alex Certify ತಾಲಿಬಾನ್ ಪರ ಪಾಕ್ ಕ್ರಿಕೆಟಿಗನ ಬ್ಯಾಟಿಂಗ್: ನಾಚಿಕೆಗೇಡು ಎಂದು ನೆಟ್ಟಿಗರು ಗರಂ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಾಲಿಬಾನ್ ಪರ ಪಾಕ್ ಕ್ರಿಕೆಟಿಗನ ಬ್ಯಾಟಿಂಗ್: ನಾಚಿಕೆಗೇಡು ಎಂದು ನೆಟ್ಟಿಗರು ಗರಂ

ಇಸ್ಲಮಾಬಾದ್: ಪಾಕಿಸ್ತಾನ ಕ್ರಿಕೆಟಿಗ ಶಾಹಿದ್ ಅಫ್ರಿದಿ, ತಾಲಿಬಾನ್ ಪರ ಬ್ಯಾಟಿಂಗ್ ಮಾಡಿದ್ದಾರೆ. ತಾಲಿಬಾನ್ ಕ್ರಿಕೆಟ್ ಮೇಲಿನ ಪ್ರೀತಿಯ ಬಗ್ಗೆ ಹೇಳಿಕೆ ನೀಡಿರುವುದು ಭಾರಿ ಕೋಲಾಹಲಕ್ಕೆ ಕಾರಣವಾಗಿದೆ.

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಕ್ರೌರ್ಯದ ನಂತರ ಹಲವಾರು ಮಂದಿ ದೇಶದಿಂದ ಪಲಾಯನ ಮಾಡುತ್ತಿದ್ದಾರೆ. ಆದರೆ ಪಾಕಿಸ್ತಾನ ಕ್ರಿಕೆಟಿಗ ತಾಲಿಬಾನ್ ಪರ ಬ್ಯಾಟಿಂಗ್ ಬೀಸಿದ್ದಾರೆ. “ಹಿಂದಿನದಕ್ಕೆ ಹೋಲಿಸಿದರೆ ತಾಲಿಬಾನ್ ಒಳ್ಳೆಯದು ಎಂದು ತೋರುತ್ತಿದೆ. ಏಕೆಂದರೆ ಅವರು, ರಾಜಕೀಯ ಸೇರಿದಂತೆ ಮಹಿಳೆಯರಿಗೆ ಕೆಲಸ ಮಾಡಲು ಅವಕಾಶ ನೀಡುತ್ತಿದ್ದಾರೆ. ಅಲ್ಲದೆ ತಾಲಿಬಾನ್ ಕ್ರಿಕೆಟ್ ಅನ್ನು ಪ್ರೀತಿಸುತ್ತದೆ ಮತ್ತು ಬೆಂಬಲ ನೀಡುತ್ತದೆ” ಎಂದು ಹೇಳಿದ್ದಾರೆ.

BIG BREAKING: ರಾಜ್ಯದಲ್ಲಿಂದು 1217 ಜನರಿಗೆ ಸೋಂಕು, 25 ಮಂದಿ ಸಾವು

ಅಫ್ರಿದಿಯ ಈ ಆಘಾತಕಾರಿ ಹೇಳಿಕೆ ತ್ವರಿತವಾಗಿ ವೈರಲ್ ಆಗಿದ್ದು, ಜನರನ್ನು ಕೆರಳಿಸಿದೆ. ಅಫ್ರಿದಿ ನಿಲುವು ತಾಲಿಬಾನ್ ಸ್ವಾಧೀನವನ್ನು ಖಂಡಿಸಿದ ಅಫ್ಘನ್ ಕ್ರಿಕೆಟಿಗರು ಹಾಗೂ ಕ್ರೀಡಾಪಟುಗಳಿಗಿಂತ ಭಿನ್ನವಾಗಿದೆ. ಪರಿಣಾಮಗಳಿಗೆ ಹೆದರಿ ಅನೇಕ ಮಂದಿ ದೇಶ ತೊರೆದಿದ್ದಾರೆ ಎಂದು ಅಫ್ರಿದಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಕ್ರಿಕೆಟ್ ಆಡುವ ಮಹಿಳೆಯರ ಬಗ್ಗೆ ಅಫ್ರಿದಿ ಅವಹೇಳನಕಾರಿಯಾಗಿ ಮಾತನಾಡಿರುವ ಹಳೆ ವಿಡಿಯೋವನ್ನು ಅನೇಕರು ಈ ವೇಳೆ ಹಂಚಿಕೊಂಡರು. ಅಫ್ರಿದಿಗೆ ನಾಚಿಕೆಯಾಗಬೇಕು ಅಂತೆಲ್ಲಾ  ತಮ್ಮ ಕೋಪ ಹೊರಹಾಕಿದ್ದಾರೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...