ಛತ್ತೀಸಗಢದ ಸುರ್ಗುಜಾ ಜಿಲ್ಲೆಯ ಸೀತಾಪುರ ಗ್ರಾಮದಲ್ಲಿ ತುಂಡು ಭೂಮಿಗಾಗಿ ದಶಕಗಳಿಂದ ನಡೆಯುತ್ತಿದ್ದ ಹೋರಾಟಕ್ಕೆ ಸುಪ್ರೀಂ ಕೋರ್ಟ್ ಕೊನೆಗೂ ತೆರೆ ಎಳೆದಿದೆ. 1963ರಲ್ಲಿ 100 ರೂಪಾಯಿಗೆ ಖರೀದಿ ಮಾಡಲಾಗಿದ್ದ ಸಣ್ಣ ಪ್ರದೇಶವು ದಶಕಗಳಿಂದ ವಿವಾದದ ಕೇಂದ್ರ ಬಿಂದುವಾಗಿತ್ತು.
ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ, ನ್ಯಾ. ಎ.ಎಸ್. ಬೋಪಣ್ಣ ಹಾಗೂ ಹೃಷಿಕೇಶ್ ರಾಯ್ ನೇತೃತ್ವದ ತ್ರಿಸದಸ್ಯ ಪೀಠ ಅರ್ಜಿದಾರ ವಿರೇಂದ್ರ ಕುಮಾರ್ ಸಿಂಗ್ರ ತಾಳ್ಮೆಗೆ ಮೆಚ್ಚುಗೆ ಸೂಚಿಸಿದೆ. ಸಣ್ಣ ಭೂಮಿಗಾಗಿ ದಶಕಗಳಿಂದ ಹೋರಾಟ ಮಾಡುತ್ತಿರುವ ವಿರೇಂದ್ರ ಕುಮಾರ್ ಸಿಂಗ್ ಮೇಲೆ ಕೋರ್ಟ್ ಸಮಯ ವ್ಯರ್ಥ ಮಾಡಿದ್ದರ ಹಿನ್ನೆಲೆ ದಂಡ ವಿಧಿಸುವ ಸಾಧ್ಯತೆಯೂ ಇತ್ತು. ಆದರೂ ಸಹ ತಾಳ್ಮೆಯಿಂದ ಇಷ್ಟು ದಿನಗಳ ಕಾಲ ಹೋರಾಟ ಮಾಡಿದ್ದಾರೆ ಎಂದು ಹೇಳಿದೆ.
ಐಐಟಿ ಕ್ಯಾಂಪಸ್ನಲ್ಲಿ ಸುಟ್ಟು ಕರಕಲಾದ ಮೃತದೇಹ ಪತ್ತೆ
ಈ ಮೊದಲು ಟ್ರಯಲ್ ಕೋರ್ಟ್ನಲ್ಲಿ ವಿರೇಂದ್ರ ಕುಮಾರ್ ಸಿಂಗ್ ಜಾಗ ವಿವಾದ ಸಂಬಂಧ ನ್ಯಾಯಕ್ಕೆ ಆಗ್ರಹಿಸಿ ಅರ್ಜಿ ಸಲ್ಲಿಸಿದ್ದರು. ವಿರೇಂದ್ರ ಕುಮಾರ್ ಸಿಂಗ್ ಹೇಳುವ ಪ್ರಕಾರ ಇವರು ಪರಶುರಾಮ್ ಎಂಬವರ ಬಳಿ 1963 ಮಾರ್ಚ್ 19ನೇ ತಾರೀಖಿನಂದು ನೂರು ರೂಪಾಯಿಗಳನ್ನ ನೀಡಿ 0.287 ಹೆಕ್ಟೇರ್ ಜಾಗವನ್ನ ಖರೀದಿ ಮಾಡಿದ್ದರು.
