alex Certify ವಿಚಿತ್ರ ಘಟನೆ: ಪುರುಷನಿಗೂ ಪೀರಿಯಡ್ಸ್, ಹೊಟ್ಟೆ ನೋವೆಂದು ವೈದ್ಯರ ಬಳಿ ಹೋದ ವ್ಯಕ್ತಿ ‘ಅವನಲ್ಲ ಅವಳು’ ಎಂದು ಗೊತ್ತಾಗಿ ಬಿಗ್ ಶಾಕ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಚಿತ್ರ ಘಟನೆ: ಪುರುಷನಿಗೂ ಪೀರಿಯಡ್ಸ್, ಹೊಟ್ಟೆ ನೋವೆಂದು ವೈದ್ಯರ ಬಳಿ ಹೋದ ವ್ಯಕ್ತಿ ‘ಅವನಲ್ಲ ಅವಳು’ ಎಂದು ಗೊತ್ತಾಗಿ ಬಿಗ್ ಶಾಕ್

ಬೀಜಿಂಗ್: ಹೊಟ್ಟೆ ನೋವು ಹಾಗೂ ಮೂತ್ರದಲ್ಲಿ ರಕ್ತ ಕಂಡು ಬಂದ ಕಾರಣ ವೈದ್ಯರ ಬಳಿಗೆ ಹೋದ ವ್ಯಕ್ತಿಯೊಬ್ಬನಿಗೆ ತಾನು ಗಂಡಲ್ಲ, ಹೆಣ್ಣು ಎನ್ನುವುದು ಗೊತ್ತಾಗಿದೆ.

ವ್ಯಕ್ತಿಗೆ ಮಹೀಳೆಯರಲ್ಲಿರುವಂತೆ ಅಂಡಾಶಯ ಮತ್ತು ಗರ್ಭಾಶಯ ಇರುವುದು ವೈದ್ಯರ ಪರೀಕ್ಷೆಯಲ್ಲಿ ತಿಳಿದು ಬಂದಿದೆ. ಕ್ರೋಮೋಸೋಮ್ ವಿಶ್ಲೇಷಣೆ ಪರೀಕ್ಷೆ ನಡೆಸಿದ ನಂತರ ವ್ಯಕ್ತಿ ಜೈವಿಕವಾಗಿ ಮಹಿಳೆ ಎಂದು ವೈದ್ಯರು ತಿಳಿಸಿದ್ದಾರೆ. ಇದರಿಂದಾಗಿ 33 ವರ್ಷಗಳ ಕಾಲ ಪುರುಷನೆಂದೇ ಹೇಳಲಾಗಿದ್ದ ವ್ಯಕ್ತಿ ತಾನು ಮಹಿಳೆ ಎಂಬುದನ್ನು ತಿಳಿದು ಶಾಕ್ ಗೆ ಒಳಗಾಗಿದ್ದಾನೆ.

ಚೆನ್ ಲೀ ಎಂಬಾತನೇ ಈ ರೀತಿ ಗರ್ಭಾಶಯ ಮತ್ತು ಅಂಡಾಶಯ ಹೊಂದಿದ ವ್ಯಕ್ತಿಯಾಗಿದ್ದಾನೆ. ನೈರುತ್ಯ ಚೀನಾದ ಸಿಚುವಾನ್ ಪ್ರಾಂತ್ಯದ ಚೆನ್ ಲೀ ಅವರಿಗೆ ಅನಿಯಮಿತ ಮೂತ್ರ ವಿಸರ್ಜನೆ ಕಾರಣ ಅದನ್ನು ಸರಿಪಡಿಸಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ನಂತರ ಆತನ ಮೂತ್ರದಲ್ಲಿ ರಕ್ತ ಬರುತ್ತಿತ್ತು. ಆಗಾಗ ಹೊಟ್ಟೆನೋವು  ಕಾಣಿಸಿಕೊಳ್ಳುತ್ತಿತ್ತು.

