alex Certify ‘ಅಲ್ಲು ಅರ್ಜುನ್ ಅಂದ್ರೆ ಅದ್ಭುತ’ ಎಂದ ನಟಿ ರಶ್ಮಿಕಾ ಮಂದಣ್ಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಅಲ್ಲು ಅರ್ಜುನ್ ಅಂದ್ರೆ ಅದ್ಭುತ’ ಎಂದ ನಟಿ ರಶ್ಮಿಕಾ ಮಂದಣ್ಣ

ಒಂದು ಟೈಮಿನಲ್ಲಿ ಕರ್ನಾಟಕದ ಕ್ರಶ್ ಆಗಿದ್ದ ನಟಿ ರಶ್ಮಿಕಾ ಮಂದಣ್ಣ ಈಗ ನ್ಯಾಷನಲ್ ಕ್ರಷ್ ಆಗಿದ್ದಾರೆ. ಕನ್ನಡ, ತಮಿಳು, ತೆಲುಗು, ಹಿಂದಿ ಸಿನಿಮಾಗಳಲ್ಲಿ ನಟಿಸಿ ಸೈ ಅನಿಸಿಕೊಂಡಿದ್ದಾರೆ. ಸದ್ಯ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಿಂದ ಬ್ಯುಸಿಯಾಗಿದ್ದಾರೆ ರಶ್ಮಿಕಾ ಮಂದಣ್ಣ. ನಟ ಅಲ್ಲು ಅರ್ಜುನ್ ಜೊತೆ ಪುಷ್ಪ ಸಿನಿಮಾದಲ್ಲಿ ನಟಿಸಿದ್ದು, ಅಭಿಮಾನಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ.

ಅಭಿಮಾನಿಗಳೊಂದಿಗೆ ಲೈವ್ ಸೆಷನ್ ನಲ್ಲಿ ಪಾಲ್ಗೊಂಡ ನಟಿ ಸಂವಾದ ನಡೆಸಿದ್ದಾರೆ. ಈ ವೇಳೆ ಅಲ್ಲು ಅರ್ಜುನ್ ಅವರನ್ನು ಒಂದೇ ಪದದಲ್ಲಿ ವಿವರಿಸುವಂತೆ ಅಭಿಮಾನಿಯೊಬ್ಬರು ಹೇಳಿದ್ರು. ಅದಕ್ಕೆ ಉತ್ತರಿಸಿದ ರಶ್ಮಿಕಾ, ಅಲ್ಲು ಅವರನ್ನು ಒಂದೇ ಪದದಲ್ಲಿ ವಿವರಿಸುವುದು ಕಷ್ಟ ಸಾಧ್ಯ. ‘ಅಲ್ಲು ಅರ್ಜುನ್ ಅಂದ್ರೆ ಅದ್ಭುತ’ ಅಂತಾ ಹೇಳಿದ್ದಾರೆ.

ಇನ್ನು ಪುಷ್ಪ ಚಿತ್ರದ ಬಗ್ಗೆ ಮಾತನಾಡುತ್ತಾ, ಇದು ಒಂದು ಸೆನ್ಸೇಷನಲ್ ಚಿತ್ರವಾಗಲಿದೆ ಎಂದು ಅವರು ತಿಳಿಸಿದ್ದಾರೆ. ಆದರೆ, ಅಭಿಮಾನಿಯೊಬ್ಬರು ಪಾತ್ರದ ಬಗ್ಗೆ ವಿವರಗಳನ್ನು ಹಂಚಿಕೊಳ್ಳಲು ಕೇಳಿದ್ದಕ್ಕೆ ರಶ್ಮಿಕಾ ಏನನ್ನೂ ಹಂಚಿಕೊಳ್ಳಲಿಲ್ಲ. “ನನ್ನ ಪಾತ್ರದ ಬಗ್ಗೆ ನಾನು ಏನೂ ಹೇಳಲಾರೆ, ಏಕೆಂದರೆ ನಿರ್ದೇಶಕರು ಮತ್ತು ನಿರ್ಮಾಪಕರು ನನ್ನನ್ನು ತುಂಬಾ ಇಷ್ಟಪಡುತ್ತಾರೆ. ನಾನು ಅದನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ. ಆದರೆ ಪುಷ್ಪ ಒಂದು ಸೆನ್ಸೇಷನಲ್ ಚಿತ್ರವಾಗಲಿದೆ” ಎಂದಷ್ಟೇ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...