ಶ್ರೀರಾಮ ಹಾಗೂ ಸೀತೆಯ ಫೋಟೋದಲ್ಲಿ ತನ್ನ ಹಾಗೂ ತನ್ನ ಪತ್ನಿಯ ಫೋಟೋವನ್ನು ಫೋಟೋಶಾಪ್ ಮಾಡುವ ಮೂಲಕ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ದೃಶ್ಯ ಕಲೆ ವಿಭಾಗದ ಸಹಾಯಕ ಪ್ರಾಧ್ಯಾಪಕ ಅಮರೇಶ್ ಕುಮಾರ್ ವಿವಾದಕ್ಕೆ ಸಿಲುಕಿದ್ದಾರೆ. ಬಿಎಚ್ಯುನಲ್ಲಿ ದೃಶ್ಯ ಕಲೆಗಳ ವಿಭಾಗವು ಆಯೋಜಿಸಿದ್ದ ಪ್ರದರ್ಶನದಲ್ಲಿ ಚಿತ್ರವನ್ನು ಪ್ರದರ್ಶಿಸಲಾಗಿತ್ತು.
ಈ ಚಿತ್ರವು ವಿದ್ಯಾರ್ಥಿಗಳಲ್ಲಿ ಆಕ್ರೋಶವನ್ನು ಉಂಟು ಮಾಡಿದೆ. ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆಕ್ರೋಶ ಹೊರಹಾಕಿದ ವಿದ್ಯಾರ್ಥಿಗಳು ಪ್ರಾಧ್ಯಾಪಕರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಪ್ರಾಧ್ಯಾಪಕರ ವಿರುದ್ಧ ಕ್ರಮ ಕೈಗೊಳ್ಳದೇ ಹೋದಲ್ಲಿ ಪ್ರತಿಭಟನೆ ನಡೆಸುವುದಾಗಿ ವಿದ್ಯಾರ್ಥಿಗಳು ಎಚ್ಚರಿಕೆ ನೀಡಿದ್ದಾರೆ.
ಆದರೆ ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅಮರೇಶ್ ಕುಮಾರ್, ಇದು ಅಂತಹ ದೊಡ್ಡ ವಿಷಯವೇನಲ್ಲ. ಏಕೆಂದರೆ ಭಗವಾನ್ ರಾಮ ಎಲ್ಲರಿಗೂ ಸೇರಿದವನು ಎಂದು ಸಬೂಬು ನೀಡಿದ್ದಾರೆ. ಈ ನಡುವೆ ಬನಾರಸ್ ಹಿಂದೂ ವಿಶ್ವವಿದ್ಯಾಲಯವು ಈ ವಿಚಾರವಾಗಿ ಮೌನ ವಹಿಸಿದೆ.