ನಂತರದಲ್ಲಿ ವೈದ್ಯರು ಅಪೆಂಡಿಸೈಟಿಸ್ ಚಿಕಿತ್ಸೆ ನೀಡಿದ್ದರು. ಹೀಗಿದ್ದರೂ ಹೊಟ್ಟೆ ನೋವು ಮತ್ತು ಮೂತ್ರದಲ್ಲಿ ರಕ್ತ ಬರುವುದು ಕಡಿಮೆಯಾಗಿರಲಿಲ್ಲ. ಆತನನ್ನು ಪರೀಕ್ಷೆಗೆ ಒಳಪಡಿಸಿದಾಗ ಮಹಿಳೆಯರ ಲೈಂಗಿಕ ವರ್ಣತಂತುಗಳು ಇರುವುದು ಕಂಡು ಬಂದಿದೆ. ನಂತರ ಹೆಚ್ಚಿನ ಪರೀಕ್ಷೆ ನಡೆಸಿದಾಗ ಅಂಡಾಶಯ ಮತ್ತು ಗರ್ಭಾಶಯ ಸೇರಿದಂತೆ ಸ್ತ್ರೀ ಸಂತಾನೋತ್ಪತ್ತಿ ಅಂಗಗಳು ಹೊಂದಿರುವುದು ಕಂಡು ಬಂದಿದೆ.

ಚೆನ್ ಲೀ ಹೆಣ್ಣು ಮತ್ತು ಗಂಡು ಸಂತಾನೋತ್ಪತ್ತಿ ಅಂಗಗಳೊಂದಿಗೆ ಇಂಟರ್ ಸೆಕ್ಸ್ ನಲ್ಲಿ ಜನಿಸಿದವರು ಎನ್ನುವುದು ಗೊತ್ತಾಗಿದೆ. ಚೆನ್ ಲೀಯ ಪುರುಷ ಲೈಂಗಿಕ ಹಾರ್ಮೋನ್ ಆಡ್ರೊಜೆನ್ ಗಳು ಸರಾಸರಿಗಿಂತ ಕಡಿಮೆ ಇದ್ದು, ಸ್ರ್ತೀ ಲೈಂಗಿಕ ಹಾರ್ಮೋನ್ ಮಟ್ಟ ಆರೋಗ್ಯವಂತ ವಯಸ್ಕ ಮಹಿಳೆಯರಲ್ಲಿ ಇರುವಂತೆ ಇದೆ. ಮೂತ್ರದ ವೇಳೆ ರಕ್ತ ಮತ್ತು ಹೊಟ್ಟೆ ನೋವು ಕಾಣಿಸಿಕೊಳ್ಳುತ್ತಿದ್ದರುವುದು ಮುಟ್ಟಿನ ಲಕ್ಷಣವಾಗಿತ್ತು. ಆತನನ್ನು ದ್ವಿಲಿಂಗಿ ಎಂದು ಘೋಷಿಸಲಾಗಿದೆ.

ತೊಂದರೆಗೀಡಾದ ಲಿ ತನ್ನ ಸ್ತ್ರೀ ಸಂತಾನೋತ್ಪತ್ತಿ ಅಂಗಗಳನ್ನು ವೈದ್ಯಕೀಯ ವಿಧಾನದ ಮೂಲಕ ತೆಗೆದುಹಾಕಲು ವೈದ್ಯರನ್ನು ಕೇಳಿಕೊಂಡರು. ಅವರು ಜೂನ್ 6 ರಂದು ಮೂರು ಗಂಟೆಗಳ ಶಸ್ತ್ರಚಿಕಿತ್ಸೆಗೆ ಒಳಗಾಗಿ 10 ದಿನಗಳ ನಂತರ ಆಸ್ಪತ್ರೆಯಿಂದ ಬಿಡುಗಡೆಯಾದರು. ಲಿ ಅವರಿಗೆ ಚಿಕಿತ್ಸೆ ನೀಡಿದ ತಜ್ಞರ ಪ್ರಕಾರ, ಅವರ ಸ್ಥಿತಿಯು ದೈಹಿಕ ಆರೋಗ್ಯದ ಮೇಲೆ ಕಡಿಮೆ ಪರಿಣಾಮ ಬೀರುತ್ತದೆ. ಆದರೆ ಆಗಾಗ್ಗೆ ಮಾನಸಿಕ ಆಘಾತಕ್ಕೆ ಕಾರಣವಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...