alex Certify ʼನಿಶ್ಚಿತ ಠೇವಣಿʼ ಕುರಿತು ಹಿರಿಯ ನಾಗರಿಕರಿಗೆ ತಿಳಿದಿರಲಿ ಈ ವಿಷಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼನಿಶ್ಚಿತ ಠೇವಣಿʼ ಕುರಿತು ಹಿರಿಯ ನಾಗರಿಕರಿಗೆ ತಿಳಿದಿರಲಿ ಈ ವಿಷಯ

ದೇಶದಲ್ಲಿ ಮುಂಚಿನಿಂದಲೂ ಹಿರಿಯ ನಾಗರಿಕರ ನೆಚ್ಚಿನ ಹೂಡಿಕೆ ಅಥವಾ ಭವಿಷ್ಯದ ಉಳಿತಾಯ ಯೋಜನೆ ಎಂದರೆ ’ಎಫ್‌.ಡಿ’. ಯಾವುದೇ ಬ್ಯಾಂಕ್‌ ಆಗಲಿ ನಿಶ್ಚಿತ ಅವಧಿಗೆ ಇಡುವ ಮೊತ್ತಕ್ಕೆ ಉಳಿತಾಯ ಖಾತೆಗಿಂತಲೂ ಹೆಚ್ಚಿನ ಬಡ್ಡಿಯನ್ನೇ ನೀಡುತ್ತವೆ.

ಆದರೆ ಕಳೆದ 3-4 ವರ್ಷಗಳಿಂದ ಆರ್‌ಬಿಐ ರೆಪೋ ದರವನ್ನು ಬದಲಾಯಿಸದೆಯೇ ’4%’ಗೆ ನಿಗದಿಪಡಿಸಿರುವ ಕಾರಣ, ಬ್ಯಾಂಕ್‌ಗಳು ಎಫ್‌.ಡಿ. ಗಳ ಮೇಲಿನ ಬಡ್ಡಿಯನ್ನು ಏರಿಕೆ ಮಾಡದೆಯೇ 6-7% ಕಾಯ್ದುಕೊಂಡು ಬಂದಿವೆ.

ಇದು, ದೊಡ್ಡ ಮೊತ್ತವನ್ನು ಎಫ್‌.ಡಿ. ಇರಿಸಿದ ಬಳಿಕ ಅದರಿಂದ ಬರುವ ಬಡ್ಡಿಯಲ್ಲೇ ಜೀವನ ಸಾಗಿಸಲು ನಿಶ್ಚಯಿಸಿರುವ ಶೇ.60 ರಷ್ಟು ಹಿರಿಯ ನಾಗರಿಕರಿಗೆ ಕಷ್ಟ ತಂದೊಡ್ಡಿದೆ.

ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನ ಸಾಮಾನ್ಯರಿಗೆ ಭರ್ಜರಿ ಗುಡ್‌ ನ್ಯೂಸ್

ಈ ಬಡ್ಡಿ ಹಣವು ದುಬಾರಿಯಾಗಿರುವ ಜೀವನಶೈಲಿಗೆ ಎಳ್ಳಷ್ಟೂ ಸಾಕಾಗುತ್ತಿಲ್ಲ. ಇನ್ನೂ ಒಂದು ಲೆಕ್ಕಾಚಾರದ ಪ್ರಕಾರ, ಎಫ್‌.ಡಿ.ಯಿಂದ ಸಿಗುವ ಬಡ್ಡಿಗೆ ಆದಾಯ ತೆರಿಗೆ ಅನ್ವಯವಾಗುತ್ತದೆ. ಅಲ್ಲಿಗೆ ನಿಮಗೆ ಸಿಗುವ ಲಾಭ ಕಡಿತಗೊಂಡಂತೆ ಆಯಿತು. ಇನ್ನು ಬಡ್ಡಿ ಸಿಗುವ ಕಾಲದ ಹಣದುಬ್ಬರವನ್ನು ಕೂಡ ಪರಿಗಣಿಸಿದರಲ್ಲಿ, ನೀವು ಶೇಖರಿಸಿಟ್ಟ ಮೊತ್ತಕ್ಕೆ ಸಿಗುತ್ತಿರುವುದು ಎಫ್‌.ಡಿ. ರಿಟರ್ನ್ಸ್‌ ಪೂರ್ಣ ನಷ್ಟವೇ ಸರಿ. ಆರ್ಥಿಕ ಭಾಷೆಯಲ್ಲಿ ಹೇಳುವುದಾದರೆ ಮೈನಸ್‌ ಅಥವಾ ನೆಗೆಟೀವ್‌ ರಿಟರ್ನ್ಸ್‌.

ಇದಕ್ಕೆ ಸದ್ಯಕ್ಕಿರುವ ಪರಿಹಾರ ಎಂದರೆ ತೆರಿಗೆ ಉಳಿಸುವ ಎಫ್‌.ಡಿ.ಗಳು ಅಂದರೆ ಐದು ವರ್ಷಗಳ ಲಾಕ್‌ಇನ್‌ ಅವಧಿಗೆ ಇರಿಸಲಾಗುವ ನಿಶ್ಚಿತ ಅವಧಿ ಠೇವಣಿಗಳು. ಇದರಲ್ಲಿ 1.5 ಲಕ್ಷ ರೂ.ವರೆಗೆ ಹಿರಿಯ ನಾಗರಿಕರು ತೆರಿಗೆ ವಿನಾಯಿತಿ ಗಳಿಸಬಹುದು.

ಆದರೆ, ಒಂದೇ ಷರತ್ತು ಎಂದರೆ ಲಾಕ್‌-ಇನ್‌ ಅವಧಿಯಲ್ಲಿ ಯಾವುದೇ ಕಾರಣಕ್ಕೂ ಮುಂಗಡವಾಗಿ ವಿತ್‌ಡ್ರಾಗೆ ಅವಕಾಶ ಇರುವುದಿಲ್ಲ. ಇಂಥ ಎಫ್‌.ಡಿ.ಗಳನ್ನು ಜಂಟಿ ಅಥವಾ ಜಾಯಿಂಟ್‌ ಖಾತೆಯಾಗಿಯೂ ತೆರೆಯಬಹುದು. ಆವಾಗ ಮೊದಲ ಖಾತೆದಾರನಿಗೆ ಮಾತ್ರವೇ ತೆರಿಗೆ ವಿನಾಯಿತಿ ಸಿಗಲಿದೆ. ಹಿರಿಯ ನಾಗರೀಕರು ಈ ಬಗ್ಗೆ ಒಮ್ಮೆ ಯೋಚಿಸುವುದೊಳಿತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...