alex Certify ರಾಜ್ಯದ ಎಲ್ಲ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ‘ಸಸ್ಯ ಶ್ಯಾಮಲಾ’ ಜಾರಿಗೆ ಮಾರ್ಗಸೂಚಿ ಪ್ರಕಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜ್ಯದ ಎಲ್ಲ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ‘ಸಸ್ಯ ಶ್ಯಾಮಲಾ’ ಜಾರಿಗೆ ಮಾರ್ಗಸೂಚಿ ಪ್ರಕಟ

ಬೆಂಗಳೂರು :ರಾಜ್ಯದ ಎಲ್ಲಾ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ 2023-24ನೇ ಸಾಲಿನ ಆಯವ್ಯಯದಲ್ಲಿ ಘೋಷಿತ “ಸಸ್ಯ ಶ್ಯಾಮಲ” ಕಾರ್ಯಕ್ರಮವನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಬಗ್ಗೆ ರಾಜ್ಯ ಸರ್ಕಾರವು ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

2023-24ನೇ ಸಾಲಿನ ಆಯವ್ಯಯ ಪುಸ್ತಕದ ಕಂಡಿಕೆ ’95’ ರಲ್ಲಿ ಶಿಕ್ಷಣ ಇಲಾಖೆ ಮತ್ತು ಅರಣ್ಯ ಇಲಾಖೆಯ ಸಹಭಾಗಿತ್ವದಲ್ಲಿ ಸ್ಥಳಾವಕಾಶವುಳ್ಳ ಶಾಲೆಗಳ ಸುತ್ತಮುತ್ತ ಒಂದು ವರ್ಷದ ಕಾಲಾವಧಿಯಲ್ಲಿ 50 ಲಕ್ಷ ಸಸಿಗಳನ್ನು ನಡುವ ವಿನೂತನ “ಸಸ್ಯ ಶ್ಯಾಮಲ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು” ಎಂದು ಸನ್ಮಾನ್ಯ ಮುಖ್ಯ ಮಂತ್ರಿಗಳು ಘೋಷಿಸಿರುತ್ತಾರೆ.

ಈ ಸಂಬಂಧ ದಿನಾಂಕ:19.08.2023ರಂದು “ಸಸ್ಯ ಶ್ಯಾಮಲ” ಕಾರ್ಯಕ್ರಮ ಅನುಷ್ಠಾನ ಕುರಿತು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ ಹಾಗೂ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಇವರುಗಳ ಜಂಟಿ ಅಧ್ಯಕ್ಷತೆಯಲ್ಲಿ ನಡೆದಸಭೆಯಲ್ಲಿ ಚರ್ಚಿಸಿ, ತೀರ್ಮಾನಿಸಿದಂತೆ ಸದರಿ ಕಾರ್ಯಕ್ರಮವನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಕೆಳಕಂಡ ಕ್ರಮಗಳನ್ನು ಕೈಗೊಳ್ಳುವಂತ ರಾಜ್ಯದ ಎಲ್ಲಾ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಮುಖ್ಯಸ್ಥರುಗಳಿಗೆ ಹಾಗೂ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ಈ ಮೂಲಕ ಸೂಚಿಸಲಾಗಿದೆ.

