲಾಗುತ್ತಿರೋದನ್ನು ಗಮನಿಸಿದರೆ ಕೊರೊನಾ ವಿರುದ್ಧ ಲಸಿಕೆಯು ಎಷ್ಟು ಪರಿಣಾಮಕಾರಿಯಾಗಿದೆ ಎಂಬುದನ್ನು ಇಲ್ಲಿಯೇ ಅಂದಾಜಿಸಬಹುದಾಗಿದೆ ಎಂದು ರೋಗ ನಿಯಂತ್ರಣ ಹಾಗೂ ತಡೆಗಟ್ಟುವಿಕೆ ಕೇಂದ್ರದ ನಿರ್ದೇಶಕ ಡಾ. ರೋಚೆಲ್​ ವಾಲೆನ್ಸ್ಕಿ ಹೇಳಿದರು.

ಓಮಿಕ್ರಾನ್​ ರೂಪಾಂತರಿಯ ವಿರುದ್ಧ ಬೂಸ್ಟರ್ ಡೋಸ್​ಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿವೆ. ಹೀಗಾಗಿ ಸದ್ಯಕ್ಕಂತೂ ಕೊರೊನಾ ನಾಲ್ಕನೇ ಡೋಸ್​ನ ಅವಶ್ಯಕತೆ ಇಲ್ಲ ಎಂದು ಬ್ರಿಟನ್​ ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...