alex Certify ಶಾಕಿಂಗ್​: ಇಂಗ್ಲೆಂಡ್​ ಸರಣಿಗೆ ತೆರಳಿದ ಟೀಂ ಇಂಡಿಯಾದ ಇಬ್ಬರು ಆಟಗಾರರಿಗೆ ಕೊರೊನಾ ಸೋಂಕು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಕಿಂಗ್​: ಇಂಗ್ಲೆಂಡ್​ ಸರಣಿಗೆ ತೆರಳಿದ ಟೀಂ ಇಂಡಿಯಾದ ಇಬ್ಬರು ಆಟಗಾರರಿಗೆ ಕೊರೊನಾ ಸೋಂಕು….!

ಇಂಗ್ಲೆಂಡ್​ ಸರಣಿಗೆ ತೆರಳಿರುವ ಟೀಂ ಇಂಡಿಯಾ 23 ಆಟಗಾರರಲ್ಲಿ ಇಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. 20 ದಿನಗಳ ವಿರಾಮದ ಅವಧಿಯಲ್ಲಿ ಈ ಇಬ್ಬರು ಆಟಗಾರರು ಕೋವಿಡ್​ ಸೋಂಕಿಗೆ ಒಳಗಾಗಿದ್ದಾರೆ ಅನ್ನೋದು ತಿಳಿದುಬಂದಿದೆ. ಸೋಂಕಿತ ಆಟಗಾರರು ಡುರ್ಹಾಮ್​ಗೆ ಪ್ರಯಾಣ ಬೆಳೆಸೋದಿಲ್ಲ ಎಂದು ವರದಿ ಹೇಳಿದೆ.

ಅಲ್ಲದೇ ಈ ಇಬ್ಬರು ಆಟಗಾರರಲ್ಲಿ ಒಬ್ಬರು ಈಗಾಗಲೇ ಕೊರೊನಾ ನೆಗೆಟಿವ್​ ವರದಿ ಪಡೆದಿದ್ದಾರೆ. ಮತ್ತೋರ್ವ ಆಟಗಾರ ಇನ್ನೂ ಐಸೋಲೇಷನ್​ನಲ್ಲೇ ಇದ್ದಾರೆ ಎನ್ನಲಾಗಿದೆ.

ಬಿಸಿಸಿಐ ಕಾರ್ಯದರ್ಶಿ ಜಯ್​ ಷಾ ಇತ್ತೀಚೆಗಷ್ಟೇ ಬ್ರಿಟನ್​​ನಲ್ಲಿರುವ ಟೀಂ ಇಂಡಿಯಾ ಆಟಗಾರರಿಗೆ ಕೊರೊನಾ ಸೋಂಕು ಹೆಚ್ಚಳದ ಬಗ್ಗೆ ಎಚ್ಚರಿಕೆ ನೀಡುವ ಇ ಮೇಲ್​ ಕಳುಹಿಸಿದ ಬಳಿಕ ಈ ವಿಚಾರ ಬೆಳಕಿಗೆ ಬಂದಿದೆ. ಕೊರೊನಾ ಸೋಂಕಿಗೆ ಒಳಗಾದ ಆ ಇಬ್ಬರು ಆಟಗಾರರು ಲಕ್ಷಣ ರಹಿತ ಸೋಂಕನ್ನ ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಟೀಂ ಇಂಡಿಯಾ ಸದಸ್ಯರಲ್ಲಿ ಓರ್ವ ಆಟಗಾರ ಕೊರೊನಾ ಪಾಸಿಟಿವ್​ ವರದಿ ಪಡೆದಿದ್ದು ಲಕ್ಷಣ ರಹಿತ ಸೋಂಕನ್ನ ಹೊಂದಿದ್ದಾರೆ. ಇವರನ್ನ ಕ್ವಾರಂಟೈನ್​ನಲ್ಲಿ ಇಡಲಾಗಿದೆ. ಸೋಂಕಿತ ಆಟಗಾರ ತಂಡದ ಜೊತೆಯಲ್ಲಿ ಡುರ್ಹಾನ್​ಗೆ ಪ್ರಯಾಣ ಬೆಳೆಸುತ್ತಿಲ್ಲ ಎಂದು ಬಿಸಿಸಿಐ ಉನ್ನತ ಮೂಲಗಳು ಮಾಹಿತಿ ನೀಡಿವೆ.
ಬ್ರಿಟನ್​ನಲ್ಲಿ ಡೆಲ್ಟಾ ರೂಪಾಂತರಿಯ ಹಾವಳಿ ಮಿತಿಮೀರಿದೆ. ಈ ಸಂಬಂಧ ಇ ಮೇಲ್​ ಮಾಡಿ ಎಚ್ಚರಿಕೆ ನೀಡಿದ್ದ ಜಯ್​ ಶಾ, ಕೋವಿಶೀಲ್ಡ್​​ನಿಂದ ನಿಮಗೆ ರಕ್ಷಣೆ ಸಿಕ್ಕಿದ್ದರೂ ಸಹ ನೀವು ಕೊರೊನಾದಿಂದ ಸಂಪೂರ್ಣ ಸುರಕ್ಷಿತರಲ್ಲ . ಹೀಗಾಗಿ ಜನಸಂದಣಿ ಪ್ರದೇಶಗಳಿಂದ ದೂರವೇ ಇರಿ ಎಂದು ಹೇಳಿದ್ದರು ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...