alex Certify Shocking: ನಾಲ್ಕು ತಿಂಗಳ ಕಂದಮ್ಮನನ್ನು ಮೂರಂತಸ್ತಿನ ಕಟ್ಟಡದ ಮೇಲಿಂದ ಕೆಳಗೆಸೆದ ಕೋತಿಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Shocking: ನಾಲ್ಕು ತಿಂಗಳ ಕಂದಮ್ಮನನ್ನು ಮೂರಂತಸ್ತಿನ ಕಟ್ಟಡದ ಮೇಲಿಂದ ಕೆಳಗೆಸೆದ ಕೋತಿಗಳು

ಕೋತಿಗಳ ಹಿಂಡೊಂದು ನಾಲ್ಕು ತಿಂಗಳ ಪುಟ್ಟ ಕಂದನನ್ನು ಮೂರಂತಸ್ತಿನ ಕಟ್ಟಡದಿಂದ ಕೆಳಗೆಸೆದಿದ್ದು, ಇದರ ಪರಿಣಾಮ ಮಗು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಬರೇಲಿಯ ಗ್ರಾಮಾಂತರ ಪ್ರದೇಶದಲ್ಲಿ ನಡೆದಿದೆ.

ಘಟನೆಯ ವಿವರ: ಬರೇಲಿಯ ದುಂಕ ಗ್ರಾಮದ ನಿರ್ದೇಶ್ ಉಪಾಧ್ಯಾಯ ಎಂಬವರು ತಮ್ಮ ಪತ್ನಿ ಹಾಗೂ ನಾಲ್ಕು ತಿಂಗಳ ಮಗನೊಂದಿಗೆ ಮಹಡಿ ಮೇಲೆ ವಾಕ್ ಮಾಡುತ್ತಿದ್ದರು. ಈ ವೇಳೆ ಕೋತಿಗಳ ದೊಡ್ಡ ಗುಂಪು ಅವರುಗಳನ್ನು ಸುತ್ತುವರೆದಿದೆ.

ಇದರಿಂದ ಗಾಬರಿಗೊಂಡ ದಂಪತಿ ಮೆಟ್ಟಿಲುಗಳತ್ತ ಧಾವಿಸುವ ವೇಳೆ ಮಗು ಕೈತಪ್ಪಿ ಕೆಳಗೆ ಬಿದ್ದಿದೆ. ಆ ಸಂದರ್ಭ ಏಕಾಏಕಿ ಬಂದ ಕೋತಿಗಳು ಮಗುವನ್ನು ಎತ್ತಿಕೊಂಡು ಕೆಳಗೆಸೆದಿವೆ. ಇದರ ಪರಿಣಾಮ ಮಗು ಸ್ಥಳದಲ್ಲಿಯೇ ಸಾವನ್ನಪ್ಪಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...