alex Certify ಎಸ್‌ಎಂಎಸ್‌ ಮೂಲಕ ನಿಮ್ಮ SBI ಕಾರ್ಡ್‌ ಬ್ಲಾಕ್ ಮಾಡುವುದು ಹೇಗೆ…? ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಸ್‌ಎಂಎಸ್‌ ಮೂಲಕ ನಿಮ್ಮ SBI ಕಾರ್ಡ್‌ ಬ್ಲಾಕ್ ಮಾಡುವುದು ಹೇಗೆ…? ಇಲ್ಲಿದೆ ಮಾಹಿತಿ

ಕ್ರೆಡಿಟ್ ಕಾರ್ಡ್‌ಗಳು ಕಳುವಾದಾಗ ಅವುಗಳನ್ನು ದುರ್ಬಳಕೆ ಮಾಡಿಕೊಳ್ಳುವ ಅಪಾಯದ ಭೀತಿ ಎಲ್ಲರಲ್ಲೂ ಇದ್ದೇ ಇರುತ್ತದೆ. ಇಂಥ ಪರಿಸ್ಥಿತಿಗಳಲ್ಲಿ ಕೂಡಲೇ ಕಾಡ್ ಬ್ಲಾಕ್ ಮಾಡುವುದು ಹೇಗೆಂದು ಸ್ಟೇಟ್ ಬ್ಯಾಂಕ್ ಜಾಗೃತಿ ಮೂಡಿಸಲು ಮುಂದಾಗಿದೆ.

ಎಸ್‌ಎಂಎಸ್ ಮೂಲಕ ಎಸ್‌ಬಿಐ ಕಾರ್ಡ್ ಬ್ಲಾಕ್ ಮಾಡುವುದು ಹೇಗೆ ?

ನಿಮ್ಮ ಕಾರ್ಡ್ ಕಳುವಾಗಿದ್ದಲ್ಲಿ ಅಥವಾ ನೀವು ಮಾಡದೇ ಇರುವ ವ್ಯವಹಾರದ ಅಲರ್ಟ್ ನಿಮಗೆ ಬಂದಲ್ಲಿ ನೀವು ಕೂಡಲೇ ಕಾರ್ಡ್ ಬ್ಲಾಕ್ ಮಾಡಬಹುದಾಗಿದೆ.

SBI ಗ್ರಾಹಕರಿಗೆ ಮಹತ್ವದ ಸುದ್ದಿ..! ನಿಯಮ ಬದಲಿಸಿದ ಬ್ಯಾಂಕ್

ನಿಮ್ಮ ಕಾರ್ಡ್ ಬ್ಲಾಕ್ ಮಾಡಲು BLOCK ನಿಮ್ಮ ಎಸ್‌ಬಿಐ ಕ್ರೆಡಿಟ್ ಕಾರ್ಡ್ ಸಂಖ್ಯೆಯ ಕೊನೆಯ 4 ಅಂಕಿಗಳು ಟೈಪ್ ಮಾಡಿ 5676791ಕ್ಕೆ ಸೆಂಡ್ ಮಾಡಿ. ಅಧವಾ ಎಸ್‌ಬಿಐ ಸಹಾಯವಾಣಿ 18601801290/39020202 ಸಂಖ್ಯೆಗೆ ಸ್ಥಳೀಯ ಎಸ್‌ಟಿಡಿ ಕೋಡ್ ಸೇರಿಸಿ ಡಯಲ್ ಮಾಡಿ.

ನಿಮ್ಮ ಮನವಿಯಂತೆ ಕಾರ್ಡ್ ಬ್ಲಾಕ್ ಆದ ಕೂಡಲೇ ಖಾತ್ರಿಯ ಸಂದೇಶವು ನಿಮ್ಮ ನೋಂದಾಯಿತ ದೂರವಾಣಿ ಸಂಖ್ಯೆಗೆ ಎಸ್‌ಎಂಎಸ್‌ ರೂಪದಲ್ಲಿ ಹಾಗೂ ಇ-ಮೇಲ್‌ನಲ್ಲಿ ತಲುಪಲಿದೆ.

ಒಂದು ವೇಳೆ ನಿಮಗೆ ಖಾತ್ರಿ ಸಂದೇಶ ಬರದೇ ಇದ್ದಲ್ಲಿ ಎಸ್‌ಬಿಐ ಕಾರ್ಡ್ ಸಹಾಯವಾಣಿ 39 02 02 02 (ಸ್ಥಳೀಯ ಕೋಡ್‌ನೊಂದಿಗೆ) ಅಥವಾ 1860 180 1290 ಕರೆ ಮಾಡಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...