ಆದರೆ ಪರಶುರಾಮ್ 1979 ಜೂನ್ 22ರಂದು ಇದೇ ಜಾಗವನ್ನ ಇಂದ್ರಜೀತ್ ಸಿಂಗ್ ಬೇಡಿಗೆ ಮಾರಾಟ ಮಾಡಿದ್ದಾರೆ. ಅಲ್ಲದೇ ಸರ್ಕಾರಿ ದಾಖಲೆಗಳಲ್ಲಿ ಬೇಡಿ ಹೆಸರನ್ನ ನಮೂದಿಸಲಾಗಿದೆ. ಆದರೆ ಬೇಡಿ ನೀಡಿರುವ ಮಾಹಿತಿ ಪ್ರಕಾರ ಅವರು 1979ರ ಫೆಬ್ರವರಿ 26ರಂದು ಪರಶುರಾಮ್, ಅವರ ಸಹೋದರ ಹಾಗೂ ಅವರ ತಾಯಿಯಿಂದ 700 ರೂಪಾಯಿಗೆ ಈ ಜಾಗ ಖರೀದಿ ಮಾಡಿದ್ದೇನೆ ಹಾಗೂ ಈ ಜಾಗ ಎಂದಿಗೂ ವಿರೇಂದ್ರ ಕುಮಾರ್ ಸಿಂಗ್ರದ್ದಾಗಿರಲಿಲ್ಲ ಎಂದು ಹೇಳಿದ್ದರು.
ಮಗುವಿನ ನ್ಯಾಪ್ಪಿ ತೆಗೆಯುವ ಮುನ್ನ ಬೇಕಂತೆ ಅನುಮತಿ…!
ವಾದ ವಿವಾದಗಳನ್ನ ಆಲಿಸಿದ ಟ್ರಯಲ್ ಕೋರ್ಟ್ ವಿರೇಂದ್ರ ಕುಮಾರ್ ಸಿಂಗ್ರ ವಾದಕ್ಕೆ ಪೂರಕ ಎನಿಸುವ ಯಾವುದೇ ದಾಖಲೆ ಸಿಗದ ಕಾರಣ ಅವರ ಅರ್ಜಿಯನ್ನ ತಳ್ಳಿ ಹಾಕಿತ್ತು. ಇದಾದ ಬಳಿಕ ವಿಚಾರಣಾ ನ್ಯಾಯಾಲದ ತೀರ್ಪನ್ನ ಪ್ರಶ್ನಿಸಿ ಮೇಲಿನ ಹಂತದ ಕೋರ್ಟ್ ಮೆಟ್ಟಿಲೇರಿದ್ದ ವಿರೇಂದ್ರ ಕುಮಾರ್ ಸಿಂಗ್ಗೆ ಅಲ್ಲೂ ಮುಖಭಂಗವಾಗಿತ್ತು.
ಕೊನೆಗೆ ಹೈಕೋರ್ಟ್ ಮೆಟ್ಟಿಲೇರಿದ್ದ ಸಿಂಗ್ಗೆ ಅಲ್ಲಿ ಕೂಡ ಅವರ ಪರವಾಗಿ ತೀರ್ಪು ಸಿಕ್ಕಿರಲಿಲ್ಲ. 1995 ಮೇ 30ರಿಂದ ಕಾನೂನು ಹೋರಾಟ ಆರಂಭಿಸಿದ್ದ ಸಿಂಗ್ ಸುಪ್ರೀಂ ಕೋರ್ಟ್ಗೆ ಮೊರೆ ಹೋಗಿದ್ದರು. ಗುರುವಾರ ಈ ಸಂಬಂಧ ತೀರ್ಪು ಪ್ರಕಟಿಸಿದ ಸುಪ್ರೀಂ ಕೋರ್ಟ್ ವಿರೇಂದ್ರ ಕುಮಾರ್ ಸಿಂಗ್ ಈ ಭೂಮಿಯ ಮಾಲೀಕ ಅನ್ನೋದಕ್ಕೆ ಯಾವುದೇ ಸಾಕ್ಷ್ಯಾಧಾರ ಇಲ್ಲದ ಕಾರಣ ಹೈಕೋರ್ಟ್ ಆದೇಶವನ್ನ ತಳ್ಳಿ ಹಾಕಲು ಸಾಧ್ಯವಿಲ್ಲ ಎಂದು ಹೇಳಿದೆ.