
ಕೋವಿಡ್-19ನ ಒಮಿಕ್ರಾನ್ ವೈರಾಣು ಇರುವ ಸಾಧ್ಯತೆಗಳು ಇರುವ ಕಾರಣ ’ಹೈ-ರಿಸ್ಕ್’ ದೇಶಗಳಿಂದ ಬರುವ ಮಂದಿ ಕಡ್ಡಯವಾಗಿ ಆರ್‌ಟಿ-ಪಿಸಿಆರ್ ಪರೀಕ್ಷೆಗಳಿಗೆ ಒಳಗಾಗಬೇಕು ಎಂದು ನವೆಂಬರ್ 30ರಂದು ಕೇಂದ್ರ ಸರ್ಕಾರ ಕಳುಹಿಸಿರುವ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಇದರೊಂದಿಗೆ ಮಿಕ್ಕ ದೇಶಗಳಿಂದ ಬರುವ ಪ್ರಯಾಣಿಕರ ಪೈಕಿ 2%ನಷ್ಟು ಮಂದಿಯನ್ನು ರ‍್ಯಾಂಡಂ ಪರೀಕ್ಷೆಗೆ ಒಳಪಡಿಸಬೇಕಾಗುತ್ತದೆ. ಈ ಎಲ್ಲರೂ ಪರೀಕ್ಷಾ ಫಲಿತಾಂಶ ಬರುವವರೆಗೂ ವಿಮಾನ ನಿಲ್ದಾಣದಲ್ಲಿಯೇ ಇದ್ದು, ನೆಗೆಟಿವ್ ವರದಿ ಬಂದಲ್ಲಿ ಮಾತ್ರವೇ ವಿಮಾನ ನಿಲ್ದಾಣದಿಂದ ಹೊರಗೆ ಬರಬಹುದು.
ಈ ಒಂದು ರಾಶಿಯವರಿಗೆ 2022 ತರಲಿದೆ ಬಹಳ ಶುಭ
ಕಾಯುವ ಅವಧಿಯನ್ನು ಕಡಿಮೆ ಮಾಡಲೆಂದು ಇನ್ನಷ್ಟು ದುಬಾರಿಯಾದ ರ‍್ಯಾಪಿಡ್ ಆರ್‌ಟಿ-ಪಿಸಿಆರ್ ಪರೀಕ್ಷೆಗಳಿಗೆ ಒಳಾಗುತ್ತಿರುವ ಪ್ರಯಾಣಿಕರು ತಲಾ 3,500 ರೂ.ಗಳನ್ನು ಪಾವತಿ ಮಾಡುತ್ತಿದ್ದಾರೆ. ಈ ಪರೀಕ್ಷೆಯ ವರದಿಯು ಎರಡು ಗಂಟೆಗಳಲ್ಲಿ ಕೈತಲುಪಲಿದೆ. 500 ರೂ.ಗಳಿಗೆ ಮಾಡುವ ಸಾಮಾನ್ಯ ಆರ್‌ಟಿ-ಪಿಸಿಆರ್ ಪರೀಕ್ಷೆಯ ಫಲಿತಾಂಶ ಪಡೆಯಲು ಎಂಟು ಗಂಟೆಗಳವರೆಗೆ ಕಾಯಬೇಕಾಗುತ್ತದೆ.
ಇಂಥ ಅವ್ಯವಸ್ಥೆಗಳಿಂದಾಗಿ ಪ್ರಯಾಣಿಕರಿಂದ ತುಂಬಿ ತುಳುಕುತ್ತಿರುವ ದೆಹಲಿ ವಿಮಾನ ನಿಲ್ದಾಣವು ’ಕೋವಿಡ್ ಹಾಟ್‌ಸ್ಪಾಟ್’ ಆಗಿದೆ ಎಂದು ಉದ್ಯಮಿ ಹರ್ಷ್ ಗೋಯೆಂಕಾ ಟ್ವೀಟ್ ಮಾಡಿದ್ದಾರೆ.