alex Certify SBI ಕಾರ್ಡ್ ನಲ್ಲಿ ಹಬ್ಬದ ಶಾಪಿಂಗ್ ಮಾಡಿದ್ರೆ ಸಿಗಲಿದೆ ಭರ್ಜರಿ ‌ʼಕ್ಯಾಶ್‌ ಬ್ಯಾಕ್ʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SBI ಕಾರ್ಡ್ ನಲ್ಲಿ ಹಬ್ಬದ ಶಾಪಿಂಗ್ ಮಾಡಿದ್ರೆ ಸಿಗಲಿದೆ ಭರ್ಜರಿ ‌ʼಕ್ಯಾಶ್‌ ಬ್ಯಾಕ್ʼ

ಸದ್ಯ ಎಲ್ಲ ಇ-ಕಾಮರ್ಸ್ ಕಂಪನಿಗಳು ಹಬ್ಬದ ಕೊಡುಗೆ ನೀಡುವ ತಯಾರಿಯಲ್ಲಿವೆ. ಗ್ರಾಹಕರು ಖರೀದಿ ಉತ್ಸಾಹದಲ್ಲಿದ್ದಾರೆ. ಗ್ರಾಹಕರಿಗೆ ಬ್ಯಾಂಕ್ ಗಳು ಮತ್ತಷ್ಟು ಕೊಡುಗೆ ನೀಡಲು ಮುಂದಾಗಿವೆ. ಈ ಸಾಲಿನಲ್ಲಿ ಎಸ್.ಬಿ.ಐ. ಕೂಡ ಸೇರಿದೆ. ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಎಸ್.ಬಿ.ಐ. ತನ್ನ ಗ್ರಾಹಕರಿಗೆ ವಿಶೇಷ ಕೊಡುಗೆ ನೀಡ್ತಿದೆ.

ಎಸ್.ಬಿ.ಐ. ಕಾರ್ಡ್, ಗ್ರಾಹಕರಿಗೆ ಮೂರು ದಿನಗಳ ಹಬ್ಬದ ಕ್ಯಾಶ್‌ ಬ್ಯಾಕ್ ಕೊಡುಗೆಯನ್ನು ಘೋಷಿಸಿದೆ. ಅಕ್ಟೋಬರ್ 3 ರಿಂದ ಎಲ್ಲಾ ದೇಶೀಯ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ ಗಳಲ್ಲಿ ಆನ್‌ಲೈನ್ ಶಾಪಿಂಗ್‌ ಮಾಡಿದ್ರೆ, ಕಾರ್ಡ್ ದಾರರಿಗೆ ಬ್ಯಾಂಕ್ ಕ್ಯಾಶ್‌ ಬ್ಯಾಂಕ್ ಕೊಡುಗೆ ನೀಡ್ತಿದೆ.

ʼಮೆಗಾ ಶಾಪಿಂಗ್ ಫೆಸ್ಟಿವಲ್ ಆಫರ್ ದಮ್ದಾರ್ ದಸ್’ ಅಕ್ಟೋಬರ್ 3 ರಿಂದ ಆರಂಭವಾಗಲಿದೆ ಎಂದು ಬ್ಯಾಂಕ್ ಹೇಳಿದೆ. ಇದು ಒಂದು ಅನನ್ಯ ಆನ್‌ಲೈನ್ ಶಾಪಿಂಗ್ ಹಬ್ಬವಾಗಿದೆ. ಎಸ್.ಬಿ.ಐ. ಕಾರ್ಡ್ ಹೊಂದಿರುವ ಗ್ರಾಹಕರು, ಯಾವುದೇ ದೇಶೀಯ ಇ-ಕಾಮರ್ಸ್ ವೆಬ್‌ಸೈಟ್‌ನಲ್ಲಿ ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡಬಹುದು.

ಈ ಕ್ಯಾಶ್‌ ಬ್ಯಾಕ್, ಮೊಬೈಲ್ ಫೋನ್‌, ಪರಿಕರಗಳು, ಟಿವಿ ಮತ್ತು ದೊಡ್ಡ ಉಪಕರಣಗಳು, ಲ್ಯಾಪ್‌ಟಾಪ್ ಮತ್ತು ಟ್ಯಾಬ್ಲೆಟ್, ಹೋಮ್ ಫರ್ನಿಶಿಂಗ್, ಕಿಚನ್ ಉಪಕರಣಗಳು, ಫ್ಯಾಷನ್ ಮತ್ತು ಜೀವನಶೈಲಿ, ಕ್ರೀಡೆ ಮತ್ತು ಫಿಟ್‌ನೆಸ್ ಇತ್ಯಾದಿ ಉತ್ಪನ್ನಗಳ ಖರೀದಿಯ ಮೇಲೆ ಸಿಗಲಿದೆ. ವಿಮೆ, ಪ್ರಯಾಣ, ವಾಲೆಟ್, ಆಭರಣ, ಶಿಕ್ಷಣ, ಆನ್‌ಲೈನ್ ವೆಚ್ಚಗಳಿಗೆ ಈ ಕೊಡುಗೆ ಅನ್ವಯಿಸುವುದಿಲ್ಲ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...