  1. “ಸಸ್ಯ ಶ್ಯಾಮಲ” ಕಾರ್ಯಕ್ರಮ ಅನುಷ್ಠಾನಕ್ಕಾಗಿ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ, ಇಲಾಖೆ ವತಿಯಿಂದ ಪರಿಸರಕ್ಕೆ ಉಪಯುಕ್ತವಾಗುವಂತ ಸಸಿಗಳನ್ನು ಉಚಿತವಾಗಿ ಒದಗಿಸಲಾಗುವುದು.
  2. ಅರಣ್ಯ ಇಲಾಖೆಯ ವಿಭಾಗದ ಕಛೇರಿಗಳಿಂದ ಒದಗಿಸಲಾಗುವ ವಿವಿಧ ಬಗೆಯ ಸಸಿಗಳನ್ನು, ಆಯಾ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಸುತ್ತಮುತ್ತ ಇರುವ ಸ್ಥಳಗಳಲ್ಲಿ ಹಾಗೂ ಸದರಿ ಶಾಲಾ ಕಾಲೇಜುಗಳಿಗೆ ಸೇರಿದ ಜಾಗಗಳಲ್ಲಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ಶ್ರಮದಾನದ ಮೂಲಕ ನೆಟ್ಟು ಪೋಷಿಸಿ ಆರೈಕ ಮಾಡಲು ಸೂಕ್ತ ಕ್ರಮಗಳನ್ನು ವಹಿಸತಕ್ಕದ್ದು,
  3. ಸರ್ಕಾರಿ ಶಾಲಾ /ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಸದರಿ ಸಸಿಗಳನ್ನು ನಡುವ ಮತ್ತು ಪೋಷಿಸುವ ಕಾರ್ಯನಿರ್ವಹಿಸಬೇಕಿದೆ ಹಾಗೂ ಇವರ ಜೊತೆ ಶಿಕ್ಷಕರು, ಪೋಷಕರು, ಎಸ್‌.ಡಿ.ಎಂ.ಸಿ ಸದಸ್ಯರು/ಸ್ಥಳೀಯ ಸಂಸ್ಥೆ ಜನಪ್ರತಿನಿಧಿಗಳು ಸ್ಥಳೀಯ ಸಂಸ್ಥೆಗಳು, ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯತಿಯ ಗ್ರಾಮ ಅರಣ್ಯ ಸಮಿತಿ ಸಹಕಾರ ಪಡೆಯುವುದು.
  4. ಶಾಲೆಗಳಲ್ಲಿ ಸಸಿ ನೆಡುವ ಈ ಕಾರ್ಯಕ್ರಮದಡಿ ಜಿಲ್ಲಾ ಹಂತದಲ್ಲಿ ಶಿಕ್ಷಣ ಇಲಾಖಾ ವತಿಯಿಂದ ಉಪನಿರ್ದೇಶಕರು (ಆಡಳಿತ) ರವರು ಸದರಿ ಕಾರ್ಯಕ್ರಮದ ಉಸ್ತುವಾರಿ ವಹಿಸುವುದು. ಅರಣ್ಯ ಇಲಾಖೆ ವತಿಯಿಂದ ಜಿಲ್ಲಾ ಹಂತದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಇವರು ಸದರಿ ಕಾರ್ಯಕ್ರಮದ ಉಸ್ತುವಾರಿ ವಹಿಸುವುದು. ತಾಲ್ಲೂಕು ಹಂತದಲ್ಲಿ ಶಿಕ್ಷಣ ಇಲಾಖಾ ವತಿಯಿಂದ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಓ)ಗಳು ನೋಡಲ್ ಅಧಿಕಾರಿಗಳಾಗಿ ಮತ್ತು ಅರಣ್ಯ ಇಲಾಖೆಯ ವತಿಯಿಂದ ಸಾಮಾಜಿಕ ಅರಣ್ಯ ವಿಭಾಗಗಳ ತಾಲ್ಲೂಕು ಮಟ್ಟದ ವಲಯ ಅರಣ್ಯಾಧಿಕಾರಿಗಳು ಕಾರ್ಯಕ್ರಮದ ನೋಡಲ್ ಅಧಿಕಾರಿಯಾಗಿ ಕಾರ್ಯನಿರ್ವಹಿಸುವುದು.
