alex Certify ಹಿರಿಯ ನಾಗರಿಕರಿಗೆ ಇಲ್ಲಿದೆ ಗುಡ್ ನ್ಯೂಸ್: ಪಿಂಚಣಿ ಸೇರಿ ಹಲವು ಸೇವೆಗೆ ಉಚಿತ ಸಹಾಯವಾಣಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಿರಿಯ ನಾಗರಿಕರಿಗೆ ಇಲ್ಲಿದೆ ಗುಡ್ ನ್ಯೂಸ್: ಪಿಂಚಣಿ ಸೇರಿ ಹಲವು ಸೇವೆಗೆ ಉಚಿತ ಸಹಾಯವಾಣಿ

ಧಾರವಾಡ: ಹಿರಿಯ ನಾಗರಿಕರ ನೆರವಿಗಾಗಿ ಮತ್ತು ಸಬಲೀಕರಣಕ್ಕಾಗಿ ರಾಷ್ರ್ಟೀಯ ಹಿರಿಯ ನಾಗರಿಕರ ಸಹಾಯವಾಣಿ 14567 ಘಟಕವನ್ನು ಕರ್ನಾಟಕ ರಾಜ್ಯದಲ್ಲಿ ಸ್ಥಾಪಿಸಲಾಗಿದೆ.

ಹಿರಿಯ ನಾಗರಿಕರು ಅನುಭವಿಸುತ್ತಿರುವ ಒಂಟಿತನ, ಭಾವನಾತ್ಮಕ ಖಿನ್ನತೆ, ಪಿಂಚಣಿಗೆ ಸಂಬಂಧಿಸಿದ ಸಮಸ್ಯೆ, ನಿಂದನೆಯ ಸಮಸ್ಯೆಗಳು ಹಾಗೂ ಕಾನೂನಿನ ಸೇವೆಗಳು ಮತ್ತು ಅಗತ್ಯ ನೆರವು, ಕೋವಿಡ್‍ಗೆ ಸಂಬಂಧಿಸಿದ ಮಾಹಿತಿ, ಆಸ್ಪತ್ರೆಗಳ ಮಾಹಿತಿ, ವೃದ್ಧಾಶ್ರಮಗಳ ಮಾಹಿತಿ ಮುಂತಾದವುಗಳನ್ನು ಹಿರಿಯ ನಾಗರಿಕರು ಟೋಲ್ ಫ್ರೀ ಸಂಖ್ಯೆ 14567 ಗೆ ಕರೆ ಮಾಡುವುದರ ಮೂಲಕ ಉಚಿತ ಸೇವೆಯನ್ನು ಪಡೆದುಕೊಳ್ಳಬಹುದಾಗಿದೆ.

ಸಹಾಯವಾಣಿ ಕರೆಗೆ ಸಲಹೆಗಾರರು, ಸಾಮಾಜಿಕ ಕಾರ್ಯಕರ್ತರು ಸ್ಪಂದಿಸಿ, ಸಲಹೆ ಮಾರ್ಗದರ್ಶನ ಮತ್ತು ಬೆಂಬಲ ನೀಡಲಿದ್ದಾರೆ. ಎಲ್ಲಾ ಹಿರಿಯ ನಾಗರಿಕರು ಟೋಲ್ ಫ್ರೀ ಸಂಖ್ಯೆ 14567 ಗೆ ಕರೆ ಮಾಡಿ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಧಿಕಾರಿಗಳು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...