alex Certify ಬೆಂಗಳೂರು ಟ್ರಾಫಿಕ್‌ ನಿಂದ ಬೇಸತ್ತವರಿಗೆ ಗುಡ್‌ ನ್ಯೂಸ್: ಪೆರಿಫೆರಲ್​ ರಿಂಗ್​​ ರಸ್ತೆಗೆ ಭೂಸ್ವಾಧೀನಪಡಿಸಿಕೊಳ್ಳಲು ‘ಸುಪ್ರೀಂ’ ಗ್ರೀನ್‌ ಸಿಗ್ನಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಂಗಳೂರು ಟ್ರಾಫಿಕ್‌ ನಿಂದ ಬೇಸತ್ತವರಿಗೆ ಗುಡ್‌ ನ್ಯೂಸ್: ಪೆರಿಫೆರಲ್​ ರಿಂಗ್​​ ರಸ್ತೆಗೆ ಭೂಸ್ವಾಧೀನಪಡಿಸಿಕೊಳ್ಳಲು ‘ಸುಪ್ರೀಂ’ ಗ್ರೀನ್‌ ಸಿಗ್ನಲ್

ಬೆಂಗಳೂರಿನ ರಸ್ತೆಗಳಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಫೆರಿಫೆರಲ್​ ರಿಂಗ್​ ರೋಡ್​ ರಚನೆ ಮಾಡಲು ಭೂಮಿ ಸ್ವಾಧೀನಪಡಿಸಿಕೊಳ್ಳಿ ಹಾಗೂ ಕಾರ್ಯಯೋಜನೆಯನ್ನು ಅನುಷ್ಠಾನಕ್ಕೆ ತರುವಂತೆ ರಾಜ್ಯ ಸರ್ಕಾರ ಹಾಗೂ ಬಿಡಿಎಗೆ ಸುಪ್ರೀಂ ಕೋರ್ಟ್​ ನಿರ್ದೇಶನ ನೀಡಿದೆ.‌

ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಸ್.​ ಅಬ್ದುಲ್​ ನಜೀರ್​ ಹಾಗೂ ಸಂಜೀವ್​ ಖನ್ನಾ ನೇತೃತ್ವದ ಪೀಠ ಈ ನಿರ್ದೇಶನ ನೀಡಿದೆ.

ಕೋರ್ಟ್ಗೆ ಪ್ರತಿಕ್ರಿಯೆ ನೀಡಿದ ರಾಜ್ಯ ಸರ್ಕಾರ, ಮಹಾನಗರಿ ಬೆಂಗಳೂರಿನ ಬೆಳವಣಿಗೆಯ ದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ನಗರವನ್ನು ಸುತ್ತುವರೆಯುವಂತಹ ಪೆರಿಫೆರಲ್​ ರಿಂಗ್​ ರೋಡ್​ನ ಅವಶ್ಯಕತೆ ಇದೆ. ಈ ಪ್ರಸ್ತಾವನೆಯನ್ನು ಬಿಡಿಎ ಮೊದಲ ಬಾರಿಗೆ 2006ರ ನವೆಂಬರ್​ 27ರಂದು ಸಲ್ಲಿಸಿತ್ತು ಎಂದು ಹೇಳಿದೆ.

ಬೆಂಗಳೂರಿನ ಭೌಗೋಳಿಕ ವಿಸ್ತೀರ್ಣ 2196 ಚದರ ಕಿಲೋಮೀಟರ್​ ಆಗಿದೆ. 2019ರ ವೇಳೆಗೆ ವಾಹನಗಳ ಸಂಖ್ಯೆ 80 ಲಕ್ಷಕ್ಕಿಂತ ಹೆಚ್ಚಾಗಿದೆ. ಬೆಂಗಳೂರು ರಾಜ್ಯ ರಾಜಧಾನಿಯಾಗಿರೋದ್ರಿಂದ ರಾಜ್ಯದ ವಿವಿಧ ಭಾಗಗಳಿಂದ ಹಾಗೂ ಹೊರರಾಜ್ಯಗಳಿಂದ ಪ್ರತಿದಿನ ಸಾವಿರಾರು ವಾಹನಗಳು ಬರುತ್ತವೆ. ರಸ್ತೆಗಳಲ್ಲಿ ಅಗಾಧವಾದ ದಟ್ಟಣೆ ಇರುತ್ತದೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆಯು ಅತಿಯಾದ ಒತ್ತಡದಲ್ಲಿದೆ ಎಂದು ಹೇಳಲಾಗಿದೆ.

ಪೆರಿಫೆರಲ್​ ರಿಂಗ್​ರೋಡ್​​ ರಸ್ತೆಗಳಲ್ಲಿನ ಒತ್ತಡ ಹಾಗೂ ದಟ್ಟಣೆಯನ್ನು ಅತಿಯಾಗಿ ಕಡಿಮೆ ಮಾಡುತ್ತದೆ. ಪೆರಿಫೆರಲ್​ ರಸ್ತೆ ನಿರ್ಮಾಣದ ಯೋಜನೆಯನ್ನು ಕಾರ್ಯಗತಗೊಳಿಸಲು ಉತ್ಸುಕರಾಗಿದ್ದೇವೆ ಎಂದು ರಾಜ್ಯ ಸರ್ಕಾರ ಹೇಳಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...