alex Certify ಶಕ್ತಿ ಯೋಜನೆ ಆರಂಭವಾದ ಮೂರೇ ದಿನದಲ್ಲಿ 98 ಲಕ್ಷ ಮಹಿಳೆಯರ ಉಚಿತ ಪ್ರಯಾಣ: ಟಿಕೆಟ್ ಮೊತ್ತ 21 ಕೋಟಿ ರೂ. | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಕ್ತಿ ಯೋಜನೆ ಆರಂಭವಾದ ಮೂರೇ ದಿನದಲ್ಲಿ 98 ಲಕ್ಷ ಮಹಿಳೆಯರ ಉಚಿತ ಪ್ರಯಾಣ: ಟಿಕೆಟ್ ಮೊತ್ತ 21 ಕೋಟಿ ರೂ.

ಬೆಂಗಳೂರು: ಮಹಿಳೆಯರ ಉಚಿತ ಪ್ರಯಾಣಕ್ಕಾಗಿ ಆರಂಭಿಸಿದ ಶಕ್ತಿ ಯೋಜನೆಯಡಿ ಕಳೆದ ಮೂರು ದಿನಗಳಲ್ಲಿ 98 ಲಕ್ಷ ಮಹಿಳೆಯರು ಉಚಿತವಾಗಿ ಪ್ರಯಾಣ ಬೆಳೆಸಿದ್ದಾರೆ.

ಮೂರು ದಿನದ ಪ್ರಯಾಣದ ಮೊತ್ತ 21 ಕೋಟಿ ರೂ, ಆಗಿದೆ. ಜೂನ್ 11ರಂದು ಶಕ್ತಿ ಯೋಜನೆಗೆ ಚಾಲನೆ ನೀಡಲಾಗಿತ್ತು. ಮೂರು ದಿನದ ಅವಧಿಯಲ್ಲಿ 98.58 ಲಕ್ಷ ಮಹಿಳೆಯರು ನಾಲ್ಕು ಸಾರಿಗೆ ನಿಗಮಗಳ ಬಸ್ ಗಳಲ್ಲಿ ಪ್ರಯಾಣ ಬೆಳೆಸಿದ್ದಾರೆ.

ಯೋಜನೆ ಆರಂಭವಾದ ಮೊದಲ ದಿನ 5.71 ಲಕ್ಷ ಮಹಿಳಾ ಪ್ರಯಾಣಿಕರು ರಾಜ್ಯ ಸಾರಿಗೆ ಬಸ್ ಗಳಲ್ಲಿ ಪ್ರಯಾಣಿಸಿದ್ದರು. ಸೋಮವಾರ 41.34 ಲಕ್ಷ, ಮಂಗಳವಾರ 51.52 ಲಕ್ಷ ಮಹಿಳೆಯರು ಸೇರಿದಂತೆ ಒಟ್ಟು 98.58 ಲಕ್ಷ ಮಹಿಳೆಯರು ಯೋಜನೆಯ ಪ್ರಯೋಜನ ಪಡೆದುಕೊಂಡಿದ್ದು, ಮೊದಲ ದಿನ 1.40 ಕೋಟಿ ರೂ., ಎರಡನೇ ದಿನ 8.83 ಕೋಟಿ ರೂ., ಮೂರನೇ ದಿನ 10.82 ಕೋಟಿ ರೂ. ಮೊತ್ತ ಆಗಿದೆ. ಮೊದಲ ಎರಡು ದಿನಕ್ಕಿಂತ ಮಂಗಳವಾರ ಹೆಚ್ಚಿನ ಸಂಖ್ಯೆಯ ಮಹಿಳೆಯರು ಪ್ರಯಾಣಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...