alex Certify ಗೃಹ ಬಳಕೆ ಸಿಲಿಂಡರ್ ರೀಫಿಲ್ಲಿಂಗ್ ದಂಧೆ: ಪೊಲೀಸ್, ಆಹಾರ ಇಲಾಖೆ ಜಂಟಿ ದಾಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗೃಹ ಬಳಕೆ ಸಿಲಿಂಡರ್ ರೀಫಿಲ್ಲಿಂಗ್ ದಂಧೆ: ಪೊಲೀಸ್, ಆಹಾರ ಇಲಾಖೆ ಜಂಟಿ ದಾಳಿ

ಶಿವಮೊಗ್ಗ: ಪೊಲೀಸ್ ಇಲಾಖೆ ಹಾಗೂ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಜಂಟಿ ನೇತೃತ್ವದ ತಂಡದಿಂದ ದಾಳಿ ನಡೆಸಿ, ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ಗಳನ್ನು ಅಕ್ರಮವಾಗಿ ಡಂಪಿಂಗ್ ಮತ್ತು ರೀಫಿಲ್ಲಿಂಗ್ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಲಾಗಿದೆ.

ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಸವಾಯಿಪಾಳ್ಯದಲ್ಲಿ ಆರೋಪಿಯು ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ಗಳನ್ನು ಬೇರೆ ಸಿಲಿಂಡರ್ ಗಳಿಗೆ ಮತ್ತು ವಾಹನಗಳಿಗೆ ಅಕ್ರಮವಾಗಿ ಡಂಪಿಂಗ್ ಮತ್ತು ರೀಫಿಲ್ಲಿಂಗ್ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿದೆ.

ಆರೋಪಿ ಸಮೀರ್ ಅಹಮದ್(34) ನನ್ನು ವಶಕ್ಕೆ ಪಡೆದು, ಆರೋಪಿತನಿಂದ ಹೆಚ್.ಪಿ ಕಂಪನಿಯ ಗೃಹ ಬಳಕೆಯ ಒಟ್ಟು 8 ಗ್ಯಾಸ್ ತುಂಬಿದ ಸಿಲಿಂಡರ್ ಗಳು ಮತ್ತು 1 ಖಾಲಿ ಸಿಲಿಂಡರ್, ಟೋಟಲ್ ಕಂಪನಿಯ ಒಟ್ಟು 6 ಗ್ಯಾಸ್ ತುಂಬಿದ ಸಿಲಿಂಡರ್ ಗಳು ಮತ್ತು 2 ಖಾಲಿ ಸಿಲಿಂಡರ್ ಗಳು, ಎಲೆಕ್ಟ್ರಾನಿಕ್ ತೂಕದ ಯಂತ್ರ ಮತ್ತು ಡಂಪಿಂಗ್ ಮತ್ತು ರೀಫಿಲ್ಲಿಂಗ್ ಮಾಡಲು ಬಳಸುತ್ತಿದ್ದ ಮೋಟಾರ್ ವಶಪಡಿಸಿಕೊಳ್ಳಲಾಗಿದೆ.

ದೊಡ್ಡಪೇಟೆ ಪೊಲೀಸ್ ಠಾಣೆಯ ಸಿಪಿಐ ವಸಂತಕುಮಾರ್, ಪಿಎಸ್ಐ ಶಂಕರ್ ಮೂರ್ತಿ, ಎಎಸ್ಐ ಮಂಜುನಾಥ್ ಹಾಗೂ ಸಿಬ್ಬಂದಿಗಳಾದ ಹೆಚ್.ಸಿ ಲಚ್ಚಾನಾಯ್ಕ್, ಸುಬ್ರಾಯ ಹಾಗೂ ಪಿ.ಸಿ. ಸುದರ್ಶನ್ ಮತ್ತು ರಮೇಶ್ ಅವರ ತಂಡ ಹಾಗೂ  ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಆಹಾರ ನಿರೀಕ್ಷಕ ಶಿವಾನಂದ್ ಅಜ್ಜಂಪುರ ಅವರನ್ನೊಳಗೊಂಡ ಜಂಟಿ ನೇತೃತ್ವದ ತಂಡವು ಕಾರ್ಯಾಚರಣೆ ನಡೆಸಿದೆ.

ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಆರೋಪಿತನನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ ಎಂದು  ಪೊಲೀಸ್ ಅಧೀಕ್ಷಕ ಕೆ.ಎಂ. ಶಾಂತರಾಜು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...