alex Certify ಮನುಷ್ಯನ ದೇಹದಿಂದ ಸ್ಮಾರ್ಟ್​ಫೋನ್​ ಚಾರ್ಜ್ ಮಾಡಬಲ್ಲ ಸಾಧನ ಆವಿಷ್ಕಾರ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನುಷ್ಯನ ದೇಹದಿಂದ ಸ್ಮಾರ್ಟ್​ಫೋನ್​ ಚಾರ್ಜ್ ಮಾಡಬಲ್ಲ ಸಾಧನ ಆವಿಷ್ಕಾರ..!

ಮನುಷ್ಯನ ದೇಹದಲ್ಲಿ ಉತ್ಪತ್ತಿಯಾಗುವ ಶಕ್ತಿಯನ್ನ ಬಳಕೆ ಮಾಡಿ ಸ್ಮಾರ್ಟ್ ಫೋನ್​ ಹಾಗೂ ಸ್ಮಾರ್ಟ್​ ವಾಚ್​ಗಳನ್ನ ಚಾರ್ಜ್​ ಮಾಡಬಲ್ಲ ಸ್ಟ್ರಿಪ್​ ಒಂದನ್ನ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ವಿಜ್ಞಾನಿಗಳ ತಂಡ ಅಭಿವೃದ್ಧಿ ಪಡಿಸಿದೆ. ಈ ಅಧ್ಯಯನದಲ್ಲಿ ಭಾಗಿಯಾದ ವಿಜ್ಞಾನಿಗಳು ನೀಡಿರುವ ಮಾಹಿತಿಯ ಪ್ರಕಾರ ಹತ್ತು ಗಂಟೆಗಳ ನಿದ್ರೆಯ ಸಮಯದಲ್ಲಿ ಈ ಪಟ್ಟಿಯನ್ನ ಧರಿಸೋದ್ರಿಂದ ಉತ್ಪತ್ತಿಯಾದ ಶಕ್ತಿಯಲ್ಲಿ ಸ್ಮಾರ್ಟ್​ ವಾಚ್​ಗಳು 24 ಗಂಟೆಗಳ ಕಾಲ ಕಾರ್ಯನಿರ್ವಹಿಸಬಲ್ಲದಂತೆ.

ಶಾಕಿಂಗ್​: ಇಂಗ್ಲೆಂಡ್​ ಸರಣಿಗೆ ತೆರಳಿದ ಟೀಂ ಇಂಡಿಯಾದ ಇಬ್ಬರು ಆಟಗಾರರಿಗೆ ಕೊರೊನಾ ಸೋಂಕು….!

ಪ್ರಸ್ತುತ ಮಾರುಕಟ್ಟೆಯಲ್ಲಿ ಲಭ್ಯವಿರುವ ಶಕ್ತಿ ಉತ್ಪಾದಿಸುವ ಸ್ಟ್ರಿಪ್​ಗಳನ್ನ ಧರಿಸಿದಾಗ ವ್ಯಕ್ತಿಯು ಹೆಚ್ಚು ದೇಹವನ್ನ ದಂಡಿಸಬೇಕು ಅಥವಾ ಬಾಹ್ಯ ಶಕ್ತಿ ಅಂದರೆ ಸೂರ್ಯನ ಬೆಳಕು ಸೇರಿದಂತೆ ಇತರೆ ಮೂಲಗಳನ್ನ ಅವಲಂಬಿಸಿ ಇರುತ್ತದೆ. ಆದರೆ ಕ್ಯಾಲಿಫೋರ್ನಿಯಾ ವಿಜ್ಞಾನಿಗಳು ಕಂಡು ಹಿಡಿದ ಈ ಸಾಧನದ ಸಹಾಯದಿಂದ ವ್ಯಕ್ತಿ ಮಲಗಿದ್ದಾಗಲೂ ಸಹ ಸ್ಟ್ರಿಪ್​ನ ಸಹಾಯದಿಂದ ಸ್ಮಾರ್ಟ್​ ಫೋನ್​ ಹಾಗೂ ವಾಚ್​ಗಳನ್ನ ಚಾರ್ಜ್ ಮಾಡಬಹುದಾಗಿದೆ.

ಮನುಷ್ಯನ ಬೆವರಿನಿಂದ ಶಕ್ತಿಯನ್ನ ಉತ್ಪಾದಿಸಬಲ್ಲ ಇತರೆ ಸಾಧನಗಳಂತೆ ಇದಕ್ಕೆ ಹೆಚ್ಚಿನ ದೇಹದಂಡನೆಯ ಅಗತ್ಯ ಇಲ್ಲವೇ ಇಲ್ಲ. ನೀವು ಸಾಮಾನ್ಯ ರೀತಿಯಲ್ಲಿದ್ದೇ ಈ ಸಾಧನದ ಉಪಯೋಗ ಪಡೆಯಬಹುದಾಗಿದೆ ಎಂದು ವಿದ್ಯಾರ್ಥಿ ಲು ಯಿನ್ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...