alex Certify ಶಾಕಿಂಗ್..! ಕೊರೊನಾ ವೈರಸ್ ಹರಡಲು ಕಾರಣವಾಗ್ತಿದೆ ಮಾಲಿನ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಕಿಂಗ್..! ಕೊರೊನಾ ವೈರಸ್ ಹರಡಲು ಕಾರಣವಾಗ್ತಿದೆ ಮಾಲಿನ್ಯ

ವಿಶ್ವವನ್ನು ಬದಲಿಸಿರುವ ಕೊರೊನಾ ಬಗ್ಗೆ ವಿಜ್ಞಾನಿಗಳ ಸಂಶೋಧನೆ ನಡೆಯುತ್ತಿದೆ. ಸಣ್ಣ ವೈರಸ್‌  ಬಗ್ಗೆ ಈಗಾಗಲೇ ಅನೇಕ ಸಂಗತಿಗಳು ಹೊರ ಬಿದ್ದಿವೆ. ಜರ್ನಲ್ ಆಫ್ ಎಕ್ಸ್ ಪೋಸರ್ ಸೈನ್ಸ್ ಮತ್ತು ಎನ್ವಿರಾನ್ಮೆಂಟಲ್ ಎಪಿಡೆಮಿಯಾಲಜಿಯಲ್ಲಿ ಪ್ರಕಟವಾದ ಹೊಸ ಸಂಶೋಧನೆಯಲ್ಲಿ, ವಿಜ್ಞಾನಿಗಳ ತಂಡವು ಮತ್ತೊಂದು ಸಂಗತಿಯನ್ನು ಹೇಳಿದೆ.

ಕೊರೊನಾ ವೈರಸ್ ಹರಡುವಿಕೆಗೆ ಮಾಲಿನ್ಯವೂ ಕಾರಣವಾಗಿದೆ ಎಂದು ವಿಜ್ಞಾನಿಗಳು ಬಹಿರಂಗಪಡಿಸಿದ್ದಾರೆ. ಮಾಲಿನ್ಯ ಹೆಚ್ಚಾದಾಗಲೆಲ್ಲಾ ಈ ವೈರಸ್‌ಗೆ ವೇಗ ಪಡೆದುಕೊಂಡಿದೆ ಎಂದು ವಿಜ್ಞಾನಿಗಳ ತಂಡ ಹೇಳಿದೆ. ಡಸರ್ಟ್ ರಿಸರ್ಚ್ ಇನ್ಸ್ಟಿಟ್ಯೂಟ್ ಮಾಡಿದ ಈ ಸಂಶೋಧನೆಯಲ್ಲಿ ಕ್ಯಾಲಿಫೋರ್ನಿಯಾದ ಕಾಡುಗಳಲ್ಲಿ ಬೆಂಕಿಯ ಸಮಯದಲ್ಲಿ ಸಾಕಷ್ಟು ಮಾಲಿನ್ಯ ಉಂಟಾಗಿತ್ತು. ಅಲ್ಲಿ ಮಾಲಿನ್ಯದ ಮಟ್ಟ ಹೆಚ್ಚಾಗಿದ್ದಾಗ, ಕೊರೊನಾ ಪಾಸಿಟಿವ್ ಪ್ರಮಾಣ ಹೆಚ್ಚಾಯಿತು ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಕಾಡಿಗೆ ಬೆಂಕಿ ಬಿದ್ದ ಸಮಯದಲ್ಲಿ 2.5 ಮೈಕ್ರೊಮೀಟರ್‌ಗಿಂತ ಚಿಕ್ಕದಾದ ಕಣಗಳು ವಾತಾವರಣದಲ್ಲಿ ತೇಲುತ್ತಿದ್ದವು. ಈ ಕಣಗಳಲ್ಲಿ ವಿಜ್ಞಾನಿಗಳು ಹೊಸ ರೀತಿಯ ಕೊರೊನಾ ವೈರಸ್ ಪತ್ತೆ ಮಾಡಿದ್ದಾರೆ. ಹೆಚ್ಚಿನ ತಾಪಮಾನ, ಆರ್ದ್ರತೆ, ವಾಯುಮಾಲಿನ್ಯ, ಹವಾಮಾನ ಬದಲಾವಣೆಯಂತಹ ವಿಷಯಗಳು ಕೊರೊನಾ ಪ್ರಕರಣ ಹೆಚ್ಚಾಗಲು ಕಾರಣವಾಗುತ್ತದೆ. ವೈರಸ್, ಉಸಿರಾಟದ ಮೂಲಕ ದೇಹವನ್ನು ತಲುಪಲು ಸಹಾಯವಾಗುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...