alex Certify ಪ್ರಧಾನಿ ಮಧ್ಯೆ ಪ್ರವೇಶಕ್ಕೆ ಉದ್ಧವ್‌ ಠಾಕರೆ ಆಗ್ರಹ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಧಾನಿ ಮಧ್ಯೆ ಪ್ರವೇಶಕ್ಕೆ ಉದ್ಧವ್‌ ಠಾಕರೆ ಆಗ್ರಹ

ಬೆಂಗಳೂರಿನಲ್ಲಿ ಛತ್ರಪತಿ ಶಿವಾಜಿ ಮಹಾರಾಜ್‌ ಪ್ರತಿಮೆಯನ್ನು ಧ್ವಂಸಗೊಳಿಸಿದ ಘಟನೆಯನ್ನು ಖಂಡಿಸಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕರೆ, ಶಿವಾಜಿ ತಮಗೆ ಮಾತ್ರ ’ದೈವಸ್ವರೂಪಿ’ ಅಲ್ಲ, ಬದಲಾಗಿ ಇಡೀ ದೇಶಕ್ಕೇ ಆಗಿದ್ದಾರೆ, ಅವರಿಗೆ ಅವಮಾನವಾದರೆ ಸಹಿಸಲು ಸಾಧ್ಯವಿಲ್ಲ ಎಂದಿದ್ದಾರೆ.

ಈ ವಿಷಯದಲ್ಲಿ ವೈಯಕ್ತಿಕವಾಗಿ ಮಧ್ಯ ಪ್ರವೇಶಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಉದ್ಧವ್‌ ಠಾಕರೆ ಆಗ್ರಹಿಸಿದ್ದಾರೆ. “ಕರ್ನಾಟಕದಲ್ಲಿ ಮರಾಠಿ ಮಾತನಾಡುವ ಮಂದಿಯ ವಿರುದ್ಧ ಬಹಳ ದಿನಗಳಿಂದ ದೌರ್ಜನ್ಯಗಳು ನಡೆಯುತ್ತಿವೆ, ನಮ್ಮ ಪ್ರೀತಿಯ ದೈವಮಾನವನಿಗೆ ಅವಮಾನ ಮಾಡುವ ಘಟನೆ ನಡೆದಿದ್ದು, ಅಲ್ಲಿನ ಸರ್ಕಾರ ಇದಕ್ಕೆ ಜಾಣಗುರುಡುತನ ಪ್ರದರ್ಶಿಸಿದೆ,” ಎಂದು ಉದ್ಧವ್‌ ಠಾಕರೆ ತಿಳಿಸಿದ್ದಾರೆ.

ಶಾಶ್ವತವಾಗಿ ʼವರ್ಕ್‌ ಫ್ರಂ ಹೋಂʼ ಬಯಸುತ್ತಿದ್ದೀರಾ…? ಹಾಗಾದ್ರೆ ಇಲ್ಲಿದೆ ನಿಮಗೆ ಮುಖ್ಯ ಮಾಹಿತಿ

ಕಾಶಿ ವಿಶ್ವನಾಥ ಧಾಮದ ಉದ್ಘಾಟನೆ ಸಂದರ್ಭದಲ್ಲಿ ಛತ್ರಪತಿ ಶಿವಾಜಿರಂಥ ದೊಡ್ಡ ಸಾಮ್ರಾಟರ ಉಗಮದಿಂದಾಗಿ ದೇಶದ ಸಂಸ್ಕೃತಿಯನ್ನು ಹೊಸಕಿ ಹಾಕುವ ಯತ್ನಗಳು ಫಲಿಸಲಿಲ್ಲ ಎಂದು ಪ್ರಧಾನಿ ಹೇಳಿದ್ದನ್ನು ಸ್ಮರಿಸಿದ ಉದ್ಧವ್‌ ಠಾಕರೆ, “ಛತ್ರಪತಿ ಶಿವಾಜಿ ಮಹಾರಾಜರ ಹೆಸರನ್ನು ಬರೀ ರಾಜಕೀಯವಾಗಿ ಮಾತ್ರ ಬಳಸಲಾಗುತ್ತಿದ್ದು, ನಮ್ಮ ದೇವರಿಗೆ ಅವಮಾನವಾದಾಗ ಅವರು ಕ್ರಮ ಜರುಗಿಸುತ್ತಿಲ್ಲ,” ಎಂದು ಆಪಾದಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...