alex Certify ವಿವಾಹ ವೇದಿಕೆಯಾಯ್ತು ಆಸ್ಪತ್ರೆ…! ಇದರ ಹಿಂದಿದೆ ಕರುಣಾಜನಕ ಕಥೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿವಾಹ ವೇದಿಕೆಯಾಯ್ತು ಆಸ್ಪತ್ರೆ…! ಇದರ ಹಿಂದಿದೆ ಕರುಣಾಜನಕ ಕಥೆ

ಟೆಕ್ಸಾಸ್: ಮದುವೆ ಅನ್ನುವುದು ಪ್ರತಿಯೊಬ್ಬರ ಜೀವನದಲ್ಲಿ ಪ್ರಮುಖ ಕ್ಷಣ. ತಮ್ಮ ಕಲ್ಯಾಣದ ಬಗ್ಗೆ ಹಲವು ರೀತಿಯ ಕನಸು ಕಟ್ಟಿಕೊಂಡಿರುತ್ತಾರೆ. ಸಮುದ್ರದಾಳದಲ್ಲಿ, ವಿಮಾನದಲ್ಲಿ ಹೀಗೆ ಇನ್ನಿತರೆ ರೀತಿಯಲ್ಲಿ ವಿಶಿಷ್ಟವಾಗಿ ಮದುವೆಯಾದವರಿದ್ದಾರೆ. ಆದರೆ ಇಲ್ಲೊಂದೆಡೆ ಆಸ್ಪತ್ರೆಯಲ್ಲಿ ವಧು – ವರ ವಿವಾಹ ಬಂಧನಕ್ಕೊಳಗಾಗಿದ್ದಾರೆ.

ಹೌದು, ಈ ಹೃದಯಸ್ಪರ್ಶಿ ಘಟನೆ ನಡೆದಿರುವುದು ಅಮೆರಿಕಾದ ದಕ್ಷಿಣ ಟೆಕ್ಸಾಸ್ ನಲ್ಲಿ. ಮದುವೆಯ ಸಮಯದಲ್ಲಿ ಪ್ರೀತಿಪಾತ್ರರು ತಮ್ಮ ಜೊತೆಗೆ ಇರಬೇಕೆಂದು ಬಯಸುತ್ತಾರೆ. ಹಾಗೆಯೇ ನವವಧುವಿಗೂ ತನ್ನ ಮದುವೆಯಲ್ಲಿ ಅಜ್ಜಿ ಇರಬೇಕೆಂಬ ಬಯಕೆಯಿತ್ತು.

ಶಿವಮೊಗ್ಗ: ಹಾಡಹಗಲೇ ವ್ಯಕ್ತಿಯ ಕೊಲೆ

ಆದರೆ ವಧುವಿನ ಅಜ್ಜಿಗೆ ಶ್ವಾಸಕೋಶದ ಕ್ಯಾನ್ಸರ್ ಇದ್ದುದ್ದರಿಂದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಹೀಗಾಗಿ ಆಸ್ಪತ್ರೆಯಲ್ಲೇ ಮದುವೆ ಮಾಡಿಕೊಳ್ಳಬೇಕು ಎಂದು ವಧು ನಿರ್ಧರಿಸಿದ್ದಾಳೆ. ಆಸ್ಪತ್ರೆಯವರ ಒಪ್ಪಿಗೆ ಪಡೆದು ಅಜ್ಜಿಯ ಎದುರಲ್ಲಿ ವಧು – ವರ ಮದುವೆಯಾಗಿದ್ದು, ನೆರೆದಿದ್ದವರ ಕಣ್ಣಂಚಲ್ಲಿ ಕಣ್ಣೀರು ಜಿನುಗಿದೆ. ಈ ದೃಶ್ಯವನ್ನು ಫೇಸ್ಬುಕ್ ನಲ್ಲಿ ಮೆಥೋಡಿಸ್ಟ್ ಆರೋಗ್ಯ ಕೇಂದ್ರ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...