alex Certify ವೀಸಾ ಬೇಕೆಂದರೆ ಸೆಕ್ಸ್​ ಗೆ ಸಹಕರಿಸು: ಪಾಕ್​ ಅಧಿಕಾರಿಗಳ ಭಯಾನಕ ರೂಪ ಬಯಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೀಸಾ ಬೇಕೆಂದರೆ ಸೆಕ್ಸ್​ ಗೆ ಸಹಕರಿಸು: ಪಾಕ್​ ಅಧಿಕಾರಿಗಳ ಭಯಾನಕ ರೂಪ ಬಯಲು

ನವದೆಹಲಿ: ಸಂಪೂರ್ಣ ದಿವಾಳಿಯಲ್ಲಿ ಮುಳುಗಿದರೂ ಪಾಕಿಸ್ತಾನಿಗಳಿಗೆ ಬುದ್ಧಿ ಬಂದಂತೆ ಕಾಣುತ್ತಿಲ್ಲ. ಇದೀಗ ವೀಸಾಕ್ಕಾಗಿ ಅರ್ಜಿ ಸಲ್ಲಿಸಲು ಹೋದ ಮಹಿಳೆಯೊಬ್ಬರಿಂದ ಸೆಕ್ಸ್​ ಬಯಕೆ ಸಲ್ಲಿಸಿರುವ ಆತಂಕಕಾರಿ ಘಟನೆ ಬೆಳಕಿಗೆ ಬಂದಿದೆ. ದೆಹಲಿಯಲ್ಲಿರುವ ಪಾಕಿಸ್ತಾನ ಹೈಕಮಿಷನ್‌ನ ಇಬ್ಬರು ಅಧಿಕಾರಿಗಳು ಭಾರತೀಯ ಮಹಿಳೆ ಮುಂದೆ ಈ ಬೇಡಿಕೆ ಇಟ್ಟಿದ್ದಾರೆ.

ಪ್ರೊಫೆಸರ್ ಒಬ್ಬರು ಪಾಕಿಸ್ತಾನಕ್ಕೆ ವೀಸಾ ಬೇಕೆಂದು ಹೋದಾಗ ಅಧಿಕಾರಿಗಳಿಂದ ಈ ಬಯಕೆ ವ್ಯಕ್ತವಾಗಿದೆ ಎಂದು ಅವರು ಆರೋಪಿಸಿದ್ದಾರೆ. ತಾಹಿರ್ ಅಬ್ಬಾಸ್ ಮತ್ತು ಆಸಿಫ್ ಎಂಬ ಪಾಕಿಸ್ತಾನಿ ಅಧಿಕಾರಿಗಳು ತಮಗೆ ಲೈಂಗಿಕ ಕಿರುಕುಳ ನೀಡಿದರು ಒಂದು ಪ್ರೊಫೆಸರ್​ ತಿಳಿಸಿದ್ದಾರೆ.

ಲಾಹೋರ್‌ಗೆ ಭೇಟಿ ನೀಡಲು ಪಾಕಿಸ್ತಾನ ಹೈಕಮಿಷನ್‌ನಲ್ಲಿ ತನ್ನ ವೀಸಾ ಅರ್ಜಿಗಾಗಿ ಅಪಾಯಿಂಟ್‌ಮೆಂಟ್ ಕಾಯ್ದಿರಿಸಿದ್ದೆ. ವೀಸಾ ಸಂದರ್ಶನದ ಸಮಯದಲ್ಲಿ, ಸಿಬ್ಬಂದಿ ಅನುಚಿತವಾದ ಪ್ರಶ್ನೆಗಳನ್ನು ಕೇಳಿ ನಂತರ ಸೆಕ್ಸ್​ ಮಾಡಿದರೆ 24 ಗಂಟೆಯ ಒಳಗೆ ವೀಸಾ ಕೊಡುವುದಾಗಿ ಹೇಳಿದರು ಎಂದಿದ್ದಾರೆ. ಈ ದೂರಿನ ಅನ್ವಯ ಏನು ಕ್ರಮ ತೆಗೆದುಕೊಳ್ಳಲಾಗುತ್ತದೆಯೋ ಕಾದು ನೋಡಬೇಕಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...