alex Certify BIG NEWS:‌ ಮೂರೇ ದಿನಗಳಲ್ಲಿ 200 ಕೋಟಿ ಕ್ಲಬ್​ ಸೇರುವ ಮೂಲಕ ಹೊಸ ದಾಖಲೆ ಬರೆದ ʼಜವಾನ್ʼ​ ಸಿನಿಮಾ! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS:‌ ಮೂರೇ ದಿನಗಳಲ್ಲಿ 200 ಕೋಟಿ ಕ್ಲಬ್​ ಸೇರುವ ಮೂಲಕ ಹೊಸ ದಾಖಲೆ ಬರೆದ ʼಜವಾನ್ʼ​ ಸಿನಿಮಾ!

ಬಾಲಿವುಡ್​ ಬಾದ್​ಶಾ ತಾವೇಕೆ ಬಾಲಿವುಡ್​ನ ಕಿಂಗ್​ ಅನ್ನೋದನ್ನ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ..! ಶಾರೂಕ್ ಖಾನ್​ ನಟನೆಯ ಜವಾನ್​ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಭಾರೀ ಸದ್ದು ಮಾಡ್ತಿದೆ. ಇದು ಶಾರೂಕ್​ ಖಾನ್​ರ ಈ ಹಿಂದಿನ ಸಿನಿಮಾಗಳು ಮಾಡಿರುವ ದಾಖಲೆಯನ್ನೇ ಮುರಿಯುವ ಮೂಲಕ ರೆಕಾರ್ಡ್ ಬ್ರೇಕ್​ ಮೂವಿ ಎನಿಸಿಕೊಳ್ತಿದೆ. ಸಿನಿಮಾ ತೆರೆಕಂಡು ಕೇವಲ ಮೂರು ದಿನಗಳಲ್ಲಿ ಜವಾನ್​ ಸಿನಿಮಾ 200 ಕೋಟಿ ಕ್ಲಬ್​ ಸೇರಿದ ಮೊದಲ ಹಿಂದಿ ಸಿನಿಮಾ ಎನಿಸಿಕೊಂಡಿದೆ.

ಜವಾನ್​ ಸಿನಿಮಾ ಸೆಪ್ಟೆಂಬರ್​ 7ರಂದು ಶ್ರೀಕೃಷ್ಣ ಜನ್ಮಾಷ್ಟಮಿಯಂದು ರಿಲೀಸ್ ಆಗಿದೆ. ಈ ಸಿನಿಮಾ ರಿಲೀಸ್ ಆದ ಮೊದಲ ದಿನವೇ ವ್ಯಾಪಕ ರೆಸ್ಪಾನ್ಸ್ ಪಡೆದುಕೊಳ್ತಿದೆ. ಸಿನಿಮಾ ವಿಮರ್ಶಕರು ಸಹ ಜವಾನ್​ ಸಿನಿಮಾದ ಬಗ್ಗೆ ಉತ್ತಮ ಸ್ಪಂದನೆ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ಬಾಲಿವುಡ್​ನ ಅತ್ಯುತ್ತಮ ಸಿನಿಮಾಗಳ ಸಾಲಿಗೆ ಜವಾನ್​ ಸಿನಿಮಾ ಸೇರ್ಪಡೆಗೊಂಡಿದೆ.

ಜವಾನ್​ ಸಿನಿಮಾದ ಮೂಲಕ ಶಾರೂಕ್ ಖಾನ್​ ಮೊಟ್ಟ ಮೊದಲ ಬಾರಿಗೆ ದಕ್ಷಿಣ ಭಾರತದ ಫೇಮಸ್​ ಕಲಾವಿದರ ಜೊತೆ ಸ್ಕ್ರೀನ್ ಶೇರ್​ ಮಾಡಿದ್ದಾರೆ. ಖ್ಯಾತ ನಟ ವಿಜಯ್​ ಸೇತುಪತಿ ಹಾಗೂ ನಯನತಾರಾ ಈ ಸಿನಿಮಾದಲ್ಲಿ ಸ್ಟ್ರಾಂಗ್​ ರೋಲ್​ನಲ್ಲಿ ಕಾಣಿಸಿಕೊಂಡಿದ್ದಾರೆ. ದಕ್ಷಿಣ ಭಾರತದ ಅಟ್ಲೀ ಕೂಡ ಚಿತ್ರತಂಡದಲ್ಲಿದ್ದಾರೆ.

ಜವಾನ್​ ಬಾಕ್ಸಾಫೀಸಿನಲ್ಲಿ ಅಬ್ಬರದ ಆರಂಭ ಕಂಡಿತ್ತು. ಮೊದಲ ದಿನವೇ ಜವಾನ್​ 75 ಕೋಟಿ ಕ್ಲಬ್​ ಸೇರಿದೆ. ಎರಡನೇ ದಿನದಲ್ಲಿ 53 ಕೋಟಿ ರೂಪಾಯಿ ಸಂಪಾದಿಸುವ ಮೂಲಕ ಎರಡೇ ದಿನಗಳಲ್ಲಿ ಜವಾನ್​ 100 ಕೋಟಿ ರೂಪಾಯಿ ಕ್ಲಬ್​ ಸೇರಿದೆ. ಮೂರನೇ ದಿನ ಅಂದ್ರೆ ಶನಿವಾರದಂದು 74.50 ಕೋಟಿ ರೂಪಾಯಿ ಸಂಪಾದಿಸುವ ಮೂಲಕ ಜವಾನ್​ ಸಿನಿಮಾವು 202.73 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ.

 

https://www.instagram.com/reel/Cwhaknpo-_L/?utm_source=ig_web_copy_link&igshid=MzRlODBiNWFlZA==

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...