alex Certify Shocking: ಉಕ್ರೇನ್​-ರಷ್ಯಾ ನಡುವಿನ ಬಿಕ್ಕಟ್ಟನ್ನು ‘ಅತ್ಯಾಕರ್ಷಕ’ ಎಂದು ಬಣ್ಣಿಸಿದ ಪಾಕ್​ ಪ್ರಧಾನಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Shocking: ಉಕ್ರೇನ್​-ರಷ್ಯಾ ನಡುವಿನ ಬಿಕ್ಕಟ್ಟನ್ನು ‘ಅತ್ಯಾಕರ್ಷಕ’ ಎಂದು ಬಣ್ಣಿಸಿದ ಪಾಕ್​ ಪ್ರಧಾನಿ….!

ಉಕ್ರೇನ್​ ಹಾಗೂ ರಷ್ಯಾ ನಡುವಿನ ಬಿಕ್ಕಟ್ಟಿನ ಮಧ್ಯದಲ್ಲೇ ಪಾಕಿಸ್ತಾನದ ಪ್ರಧಾನಿ ಇಮ್ರಾನ್​​ ಖಾನ್​ ರಷ್ಯಾಗೆ ಭೇಟಿ ನೀಡಿದ್ದಾರೆ. ರಷ್ಯಾ ಹಾಗೂ ಉಕ್ರೇನ್​​ನ ನಡುವಿನ ಯುದ್ಧವನ್ನು ಪಾಕ್​ ಪ್ರಧಾನಿ ಇಮ್ರಾನ್ ಖಾನ್​ ಅತ್ಯಾಕರ್ಷಕ ಎಂದು ಬಣ್ಣಿಸಿದ್ದಾರೆ.‌

ಎಂತಹ ಸಮಯ…! ನಾನು ತುಂಬಾ ಸಂಭ್ರಮದಿಂದ ಇಲ್ಲಿಗೆ ಬಂದಿಳಿದ್ದೇನೆ ಎಂದು ರಷ್ಯಾಗೆ ಬಂದಿಳಿಯುತ್ತಿದ್ದಂತೆಯೇ ಇಮ್ರಾನ್​ ಖಾನ್​ ಅಧಿಕಾರಿಯೊಬ್ಬರ ಬಳಿ ಹೇಳಿದ್ದಾರೆ. ಅಧಿಕಾರಿಯ ಜೊತೆಯಲ್ಲಿ ಪಾಕ್​ ಪ್ರಧಾನಿ ಇಮ್ರಾನ್​ ಖಾನ್​​ರ ಸಂವಾದದ ವಿಡಿಯೋ ಇದೀಗ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

ಪಾಕ್​ ಪ್ರಧಾನಿ ಇಮ್ರಾನ್​ ಖಾನ್​ ನಿನ್ನೆಯಿಂದ ಎರಡು ದಿನಗಳ ರಷ್ಯಾ ಪ್ರವಾಸದಲ್ಲಿದ್ದಾರೆ. ಕಳೆದ ಎರಡು ದಶಕಗಳಲ್ಲಿ ಪಾಕ್​ನ ಪ್ರಧಾನಿ ಇದೇ ಮೊದಲ ಬಾರಿಗೆ ರಷ್ಯಾಗೆ ಭೇಟಿ ನೀಡಿದ್ದಾರೆ. ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸಲು ಹಾಗೂ ಇಂಧನ ವಲಯದಲ್ಲಿ ಸಹಕಾರವನ್ನು ಇನ್ನಷ್ಟು ವಿಸ್ತರಿಸಲು ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​ರೊಂದಿಗೆ ಇಮ್ರಾನ್​ ಖಾನ್​ ಮಾತುಕತೆ ನಡೆಸಲಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...