ಬೆಂಗಳೂರು : ಮಗ , ಸೊಸೆ ವಿರುದ್ಧ ಕಿರುಕುಳ ಆರೋಪ ಮಾಡಿರುವ ಸ್ಯಾಂಡಲ್ ವುಡ್ ಹಿರಿಯ ನಟಿಯೊಬ್ಬರು ಸದ್ಯ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಹೌದು, ಬಣ್ಣದ ಲೋಕದ ಹಿರಿಯ ನಟಿಯೊಬ್ಬರು ಮಗ, ಸೊಸೆಯ ಟಾರ್ಚರ್ ತಾಳಲಾರದೇ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಯೆಸ್, ನಿರ್ದೇಶಕ ದಿವಂಗತ ಸಿದ್ಧಲಿಂಗಯ್ಯ ಅವರ ಪತ್ನಿ ಹಾಗೂ ಹಿರಿಯ ಶ್ಯಾಮಲಾದೇವಿ ಅವರು, ಇಂದು ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿಗೆ ತೆರಳಿ, ತಮ್ಮ ಪುತ್ರ ಹಾಗೂ ಸೊಸೆಯ ವಿರುದ್ಧ ಕಿರುಕುಳದ ದೂರು ನೀಡಿದ್ದಾರೆ.
ಆಸ್ತಿಗಾಗಿ ತಮ್ಮ ಮಗ ಹಾಗೂ ಸೊಸೆ ಕಳೆದ 5 ವರ್ಷಗಳಿಂದ ಕಿರುಕುಳ ನೀಡುತ್ತಿದ್ದಾರೆ , ನನಗೆ ರಕ್ಷಣೆ ನೀಡಿ ಎಂದು ಕಣ್ಣೀರಿಡುತ್ತಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಆಸ್ತಿಗಾಗಿ ಮಗ ದಿನನಿತ್ಯ ಕಿರುಕುಳ ನೀಡುತ್ತಿದ್ದಾರೆ, ದಿನದಿತ್ಯ ಅಗತ್ಯ ವಸ್ತುಗಳನ್ನು ನೀಡದೇ ನನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ದೂರು ನೀಡಿದ್ದಾರೆ.ನಟಿ ನೀಡಿದ ದೂರಿನ ಆಧಾರದ ಮೇಲೆ ಅವರ ಪುತ್ರ ಹಾಗೂ ಸೊಸೆಯ ವಿರುದ್ಥ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ನಿರ್ದೇಶಕ ದಿ.ಸಿದ್ಧಲಿಂಗಯ್ಯ ಅವರ ಪತ್ನಿ ಹಾಗೂ ಹಿರಿಯ ನಟಿ ಶ್ಯಾಮಲಾದೇವಿ ಬೆಂಗಳೂರಿನ ಚಂದ್ರಲೇಔಟ್ ನ ಜ್ಯೋತಿನಗರದಲ್ಲಿರುವಂತ ಮನೆಯಲ್ಲಿ ನೆಲೆಸಿದ್ದಾರೆ. ಸದ್ಯ, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಯಾವ ಕ್ರಮ ಕೈಗೊಳ್ಳುತ್ತಾರೆ ಕಾದು ನೋಡಬೇಕಾಗಿದೆ.