ಮಂಗಳೂರು ಮೂಲದ ಶಿಲ್ಪಾ ಶೆಟ್ಟಿ ಬಹುಮುಖ ಪ್ರತಿಭೆ. ಸಿನೆಮಾ, ರಿಯಾಲಿಟಿ ಷೋ, ಯೋಗಾಭ್ಯಾಸ, ಫಿಟ್ ನೆಸ್, ಬರಹ ಹೀಗೆ ತನ್ನನ್ನು ತಾನು ಅನೇಕ ರೀತಿಯಲ್ಲಿ ತೊಡಗಿಸಿಕೊಂಡಿದ್ದಾರೆ.
ಕೆಲವು ವಾರಗಳ ಹಿಂದೆ, ಪತಿ ರಾಜ್ ಕುಂದ್ರಾ ಅಶ್ಲೀಲ ಚಿತ್ರ ತಯಾರಿಕೆ ಪ್ರಕರಣವೊಂದರಲ್ಲಿ ಜೈಲು ಸೇರಿದ ಮೇಲೆ ಮಂಕಾಗಿದ್ದ ಶಿಲ್ಪಾ ಈಗೀಗ ಅದರಿಂದ ಹೊರಬರಲು ಪ್ರಯತ್ನ ಮಾಡುತ್ತಿದ್ದಾರೆ.
‘ಅಲ್ಲು ಅರ್ಜುನ್ ಅಂದ್ರೆ ಅದ್ಭುತ’ ಎಂದ ನಟಿ ರಶ್ಮಿಕಾ ಮಂದಣ್ಣ
ಅವಮಾನದಿಂದ ನೊಂದ ಶಿಲ್ಪಾಳಿಗೆ, ತಂಗಿ ಶಮಿತಾಳು ಬಿಗ್ ಬಾಸ್ ಓಟಿಟಿ ಕಾರ್ಯಕ್ರಮದಲ್ಲಿ ಅಂತಿಮ ಐವರಲ್ಲಿ ಒಬ್ಬಳಾಗಿರುವುದನ್ನು ನೋಡಿ ಸ್ವಲ್ಪಮಟ್ಟಿಗೆ ಸಂತೋಷವಾಗಿದೆಯಂತೆ.
ತಂಗಿಯನ್ನು ಈ ಸ್ಪರ್ಧೆಯಲ್ಲಿ ವಿಜೇತಾಳನ್ನಾಗಿ ಮಾಡಿ ಎಂದು ಅಭಿಮಾನಿಗಳಿಗೆ ತನ್ನ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಕೇಳಿಕೊಂಡಿದ್ದಾರೆ.
“ನನ್ನ ಟುಂಕಿ, ತನ್ನ ಬಲದಿಂದಲೇ ಇಷ್ಟು ದೂರ ಬಂದಿದ್ದಾಳೆ, ನನಗೆ ತುಂಬಾ ಹೆಮ್ಮೆಯಾಗುತ್ತಿದೆ. ನನ್ನ ಪಾಲಿಗೆ, ಈಗಾಗಲೇ ಅವಳು ಗೆದ್ದುಬಿಟ್ಟಿದ್ದಾಳೆ ” ಎಂದು ತಂಗಿ ಬಗ್ಗೆ ಹೇಳಿಕೊಂಡಿದ್ದಾರೆ.
ʼನವ ವಿವಾಹಿತʼರಿಗೆ ಇಲ್ಲಿದೆ ಟಿಪ್ಸ್
ಬಿಗ್ ಬಾಸ್ ಓಟಿಟಿ ಕಾರ್ಯಕ್ರಮಕ್ಕೆ ಕಾಲಿಟ್ಟ ದಿನದಿಂದಲೂ ಶಮಿತಾ ಶೆಟ್ಟಿ ಮತ್ತು ರಾಕೇಶ್ ಬಾಪಟ್ ಹೆಚ್ಚು ಆಪ್ತರಾಗುತ್ತಿದ್ದು, ಸದಾ ಸುದ್ದಿಯಲ್ಲಿ ಇದ್ದಾರೆ. ಶಮಿತಾಳ ಸಹ ಸ್ಪರ್ಧಿಗಳು, ಶಮಿತಾ, ರಾಕೇಶನನ್ನು ತನ್ನ ಮುಷ್ಟಿಯಲ್ಲಿ ಹಿಡಿದುಕೊಂಡಿದ್ದಾಳೆ ಎಂದು ಆರೋಪ ಮಾಡುತ್ತಲೇ ಇದ್ದಾರೆ.
ಅದು ಏನೇ ಇರಲಿ, ಇವರಿಬ್ಬರು ತುಂಬಾ ಹತ್ತಿರವಾಗುತ್ತಿದ್ದು, ಬಿಗ್ ಬಾಸ್ ಓಟಿಟಿ ಕಾರ್ಯಕ್ರಮದ ನಂತರವೂ ಹೊರಗಡೆ ಭೇಟಿ ಮಾಡುತ್ತೇವೆ ಎಂದು ಹೇಳಿಕೊಂಡಿದ್ದಾರೆ.
ಸೆಪ್ಟೆಂಬರ್ 18, ಸಂಜೆ 7ಕ್ಕೆ ವೂಟ್ ಆಪ್ ನಲ್ಲಿ ಬಿಗ್ ಬಾಸ್ ಓಟಿಟಿ ಕಾರ್ಯಕ್ರಮವು ನೇರ ಪ್ರಸಾರವಾಗಲಿದ್ದು, ಗೆಲುವು ಯಾರದೆಂದು ಜನರು ಕಾದು ನೋಡುತ್ತಿದ್ದಾರೆ.
https://www.instagram.com/p/CT67QkhDQ0k/?utm_source=ig_embed&ig_rid=beaa16ec-8101-43de-b060-b8c407c47f5e