ತಮ್ಮ ತಾಯಂದಿರಂತೆಯೇ ಬೆಳ್ಳಂಬೆಳಗ್ಗೆಯೇ ತಮ್ಮ ದಿನಚರಿ ಆರಂಭಿಸುವ ಮಾರಿಯಾ, ತಮ್ಮ ಮಕ್ಕಳಾದ 11 ವರ್ಷದ ಮೈಕೆಲ್ಲಿ ಹಾಗೂ 6 ವರ್ಷದ ನಿಕೋಲ್ ಆನ್ಲೈನ್ ಕ್ಲಾಸ್‌ಗಳನ್ನು ಅಟೆಂಡ್ ಮಾಡುತ್ತಿದ್ದಾರೆ ಎಂದು ಖಾತ್ರಿಪಡಿಸಿಕೊಂಡು ಅಡುಗೆ ಮನೆಯ ಕೆಲಸದತ್ತ ಚಿತ್ತ ಹರಿಸುತ್ತಾರೆ.
ಆದರೆ ಮಾರಿಯಾ ತಮ್ಮ ಮಕ್ಕಳ ಪೋಷಣೆಯನ್ನು ಸಾವಿರಾರು ಮೈಲು ದೂರದಿಂದ ಮಾಡುತ್ತಿದ್ದಾರೆ. ಹೌದು, ಸ್ಮಾರ್ಟ್‌ಫೋನ್ ಬಳಸುವ ಮೂಲಕ ಮಾರಿಯಾ ತಮ್ಮ ಮಕ್ಕಳ ಪೇರೆಂಟಿಂಗ್ ಮಾಡುತ್ತಿದ್ದಾರೆ.
ಡಿಕೆಶಿ ಸಿಎಂ ಆಗೋಕೆ ಸಿದ್ದರಾಮಯ್ಯ ಬಿಡೋದಿಲ್ಲ: ಸಿ.ಪಿ ಯೋಗೀಶ್ವರ್
ಅಮೆರಿಕದ ಹಿಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕಾರಾವಧಿಯಲ್ಲಿ, 2017ರಲ್ಲಿ, ಅಮೆರಿಕ-ಮೆಕ್ಸಿಕೋ ಗಡಿ ದಾಟಿ ಆಶ್ರಯ ಕೋರಿದ್ದ ಮಾರಿಯಾರನ್ನು ಅವರ ಮಕ್ಕಳಿಂದ ದೂರ ಮಾಡಲಾಗಿತ್ತು. ಇಬ್ಬರೂ ಪುಟ್ಟ ಹೆಣ್ಣುಮಕ್ಕಳನ್ನು ಆಶ್ರಯತಾಣವೊಂದಕ್ಕೆ ಕಳುಹಿಸಿ ಅವರನ್ನು ಅವರ ದೊಡ್ಡಣ್ಣನ ಬಳಿ ಬಿಡಲಾಗಿದೆ. ಇದೇ ವೇಳೆ ಮಾರಿಯಾ ದೂರದ ಹೊಂಡುರಾಸ್‌ನಲ್ಲಿ ನೆಲೆ ಕಂಡುಕೊಂಡಿದ್ದಾರೆ.
ಗನ್ ಹಿಡಿದವನು ಪಕ್ಕದಲ್ಲಿದ್ದರೂ ಚಿಕನ್ ತಿನ್ನೋದನ್ನ ಬಿಡಲಿಲ್ಲ ಭೂಪ…!
ಟ್ರಂಪ್ ಕಾಲದ ಗಡಿ ನೀತಿಯಿಂದಾಗಿ ಅಮೆರಿಕ-ಮೆಕ್ಸಿಕೋ ಗಡಿಯಲ್ಲಿ ಮಕ್ಕಳೊಂದಿಗೆ ಆಶ್ರಯ ಕೋರಿ ಅಮೆರಿಕದತ್ತ ಧಾವಿಸುತ್ತಿದ್ದ ಸಹಸ್ರಾರು ಪೋಷಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದ್ದು, ಅವರ ಪೈಕಿ ಮಾರಿಯಾ ಸಹ ಒಬ್ಬರಾಗಿದ್ದಾರೆ. ಪೋಷಕರಿಂದ ದೂರವಾಗಿರುವ ಈ ಮಕ್ಕಳನ್ನು ಶೆಲ್ಟರ್ ಹೋಂಗಳಲ್ಲಿ, ದತ್ತು ಪಡೆಯಲು ಮುಂದೆ ಬಂದವರ ಆಶ್ರಯದಲ್ಲಿ ಬಿಡಲಾಗಿದೆ.