alex Certify ರಿತೇಶ್ ನಿಜಕ್ಕೂ ರಾಖಿ ಪತಿಯೇ…? ಶುರುವಾಗಿದೆ ಈ ಅನುಮಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಿತೇಶ್ ನಿಜಕ್ಕೂ ರಾಖಿ ಪತಿಯೇ…? ಶುರುವಾಗಿದೆ ಈ ಅನುಮಾನ

ಬಿಗ್ ಬಾಸ್‌ನ 15ನೇ ಸೀಸನ್‌ನಲ್ಲಿ ವೈಲ್ಡ್‌ ಕಾರ್ಡ್ ಎಂಟ್ರಿ ಮೂಲಕ ಮನೆಗೆ ಪ್ರವೇಶಿಸಿರುವ ರಾಖಿ ಸಾವಂತ್‌ ತನ್ನ ಪತಿ ರಿತೇಶ್‌ನನ್ನು ಪರಿಚಯಿಸಿ ಭಾರೀ ಸುದ್ದಿಯಲ್ಲಿದ್ದಾಳೆ.

ತನ್ನ ಪತಿಯ ಬಗ್ಗೆ ಮಾತನಾಡುವ ವೇಳೆ ಥರಾವರಿ ಎಕ್ಸ್‌ಪ್ರೆಶನ್ ಎಲ್ಲ ಕೊಟ್ಟು ನೋಡುಗರಿಗೆ ಮನರಂಜನೆ ಕೊಟ್ಟ ರಾಖಿ, ಆತನಿಗೆ ವಿಚ್ಛೇದನ ನೀಡುವ ಆಲೋಚನೆಯನ್ನೂ ಹಿಂದೊಮ್ಮೆ ಮಾಡಿದ್ದಾಗಿ ಹೇಳಿಕೊಂಡಿದ್ದಾಳೆ. ಬಹಳಷ್ಟು ಸಂದರ್ಶನಗಳಲ್ಲಿ ರಿತೇಶ್‌ ಬಗ್ಗೆ ಮಾತನಾಡಿದ್ದ ರಾಖಿ, ಆತನನ್ನು ಮೊದಲ ಬಾರಿಗೆ ವಾಟ್ಸಾಪ್‌ನಲ್ಲಿ ಭೇಟಿಯಾಗಿದ್ದಾಗಿ ಹೇಳಿಕೊಂಡಿದ್ದಾಳೆ.

ಬಿಹಾರ ಮೂಲದ ರಿತೇಶ್ ಬೆಲ್ಜಿಯಂನಲ್ಲಿ ಕೆಲಸ ಮಾಡುತ್ತಿರುವುದಾಗಿ ಸಲ್ಮಾನ್ ಖಾನ್‌ ಜೊತೆಗೆ ಹೇಳಿಕೊಂಡಿದ್ದರು. ವೃತ್ತಿಪರ ಕಾರಣಗಳಿಂದಾಗಿ ತನ್ನ ಮದುವೆಯನ್ನು ಗುಟ್ಟಾಗಿ ಇಡಬೇಕಾಗಿ ಬಂದಿತ್ತು ಎಂದು ಇದೇ ವೇಳೆ ರಿತೇಶ್ ಹೇಳಿಕೊಂಡಿದ್ದರು. ಇದೇ ವೇಳೆ, ಶೋನಲ್ಲಿ ಪತಿಯ ಪಾತ್ರ ನಿರ್ವಹಿಸಲು ಆತನನ್ನು ಬಾಡಿಗೆ ತೆಗೆದುಕೊಂಡಿರುವೆಯಾ ಎಂದು ಸಲ್ಮಾನ್ ಕೇಳಿದ್ದಕ್ಕೆ ಉತ್ತರಿಸಿದ್ದ ರಾಖಿ, “ಇಲ್ಲ ಇಲ್ಲ, ಆತ ನನ್ನ ಪತಿ ಪರಮೇಶ್ವರ, ನನ್ನ ಏಕೈಕ ಪತಿ,” ಎಂದಿದ್ದರು.

ಆದರೆ ರಿತೇಶ್ ರಾಖಿಯ ಅಸಲಿ ಪತಿ ಎಂದು ನಂಬಲು ಹಿಂದೇಟು ಹಾಕಿದ್ದಾರೆ. ಈ ಸಂಬಂಧವನ್ನು ಪ್ರಶ್ನಿಸಿದ ಜನ, ಬಹುಶಃ ರಾಖಿ ತನ್ನ ಲಾಭಕ್ಕಾಗಿ ಆತನನ್ನು ಬಳಸಿಕೊಳ್ಳುತ್ತಿರಬಹುದು ಎಂದು ಸಂಶಯ ವ್ಯಕ್ತಪಡಿಸಿದ್ದಾರೆ. ಆದರೆ ಈ ವಿಚಾರವಾಗಿ ನಿಜವಾದ ಅಂಶವೇನೆಂದು ತಿಳಿದ ನೆಟ್ಟಿಗರಿಗೆ ಶಾಕ್ ಆಗಿದೆ.

ವಾಸ್ತವದಲ್ಲಿ ಬಿಗ್ ಬಾಸ್‌ನ ಕ್ಯಾಮೆರಾಮನ್ ಆಗಿರುವ ರಿತೇಶ್‌ ರಾಖಿಯ ನಿಜವಾದ ಪತಿಯಲ್ಲ ಎಂದು ’ದಿ ರಿಯಲ್ ಖಬ್ರಿ’ ಪೇಜ್‌ನಲ್ಲಿ ತಿಳಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...