alex Certify SHOCKING NEWS: ಒಂದೇ ದಿನದಲ್ಲಿ 40 ಜನರ ಮೇಲೆ ದಾಳಿಯಿಟ್ಟ ಹುಚ್ಚು ನಾಯಿ; ಕಂಗಾಲಾದ ಗ್ರಾಮಸ್ಥರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING NEWS: ಒಂದೇ ದಿನದಲ್ಲಿ 40 ಜನರ ಮೇಲೆ ದಾಳಿಯಿಟ್ಟ ಹುಚ್ಚು ನಾಯಿ; ಕಂಗಾಲಾದ ಗ್ರಾಮಸ್ಥರು

ಮಂಡ್ಯ: ಹುಚ್ಚು ನಾಯಿ ದಾಳಿಗೆ ಮಂಡ್ಯದ ಜನತೆ ಬೆಚ್ಚಿ ಬಿದ್ದಿದ್ದಾರೆ. ಒಂದೇ ದಿನದಲ್ಲಿ 40 ಜನರ ಮೇಲೆ ದಾಳಿ ಮಾಡಿರುವ ಹುಚ್ಚು ನಾಯಿ ಎಲ್ಲರನ್ನೂ ಕಚ್ಚಿ ಗಾಯಗೊಳಿಸಿದೆ.

ಮಂಡ್ಯದ ಕೆ.ಆರ್.ಪೇಟೆ ತಾಲೂಕಿನ ಮಾಕಳ್ಳಿ, ಪುರ ಗೇಟ್, ಕುಂದನಹಳ್ಳಿ, ಹೆಗ್ಗಡಹಳ್ಳಿ, ವಡ್ಡರಹಳ್ಳಿ ಗ್ರಾಮಸ್ಥರ ಮೇಲೆ ಹುಚ್ಚು ನಾಯಿ ದಾಳಿ ಮಾಡಿದೆ. ಈ ಗ್ರಾಮದ ತುಂಬೆಲ್ಲ ಹುಚ್ಚುನಾಯಿಯೊಂದು ಓಡಾಡುತ್ತಿದ್ದು, ಸಿಕ್ಕ ಸಿಕ್ಕವನ್ನು ಕಚ್ಚಿದೆ. ಕಬ್ಬು ಕಟಾವು ಮಾಡಲೆಂದು ಕೂಲಿ ಕೆಲಸಕ್ಕೆ ಬಂದವರ ಮೇಲೂ ದಾಳಿ ಮಾಡಿದೆ.

ವಿಶ್ವಸಂಸ್ಥೆಯಲ್ಲಿ ಮತ್ತೆ ಪಾಕ್ ಬಣ್ಣ ಬಯಲು ಮಾಡಿದ ಭಾರತ: ಹುತಾತ್ಮರಂತೆ ಲಾಡೆನ್ ನಂತಹ ಉಗ್ರರ ವೈಭವೀಕರಣ ಎಂದು ತರಾಟೆ

ಹುಚ್ಚು ನಾಯಿ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿರುವ 40 ಜನರಲ್ಲಿ ಹಲವರನ್ನು ಕೆ.ಆರ್.ಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೂ ಹಲವರನ್ನು ಮೈಸೂರು ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಸ್ಥಳಾಂತರಿಸಲಾಗಿದೆ.

ಹುಚ್ಚು ನಾಯಿ ಸೆರೆ ಹಿಡಿಯುವಂತೆ ಗ್ರಾಮಸ್ಥರು ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...