  5. ಅರಣ್ಯ ಇಲಾಖೆಯ ಸಲಹೆಯಂತೆ ಸಸಿಗಳನ್ನು ನೆಡಲು ಎರಡು ಸಸಿಗಳ ನಡುವೆ ಕನಿಷ್ಠ 5 ಮೀಟರ್ ಗಳಷ್ಟು ಅಂತರ ಇರಬೇಕೆಂದು ತಿಳಿಸಲಾಗಿದೆ. ಅಲ್ಲದೇ ಸಸಿಯನ್ನು ನಡುವ ಪೂರ್ವದಲ್ಲಿ, ಅದು ನಂತರ ಮುಂದಿನ ದಿನಗಳಲ್ಲಿ ಮರವಾಗಿ ಬೆಳೆದಾಗ ಯಾವುದೇ ಕಟ್ಟಡ | ಆವರಣ ಗೋಡೆಗೆ ಹಾನಿ ಮಾಡದೇ ಇರದ ಹಾಗೆ ಸದರಿ ಕಟ್ಟಡ ಮತ್ತು ಆವರಣ ಗೋಡೆಯ ನಡುವ 5 ಮೀಟರ್ ಅಂತರ ಇರುವುದನ್ನು ಖಚಿತಪಡಿಸಿಕೊಳ್ಳುವುದು. ಈ ಯೋಜನೆಯಡಿಯಲ್ಲಿ ಸಸಿಗಳನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ನಾಟಿ ಮಾಡುವುದುನ್ನು ತಪ್ಪಿಸಲು ಶಾಲಾ ಆವರಣದಲ್ಲಿ ಕಟ್ಟಡ ಕಾಮಗಾರಿಗಾಗಿ ಗುರುತಿಸಲ್ಪಟ್ಟ ಸ್ಥಳದಲ್ಲಿ ಸಸಿಗಳನ್ನು ನೆಡದಿರುವಂತ ಕ್ರಮವಹಿಸುವುದು. ಸದರಿ ಅಂಶವನ್ನು ಗಮನಿಸಿ ಶಾಲಾವಾರು ಅವಶ್ಯವಿರುವ ಸಸಿಗಳ ಸಂಖ್ಯೆಯನ್ನು ನಿರ್ಧರಿಸಿ ಮತ್ತು ಶಾಲೆವಾರು ಸಸಿಗಳ ಅಗತ್ಯದ ವಿವರವನ್ನು ಸಾಮಾಜಿಕ ಅರಣ್ಯ ವಿಭಾಗದ ವಲಯ ಅರಣ್ಯಾಧಿಕಾರಿಗಳಿಗೆ ಸಲ್ಲಿಸಬೇಕು.(ಅನುಬಂಧ-1 ರಲ್ಲಿನ ನಮೂನೆಗಳಂತ) ನಂತರ ವಲಯ ಅರಣ್ಯಾಧಿಕಾರಿಗಳು ತಾಲ್ಲೂಕಿನ ಯಾವುದೇ ನರ್ಸರಿಗಳಿಂದ, ಸಾಮಾಜಿಕ ಅರಣ್ಯ / ಪ್ರಾದೇಶಿಕ / ವನ್ಯಜೀವಿ ವಿಭಾಗದ ನರ್ಸರಿಗಳಿಂದ ಸಸಿಗಳನ್ನು ಹಂಚಿಕೆ ಮಾಡಬೇಕು. ಪ್ರಾದೇಶಿಕ ಮತ್ತು ವನ್ಯಜೀವಿ ಘಟಕಗಗಳಿಂದ ಸಸಿಗಳ ಲಭ್ಯತೆಯ ಮಾಹಿತಿಯನ್ನು ಕ್ರೂಡೀಕರಿಸುವುದು ಅರಣ್ಯ ಇಲಾಖೆಯ ನೋಡಲ್ ಅಧಿಕಾರಿಗಳ ಜವಾಬ್ದಾರಿಯಾಗಿರುತ್ತದೆ.
  6. ಜಿಲ್ಲಾ ಹಂತದಲ್ಲಿ ಉಪನಿರ್ದೇಶಕರು (ಆಡಳಿತ), ಇವರುಗಳು ಎಲ್ಲಾ ಕ್ರೂಢೀಕೃತ ಮಾಹಿತಿಯನ್ನು ಜಿಲ್ಲಾ ಹಂತದ ಅರಣ್ಯಾಧಿಕಾರಿಗಳಿಗೆ ಸಲ್ಲಿಸಲು ಕ್ರಮವಹಿಸುವುದು.

7, ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಅರಣ್ಯಾಧಿಕಾರಿಗಳು ನಿರ್ಧರಿಸುವ ನರ್ಸರಿಗಳಿಂದ ಸಸಿಗಳನ್ನು ಪಡೆದುಕೊಂಡು ಸ್ವೀಕೃತಿ ನೀಡಿ ಸಂಬಂಧಪಟ್ಟ, ಶಾಲೆಗಳಿಗೆ ಸಾಗಾಣಿಕೆ ಮಾಡುವುದು. ಸದರಿ ಸಾಗಾಣಿಕೆಗೆ ತಗಲುವ ವೆಚ್ಚದ ಮೊತ್ತಕ್ಕೆ ಆರ್ಥಿಕ ಇಲಾಖೆಯಿಂದ ಬಿಡುಗಡೆ ಮಾಡಲು ಶಾಲಾ ಶಿಕ್ಷಣ ಇಲಾಖೆಯಿಂದ ಕೋರಿಕ ಸಲ್ಲಿಸಿ ನಂತರ ಸಂಬಂಧಿಸಿದವರಿಗೆ ಬಿಡುಗಡ ಮಾಡಲಾಗುವುದು.

8, ಸದರಿ ಕಾರ್ಯಕ್ರಮದಲ್ಲಿ ಸರ್ಕಾರಿ ಕಿರಿಯ/ ಹಿರಿಯ ಪ್ರಾಥಮಿಕ / ಪ್ರೌಢ ಶಾಲೆ / ಪದವಿ ಪೂರ್ವ ಕಾಲೇಜುಗಳಲ್ಲಿನ 1 ರಿಂದ 12ನೇ ತರಗತಿಗಳ ಮಕ್ಕಳು ಭಾಗವಹಿಸಬೇಕಾಗಿದೆ. ಸದರಿ “ಸಸ್ಯ ಶ್ಯಾಮಲ” ಕಾರ್ಯಕ್ರಮದಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳಲ್ಲಿ ಪರಿಸರ ಪ್ರೇಮ, ಪರಿಸರ ಜಾಗೃತಿ ಮತ್ತು ಅರಣ ಸಂರಕ್ಷಣೆಯ ಕುರಿತು ಕಾಳಜಿಯನ್ನು ಉಂಟುಮಾಡುತ್ತದೆ. ಶಾಲೆಗಳಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಮತ್ತು ಸ್ಥಳಾವಕಾಶದ ಲಭ್ಯತೆಯ ಮೇಲೆ ಸಸಿಗಳನ್ನು ನೆಡುವ ಕಾರ್ಯ ಕೈಗೊಳ್ಳಬೇಕಾಗಿದ.

ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ “ಸಸ್ಯ ಶ್ಯಾಮಲ” ಕಾರ್ಯಕ್ರಮವನ್ನು ಅನುಷ್ಠಾನ ಮಾಡಲು (ಗುಂಡಿಗಳನ್ನು ತೋಡಲು) ಮುಖ್ಯ ಶಿಕ್ಷಕರು, ಪೋಷಕರ, ಎಸ್‌.ಡಿ.ಎಂ.ಸಿ ಸದಸ್ಯರ/ಸ್ಥಳೀಯ ಸಂಸ್ಥೆ ಜನಪ್ರತಿನಿಧಿಗಳ/ ಸ್ವಯಂ ಸೇವಾ ಸಂಸ್ಥೆಗಳ ಹಾಗೂ ಗ್ರಾಮ ಪಂಚಾಯತಿಯ ಗ್ರಾಮ ಅರಣ್ಯ ಸಮಿತಿಯವರ ಸಹಕಾರ ಪಡೆಯುವುದು. ಸದರಿ ಶಾಲೆಯ ಮಕ್ಕಳಿಗೆ ಕೇವಲ ಸಸಿಗಳನ್ನು ನಡುವ ವಹಿಸುವುದು. ಮತ್ತು ನೀರುಣಿಸುವ ಕಾರ್ಯವನ್ನು ಮಾತ್ರ

ಹಿರಿಯ ಪ್ರಾಥಮಿಕ /ಪ್ರೌಢ ಶಾಲೆ/ಪದವಿ ಪೂರ್ವ ಕಾಲೇಜುಗಳಲ್ಲಿ “ಸಸ್ಯ ಶ್ಯಾಮಲ” ಕಾರ್ಯಕ್ರಮವನ್ನು ಅನುಷ್ಠಾನ ಮಾಡಲು ಗುಂಡಿಗಳನ್ನು ತೋಡಲು 6-12 ನೇ ತರಗತಿ ಮಕ್ಕಳಿಗೆ ಶ್ರಮದಾನದ ಮೂಲಕ ಕೈಗೊಳ್ಳಲು ವಹಿಸಬಹುದು. ಜೊತೆಗೆ ಮುಖ್ಯ ಶಿಕ್ಷಕರು, ಪೋಷಕರು, ಎಸ್.ಡಿ.ಎಂ.ಸಿ ಸದಸ್ಯರು/ಸ್ಥಳೀಯ ಸಂಸ್ಥೆ ಜನಪತ್ರಿನಿಧಿಗಳು, ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯಿತಿಯ ಗ್ರಾಮ ಅರಣ್ಯ ಸಮಿತಿಯವರ ಸಹಕಾರ ಪಡೆಯುವುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...