alex Certify ರೈಲ್ವೆ ಟಿಕೆಟ್ ದರದಲ್ಲಿ ವಿನಾಯಿತಿ ಹೊಂದಿದ್ದ ಹಿರಿಯ ನಾಗರಿಕರಿಗೆ ‘ಬಿಗ್ ಶಾಕ್’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈಲ್ವೆ ಟಿಕೆಟ್ ದರದಲ್ಲಿ ವಿನಾಯಿತಿ ಹೊಂದಿದ್ದ ಹಿರಿಯ ನಾಗರಿಕರಿಗೆ ‘ಬಿಗ್ ಶಾಕ್’

ಐಆರ್‌ಸಿಟಿಸಿ ಮೂಲಕ ರೈಲು ಟಿಕೆಟ್ ಬುಕ್ ಮಾಡುತ್ತಿದ್ದ ಹಿರಿಯ ನಾಗರಿಕರಿಗೆ ವಿನಾಯಿತಿ ಸಿಗುತ್ತಿತ್ತು., ಇದೀಗ ಈ ವಿನಾಯಿತಿಯನ್ನು ಕೋವಿಡ್ ಬಳಿಕ ರೈಲ್ವೇ ಇಲಾಖೆ ಹಿಂದಕ್ಕೆ ಪಡೆದಿದೆ.

ಹಿರಿಯ ನಾಗರಿಕರಿಗೆ ಈ ಅನುಕೂಲ ಶೀಘ್ರವೇ ಮರಳಿ ಬರಲಿದೆ ಎಂದು ಅನೇಕರು ನಿರೀಕ್ಷೆಯಲ್ಲಿದ್ದಾರೆ. ಆದರೆ ವಿನಾಯಿತಿಗಳಿಗೆ ಮರುಚಾಲನೆ ನೀಡುವುದು ಸದ್ಯದ ಮಟ್ಟಿಗೆ ಸಾಧ್ಯವಿಲ್ಲ ಎಂದು ಸಚಿವಾಲಯ ತಿಳಿಸಿದೆ.

ಹೀಗೆ ಮಾಡೊದ್ರಿಂದ ಹೆಚ್ಚಾಗುತ್ತೆ ʼಉತ್ಸಾಹʼ

ಈ ಕುರಿತು ರೈಲ್ವೇ ಖಾತೆ ರಾಜ್ಯ ಸಚಿವ ಅಶ್ವಿನಿ ವೈಷ್ಣವ್‌, “ಈ ಸವಲತ್ತನ್ನು ಮರುಆರಂಭ ಮಾಡಲು ಅನೇಕ ವಲಯಗಳಿಂದ ಬೇಡಿಕೆಗಳು ಕೇಳಿ ಬಂದಿದ್ದವು. ಈ ಹಿಂದೆ ಭಾರತೀಯ ರೈಲ್ವೇ 54 ಕೆಟಗರಿಗಳಲ್ಲಿ ವಿನಾಯಿತಿಗಳನ್ನು ನೀಡುತ್ತಾ ಬಂದಿತ್ತು.

ಆದರೆ ಕೋವಿಡ್-19 ಸಾಂಕ್ರಮಿಕದ ಬಳಿಕ ಅನೇಕ ಕೆಟಗರಿಗಳನ್ನು ಕಡಿಮೆ ಮಾಡಲಾಗಿದೆ. ಸಾಂಕ್ರಮಿಕ ಹಾಗೂ ಕೋವಿಡ್ ಸೂಚನೆಗಳ ಅನ್ವಯ, ದಿವ್ಯಾಂಗಜನದ ನಾಲ್ಕು ಕೆಟಗರಿ, ರೋಗಿಗಳು ಹಾಗೂ ವಿದ್ಯಾರ್ಥಿಗಳ 11 ಕೆಟಗರಿಗಳನ್ನು ಹೊರತುಪಡಿಸಿ ಮಿಕ್ಕೆಲ್ಲಾ ಕೆಟಗರಿಗಳ ವಿನಾಯಿತಿಗಳನ್ನು ಹಿಂಪಡೆಯಲಾಗಿದೆ,” ಎಂದು ರಾಜ್ಯಸಭೆಗೆ ಕೊಟ್ಟ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...