alex Certify ಐಷಾರಾಮಿ, ದುಬಾರಿ ಟೆಸ್ಲಾ ಕಾರ್​ನ ಬ್ರೇಕ್​ ಫೇಲ್….​? ಇಬ್ಬರು ಬಾಲಕಿಯರ ಸಾವು- ಮೂವರಿಗೆ ಗಂಭೀರ ಗಾಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಐಷಾರಾಮಿ, ದುಬಾರಿ ಟೆಸ್ಲಾ ಕಾರ್​ನ ಬ್ರೇಕ್​ ಫೇಲ್….​? ಇಬ್ಬರು ಬಾಲಕಿಯರ ಸಾವು- ಮೂವರಿಗೆ ಗಂಭೀರ ಗಾಯ

ಬೆಲೆ ಬಾಳುವ ಈ ಕಾರಿನಲ್ಲಿ ಇರುವ ಐಷಾರಾಮಿ ಸೌಕರ್ಯಕ್ಕೆ ಕೊನೆಯೇ ಇಲ್ಲ. ಉದ್ಯಮಿ ಎಲಾನ್​ ಮಸ್ಕ್‌ನ ಎಲೆಕ್ಟ್ರಿಕ್ ವಾಹನ ತಯಾರಕ ಟೆಸ್ಲಾ ವಾಹನ ಪ್ರಪಂಚದ ಕ್ರಾಂತಿಯ ಮುಂಚೂಣಿಯಲ್ಲಿದೆ. ಆದರೆ ಟೆಸ್ಲಾ ಕಾರೊಂದು ಬ್ರೇಕ್​ ಫೇಲ್​ ಆಗಿ ಇಬ್ಬರು ಶಾಲಾ ಬಾಲಕಿಯರನ್ನು ಬಲಿ ಪಡೆದಿರುವ ಘಟನೆ ಚೀನಾದಲ್ಲಿ ನಡೆದಿದೆ.

ದಕ್ಷಿಣ ಚೀನಾದ ಗುವಾಂಗ್‌ಡಾಂಗ್ ಪ್ರಾಂತ್ಯದ ಚಾಝೌದಲ್ಲಿ ಈ ದುರ್ಘಟನೆ ನಡೆದಿದೆ. ಕಾರಿನ ಚಾಲಕ ನಿಯಂತ್ರಣ ತಪ್ಪಿದ್ದರಿಂದ ಈ ದುರ್ಘಟನೆ ಸಂಭವಿಸಿದೆ. 2 ಕಿಲೋ ಮೀಟಿರ್​ವರೆಗೂ ಕಾರು ನಿಯಂತ್ರಣಕ್ಕೆ ಬಾರದೇ ಇಬ್ಬರು ಮಕ್ಕಳನ್ನು ಬಲಿ ಪಡೆದಿದೆ. ಘಟನೆಯಲ್ಲಿ ಮೂವರಿಗೆ ತೀವ್ರ ಗಾಯಗಳಾಗಿದೆ.

ಕಾರಿನಲ್ಲಿದ್ದ ಕುಟುಂಬವು ಬ್ರೇಕ್​ ಫೇಲ್ ಆಯ್ತು ಎಂದು ಹೇಳಿದರೆ, ಟೆಸ್ಲಾ ಕಂಪೆನಿ ಮಾತ್ರ ಕಾರಿನ ಚಾಲಕ ನಶೆಯಲ್ಲಿ ಇದ್ದುದೇ ಕಾರಣ ಎಂದಿದೆ.
ಚಾಲಕ ಇದ್ದಕಿದ್ದ ಹಾಗೇ ಎಕ್ಸ್​ಲೆರೇಟರ್​ ಮೇಲೆ ಕಾಲಿಟ್ಟಿದ್ದಾನೆ. ಆಗ ವಾಹನದ ಸ್ಪೀಡ್​ 100ಕ್ಕೆ ಮುಟ್ಟಿದೆ. ಇಷ್ಟಾದರೂ ಚಾಲಕ ಮಾತ್ರ ಬ್ರೇಕ್​ ಹಾಕಿಲ್ಲ. ಆತ ಪಾರ್ಕ್ ಗೇರ್ ಬಟನ್ ಅನ್ನು ನಾಲ್ಕು ಬಾರಿ ಒತ್ತಿದ್ದಾನಂತೆ. ಈ ಸಮಯದಲ್ಲಿ, ಬ್ರೇಕ್ ಲೈಟ್‌ಗಳು ತ್ವರಿತವಾಗಿ ಆನ್ ಮತ್ತು ಆಫ್ ಆಗಿ ಘಟನೆ ಸಂಭವಿಸಿದೆ ಎಂದು ಕಂಪೆನಿ ಹೇಳಿದೆ. ಸದ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...