alex Certify Shocking: ಶ್ರೀ ರಾಮನ ಫೋಟೋಗೆ ತನ್ನ ಹಾಗೂ ಸೀತೆ ಫೋಟೋಗೆ ಪತ್ನಿ ಮುಖವನ್ನು ಅಂಟಿಸಿದ ಪ್ರಾಧ್ಯಾಪಕ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Shocking: ಶ್ರೀ ರಾಮನ ಫೋಟೋಗೆ ತನ್ನ ಹಾಗೂ ಸೀತೆ ಫೋಟೋಗೆ ಪತ್ನಿ ಮುಖವನ್ನು ಅಂಟಿಸಿದ ಪ್ರಾಧ್ಯಾಪಕ..!

ಶ್ರೀರಾಮ ಹಾಗೂ ಸೀತೆಯ ಫೋಟೋದಲ್ಲಿ ತನ್ನ ಹಾಗೂ ತನ್ನ ಪತ್ನಿಯ ಫೋಟೋವನ್ನು ಫೋಟೋಶಾಪ್​ ಮಾಡುವ ಮೂಲಕ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ದೃಶ್ಯ ಕಲೆ ವಿಭಾಗದ ಸಹಾಯಕ ಪ್ರಾಧ್ಯಾಪಕ ಅಮರೇಶ್ ಕುಮಾರ್ ವಿವಾದಕ್ಕೆ ಸಿಲುಕಿದ್ದಾರೆ. ಬಿಎಚ್‌ಯುನಲ್ಲಿ ದೃಶ್ಯ ಕಲೆಗಳ ವಿಭಾಗವು ಆಯೋಜಿಸಿದ್ದ ಪ್ರದರ್ಶನದಲ್ಲಿ ಚಿತ್ರವನ್ನು ಪ್ರದರ್ಶಿಸಲಾಗಿತ್ತು.

ಈ ಚಿತ್ರವು ವಿದ್ಯಾರ್ಥಿಗಳಲ್ಲಿ ಆಕ್ರೋಶವನ್ನು ಉಂಟು ಮಾಡಿದೆ. ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆಕ್ರೋಶ ಹೊರಹಾಕಿದ ವಿದ್ಯಾರ್ಥಿಗಳು ಪ್ರಾಧ್ಯಾಪಕರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಪ್ರಾಧ್ಯಾಪಕರ ವಿರುದ್ಧ ಕ್ರಮ ಕೈಗೊಳ್ಳದೇ ಹೋದಲ್ಲಿ ಪ್ರತಿಭಟನೆ ನಡೆಸುವುದಾಗಿ ವಿದ್ಯಾರ್ಥಿಗಳು ಎಚ್ಚರಿಕೆ ನೀಡಿದ್ದಾರೆ.

ಆದರೆ ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅಮರೇಶ್​ ಕುಮಾರ್​, ಇದು ಅಂತಹ ದೊಡ್ಡ ವಿಷಯವೇನಲ್ಲ. ಏಕೆಂದರೆ ಭಗವಾನ್​ ರಾಮ ಎಲ್ಲರಿಗೂ ಸೇರಿದವನು ಎಂದು ಸಬೂಬು ನೀಡಿದ್ದಾರೆ. ಈ ನಡುವೆ ಬನಾರಸ್​ ಹಿಂದೂ ವಿಶ್ವವಿದ್ಯಾಲಯವು ಈ ವಿಚಾರವಾಗಿ ಮೌನ ವಹಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...