alex Certify ತರಗತಿಯಲ್ಲಿ ಸ್ಕೂಲ್ ಬ್ಯಾಗ್ ತೆಗೆದ ವಿದ್ಯಾರ್ಥಿಗೆ ಶಾಕ್: ನಾಗರಹಾವು ಪತ್ತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತರಗತಿಯಲ್ಲಿ ಸ್ಕೂಲ್ ಬ್ಯಾಗ್ ತೆಗೆದ ವಿದ್ಯಾರ್ಥಿಗೆ ಶಾಕ್: ನಾಗರಹಾವು ಪತ್ತೆ

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ರಿಪ್ಪನ್ ಪೇಟೆ ಸಮೀಪದ ಬಾಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಯ ಬ್ಯಾಗ್ ನಲ್ಲಿ ನಾಗರಹಾವು ಪತ್ತೆಯಾಗಿದೆ.

ಎರಡನೇ ತರಗತಿ ವಿದ್ಯಾರ್ಥಿ ಭವನ್ ಶುಕ್ರವಾರ ಬೆಳಗ್ಗೆ ಶಾಲೆಗೆ ಬಂದಿದ್ದು, ಶಿಕ್ಷಕರು ಪಾಠ ಓದಲು ಪುಸ್ತಕ ತೆಗೆಯುವಂತೆ ಮಕ್ಕಳಿಗೆ ಸೂಚಿಸಿದ್ದಾರೆ. ಈ ವೇಳೆ ಭುವನ್ ಬ್ಯಾಗ್ ತೆರೆದಾಗ ನಾಗರಹಾವು ಮಲಗಿರುವುದು ಕಂಡು ಬಂದಿದೆ. ಪಕ್ಕದಲ್ಲಿ ಕುಳಿತಿದ್ದ ಸಹಪಾಠಿ ಮಣಿಕಂಠನಿಗೆ ಹಾವು ತೋರಿಸಿದ್ದಾನೆ.

ಕೂಡಲೇ ಮಣಿಕಂಠ ಬ್ಯಾಗ್ ನ ಜಿಪ್ ಎಳೆದು ಶಿಕ್ಷಕರಿಗೆ ಮಾಹಿತಿ ನೀಡಿದ್ದಾನೆ. ಶಿಕ್ಷಕರು ಕೂಡಲೇ ಬ್ಯಾಗ್ ಅನ್ನು ಕೊಠಡಿಯಿಂದ ಹೊರಗೆ ತಂದು ತೆಗೆದು ನೋಡಿದಾಗ ನಾಗರಹಾವು ಇರುವುದು ಗೊತ್ತಾಗಿದೆ. ನಂತರ ಪೋಷಕರನ್ನು ಕರೆಸಿ ಬ್ಯಾಗ್ ನಲ್ಲಿದ್ದ ನಾಗರಹಾವನ್ನು ಸಮೀಪದ ಕಾಡಿಗೆ ಬಿಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...