alex Certify SHOCKING: ಶಾಲೆಯಲ್ಲೇ ಪ್ರಾಂಶುಪಾಲ, ಶಿಕ್ಷಕರಿಂದಲೇ ಅತ್ಯಾಚಾರ: ಸೋದರ ಸಂಬಂಧಿ ಸೇರಿ ನಾಲ್ವರು ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING: ಶಾಲೆಯಲ್ಲೇ ಪ್ರಾಂಶುಪಾಲ, ಶಿಕ್ಷಕರಿಂದಲೇ ಅತ್ಯಾಚಾರ: ಸೋದರ ಸಂಬಂಧಿ ಸೇರಿ ನಾಲ್ವರು ಅರೆಸ್ಟ್

ಚಿತ್ರಕೂಟ: ಉತ್ತರ ಪ್ರದೇಶದ ಚಿತ್ರಕೂಟದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇಲೆ ಶಾಲೆಯ ಪ್ರಾಂಶುಪಾಲ, ಇಬ್ಬರು ಶಿಕ್ಷಕರು ಸೇರಿ 4 ಮಂದಿಯನ್ನು ಬಂಧಿಸಲಾಗಿದೆ

17 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಶಾಲೆಯ ಪ್ರಾಂಶುಪಾಲರು ಮತ್ತು ಇಬ್ಬರು ಶಿಕ್ಷಕರು ಸೇರಿದಂತೆ ನಾಲ್ವರನ್ನು ಮಂಗಳವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂತ್ರಸ್ತೆ 10 ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದು, ಐದು ತಿಂಗಳ ಕಾಲ ಶಾಲೆಯೊಳಗೆ ಹಲವಾರು ಬಾರಿ ಶಿಕ್ಷಕರು ಮತ್ತು ಪ್ರಾಂಶುಪಾಲರು ತನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ತಿಳಿಸಿದ್ದಾಳೆ ಎಂದು ಪೊಲೀಸ್ ವರಿಷ್ಠಾಧಿಕಾರಿ(ಎಸ್‌ಪಿ) ವೃಂದಾ ಶುಕ್ಲಾ ಹೇಳಿದ್ದಾರೆ.

ಈ ಸಂಬಂಧ ಜುಲೈ 26 ರಂದು ಎಫ್‌ಐಆರ್ ದಾಖಲಿಸಲಾಗಿದ್ದು, ವಿಚಾರಣೆ ನಂತರ ಪೊಲೀಸರು ಆರೋಪಿಗಳಾದ ಇರ್ಷಾದ್, ಮುಯಿನ್ ಮತ್ತು ಆದಿತ್ಯರನ್ನು ಬಂಧಿಸಿದ್ದಾರೆ.

ಸಂಚು ರೂಪಿಸಿ ಬಾಲಕಿಯನ್ನು ಶಿಕ್ಷಕರ ಬಳಿ ಕರೆದೊಯ್ದ ಆರೋಪ ಹೊತ್ತಿರುವ ಬಾಲಕಿಯ ಸೋದರ ಸಂಬಂಧಿಯನ್ನೂ ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...