alex Certify ‘ಸೇನಾಪುರ’ ಚಿತ್ರದ ಟ್ರೈಲರ್ ರಿಲೀಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಸೇನಾಪುರ’ ಚಿತ್ರದ ಟ್ರೈಲರ್ ರಿಲೀಸ್

ಗುರು ಸಾವನ್ ನಿರ್ದೇಶನದ ಸೇನಾಪುರ ಚಿತ್ರದ ಟ್ರೈಲರ್ ಅನ್ನು ಏಟು ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದ್ದು, ಕೆಲವೇ ಕ್ಷಣಗಳಲ್ಲಿ ಸಾಕಷ್ಟು ವೀಕ್ಷಣೆ ಪಡೆದುಕೊಂಡಿದೆ. ಈ ಸಿನಿಮಾದಲ್ಲಿ ಗಾಯಕಿ ಅನನ್ಯ ಭಟ್ ಸೇರಿದಂತೆ ದಿನೇಶ್ ಮಂಗಳೂರು, ಬಿ ಎಂ ಗಿರಿರಾಜ್, ಸಿದ್ದಾರ್ಥ  ತೆರೆ ಹಂಚಿಕೊಂಡಿದ್ದಾರೆ.

ವಿಮ್ಲಾಜ್ ಎಂಟರ್ಟೈನ್ಮೆಂಟ್ ಹಾಗೂ ಅಮ್ಸಾಚೌಕಿ ಬ್ಯಾನರ್ ನಡಿ ಅಮಿತ್ ಕುಮಾರ್, ರಾಹುಲ್ ದೇವ್ ಮತ್ತು ನಿರ್ದೇಶಕ ಗುರು ಸಾವನ್ ನಿರ್ಮಾಣ ಮಾಡಿದ್ದಾರೆ.

ಕ್ರೈಂ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಪ್ರಶಾಂತ್ ಸಾಗರ್ ಅವರ ಛಾಯಾಗ್ರಹಣವಿದ್ದು, ಅರ್ಜುನ್ ಶ್ರೀನಿವಾಸಯ್ಯ, ರವೀಶ್ ಆತ್ಮಾ ರಾಮ್ ಸಂಕಲನವಿದೆ. ಶರತ್ ಶರ್ಮ ಸಂಗೀತ ಸಂಯೋಜನೆ ನೀಡಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಈ ಸಿನಿಮಾ ರಾಜ್ಯದ್ಯಂತ ತೆರೆ ಕಾಣಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...